More

    ಮಾವಿನ ಹಣ್ಣಿನ ಅತಿಯಾದ ಸೇವನೆಯ ದುಷ್ಪರಿಣಾಮಗಳೇನು? ಮ್ಯಾಂಗೋ ಪ್ರಿಯರು ತಿಳಿಯಬೇಕಾದ ಮಾಹಿತಿಯಿದು…!

    ಮಾವಿನಹಣ್ಣುಗಳನ್ನು ವೇಗವಾಗಿ ಹಣ್ಣಾಗಿಸಲು ಬಳಸುವ ರಾಸಾಯನಿಕದಿಂದ ಹಾನಿಯಾಗುತ್ತೆ ಎಂಬ ಆಘಾತಕಾರಿ ವಿಚಾರವೊಂದನ್ನ ತಜ್ಞರು ತಿಳಿಸಿದ್ದಾರೆ.

    ಮಾವಿನ ಹಣ್ಣಿನಲ್ಲಿ ಇರುವ ಫೈಬರ್, ಆಂಟಿಆಕ್ಸಿಡಂಟ್ ಪ್ರಮಾಣ, ವಿಟಮಿನ್ ಸಿ ಅಂಶ ಹೀಗೆ ಸಾಕಷ್ಟು ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣುಗಳು ನಿಷೇಧಿತ ಕ್ಯಾಲ್ಸಿಯಂ ಕಾರ್ಬೈಡ್‌ಗಳಿಂದ ತುಂಬಿದೆ ಎಂಬ ಆಘಾತಕಾರಿ ವಿಚಾರ ಹೊರಬಿದ್ದಿದೆ.

    ನಿಷೇಧಿತ ಕ್ಯಾಲ್ಸಿಯಂ ಕಾರ್ಬೈಡ್​​​ಗಳನ್ನ ಪ್ರಮುಖವಾಗಿ ಮಾವಿನಹಣ್ಣುಗಳನ್ನು ಮಾಗಿಸಲು ಬಳಕೆ ಮಾಡುತ್ತಾರೆ. ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕವು ಅಸಿಟಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇವುಗಳು ಆರ್ಸೆನಿಕ್ ಹಾಗೂ ಫಾಸ್ಪರಸ್ ಹಾನಿಕಾರಕ ಅಂಶಗಳನ್ನು ಹೊಂದಿರುತ್ತದೆ. ಮಸಾಲಾ ಎಂದೂ ಕರೆಯಲ್ಪಡುವ ಈ ಪದಾರ್ಥಗಳು ಮನುಷ್ಯನಲ್ಲಿ ತಲೆ ತಿರುಗುವಿಕೆ, ಬಾಯಾರಿಕೆ. ಕಿರಿಕಿರಿ, ವಾಂತಿ, ದೌರ್ಬಲ್ಯದಂತಹ ವಿವಿಧ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು FSSAI ತಿಳಿಸಿದೆ.

    ಅಲ್ಲದೇ ಅತಿಯಾಗಿ ಮಾವಿನ ಹಣ್ಣನ್ನ ಸೇವಿಸೋದ್ರಿಂದ ಕೆಲವು ಅಡ್ಡ ಪರಿಣಾಮಗಳೂ ಇವೆ. ಮಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಅದಕ್ಕಾಗಿಯೇ ಮಧುಮೇಹ ರೋಗಿಗಳು ಇತಿ ಮಿತಿಯಾಗಿ ಮಾವಿನ ಹಣ್ಣನ್ನ ಸೇವಿಸಬೇಕು.
    ಮಾವಿನಹಣ್ಣುಗಳನ್ನು ತಿನ್ನುವುದರಿಂದ ಅವುಗಳಲ್ಲಿರುವ ಹೆಚ್ಚಿನ ಫೈಬರ್ ಅಂಶದಿಂದಾಗಿ ಕರುಳನ್ನು ಕೆರಳಿಸಬಹುದು. ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಯಾವುದೇ ಹಣ್ಣುಗಳು ಅತಿಸಾರಕ್ಕೆ ಕಾರಣವಾಗಬಹುದು.

    ಮಾವಿನ ಹಣ್ಣುಗಳಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶ ಸಮೃದ್ಧವಾಗಿದೆ. ಹೆಚ್ಚಿನ ಕ್ಯಾಲೋರಿ ಇರುತ್ತದೆ. ಆದ್ದರಿಂದ ಇದು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರಿಗೆ ಹಾನಿಕಾರಕವಾಗಿದೆ.

    ಮಾವಿನ ಹಣ್ಣಿನ ಅತಿಯಾದ ಸೇವನೆಯು ದೇಹದಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ ಮತ್ತು ಇದು ಫ್ರಕ್ಟೋಸ್ ಅನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದು ಹೊಟ್ಟೆ ಉಬ್ಬುವುದು ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts