More

    ಹಲ್ಲಿನಲ್ಲಿ ಈ ಸಮಸ್ಯೆಯಿದೆಯೇ? ಹಾಗಾದರೆ ಕರೊನಾ ಇರಬಹುದು ಎಚ್ಚರ!

    ಆಲ್ಬನಿ: ಕರೊನಾ ಸೋಂಕು ಕಾಣಿಸಿಕೊಂಡು ಸುಮಾರು ಒಂದು ವರ್ಷಕ್ಕೂ ಹೆಚ್ಚಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕರೊನಾ ಔಷಧ ಸಿದ್ಧಪಡಿಸಲಾಗುತ್ತಿದೆಯಾದರೂ ಇನ್ನೂ ಸಂಪೂರ್ಣ ಪರಿಣಾಮಕಾರಿ ಔಷಧ ನಮಗೆ ಸಿಕ್ಕಿಲ್ಲ. ಆದರೆ ಬರುಬರುತ್ತಾ ಸೋಂಕಿನ ಲಕ್ಷಣಗಳು ಮಾತ್ರ ಹೆಚ್ಚುತ್ತಲೇ ಇವೆ. ಇದೀಗ ಕರೊನಾಕ್ಕೆ ಮತ್ತೊಂದು ಹೊಸ ಲಕ್ಷಣವೂ ಸೇರ್ಪಡೆಯಾಗಿರುವ ಅನುಮಾನ ವ್ಯಕ್ತವಾಗಿದೆ.

    ಇದನ್ನೂ ಓದಿ: ನಿಖಿಲ್​-ಪ್ರಜ್ವಲ್ ಒಟ್ಟಾಗಿ ಯುದ್ಧಕ್ಕೆ ಹೋಗಲಿ..! ಚಿಕ್ಕಪ್ಪ-ದೊಡ್ಡಪ್ಪನ ಎದುರಲ್ಲೇ ಸವಾಲು

    ನ್ಯೂಯಾರ್ಕ್​ ಮೂಲದ ಫರಾಹ್​ ಖೇಮಿಲಿ(43)ಗೆ ಇತ್ತೀಚೆಗೆ ಸ್ವಲ್ಪ ಹಲ್ಲು ನೋವು ಕಾಣಿಸಿಕೊಂಡಿತ್ತಂತೆ. ಹಲ್ಲನ್ನು ಮುಟ್ಟಿ ನೋಡಿದಾಗ ಅದು ಅಲುಗಾಡುತ್ತಿದ್ದ ಅನುಭವವಾಯಿತಂತೆ. ಚಳಿ ಹೆಚ್ಚಿದ್ದರಿಂದ ಈ ರೀತಿ ಅನುಭವವಾಗುತ್ತಿರಬಹುದು ಎಂದು ಅವರು ಸುಮ್ಮನಾಗಿದ್ದಾರೆ. ಮರುದಿನ ಮುಂಜಾನೆ ಎದ್ದಾಗ ಅವರ ಹಲ್ಲು ಕಿತ್ತು ಬಿದ್ದಿದೆ. ಆದರೆ ವಸಡಿನಲ್ಲಿ ನೋವಾಗಲೀ ಅಥವಾ ರಕ್ತವಾಗಲೀ ಕಾಣಿಸಿಲ್ಲ.

    ಫರಾಹ್​ ಅವರು ಕೆಲ ದಿನಗಳ ಹಿಂದೆ ಕರೊನಾ ಸೋಂಕಿಗೆ ತುತ್ತಾಗಿದ್ದರು. ಸೋಂಕಿಗೆ ತುತ್ತಾಗಿನಿಂದ ಅವರು ಆನ್​ಲೈನ್​ನಲ್ಲಿ ಸೋಂಕಿನಿಂದ ಗುಣಮುಖರಾದವರು ಮತ್ತು ಸೋಂಕಿನಿಂದ ಬಳಲುತ್ತಿದ್ದವರ ಗುಂಪನ್ನು ಸೇರಿಕೊಂಡಿದ್ದರು. ಆ ಗುಂಪಿನಲ್ಲಿ ತನ್ನ ಹಲ್ಲು ಈ ರೀತಿ ಆಕಸ್ಮಿಕವಾಗಿ ಬಿದ್ದಿರುವ ವಿಚಾರವನ್ನು ಫರಾಹ್​ ಹೇಳಿಕೊಂಡಿದ್ದಾರೆ. ಆಗ ಸಾಕಷ್ಟು ಜನರು ತಮಗೂ ಸೋಂಕು ಬಂದ ನಂತರ ಹಲ್ಲು ಮುರಿದುಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ಕರೊನಾ ಸೋಂಕು ವಸಡನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ ಎಂದು ನ್ಯೂಯಾರ್ಕ್​ನ ಕೆಲ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಅಪ್ಪನನ್ನು ಮರಕ್ಕೆ ಕಟ್ಟಿ ಬರ್ಬರವಾಗಿ ಹತ್ಯೆ ಮಾಡಿದ ಮಗ-ಸೊಸೆ; ಕಾರಣವೇನು ಗೊತ್ತಾ?

    ಸದ್ಯದ ಮಟ್ಟಿಗೆ ಕರೊನಾ ಸೋಂಕಿನ ಲಕ್ಷಣಗಳ ಪಟ್ಟಿಗೆ ಹಲ್ಲು ನೋವಾಗಲೀ ಅಥವಾ ವಸಡು ದುರ್ಬಲವಾಗುವುದು ಸೇರ್ಪಡೆಯಾಗಿಲ್ಲ. ಆದರೆ ಈ ಬಗ್ಗೆ ಹೆಚ್ಚಿನ ಅಧ್ಯಯನವಾಗಬೇಕಿದೆ. ಸೋಂಕಿಗೆ ತುತ್ತಾಗಿರುವ ಸಾಕಷ್ಟು ಜನರಲ್ಲಿ ಹಲ್ಲಿನ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಅಧ್ಯಯನ ಅತ್ಯಗತ್ಯ ಎನ್ನುತ್ತಾರೆ ನ್ಯೂಯಾರ್ಕ್​ನ ವೈದ್ಯರು. (ಏಜೆನ್ಸೀಸ್​)

    ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

    ಚಿನ್ನದ ದರದಲ್ಲಿ ಭಾರಿ ಇಳಿಕೆ; ಒಡವೆ ಪ್ರೇಮಿಗಳೀಗ ಫುಲ್​ ಖುಷ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts