More

    ತುಳಸಿ ಎಲೆಗಳನ್ನು ತಲೆಯ ಕೆಳಗಿಟ್ಟು ಮಲಗಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ತುಳಸಿ ಎಲೆಗಳನ್ನು ಹೆಚ್ಚಾಗಿ ಪೂಜೆಗೆ ಬಳಸುತ್ತಾರೆ. ಈ ತುಳಸಿ ಎಲೆಗಳು ಅತ್ಯಂತ ಪವಿತ್ರವಾದವು. ಆದ್ದರಿಂದ ದೇವರಿಗೆ ಹಾರ ಮಾಡಿ ಹಾಕಲಾಗುತ್ತದೆ. ಆದರೆ ಈ ಎಲೆಗಳು ಪಾವಿತ್ರ್ಯತೆಗೆ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತುಳಸಿ ಎಲೆಗಳು ದೂರ ಮಾಡುತ್ತವೆ.

    ರಾತ್ರಿ ಮಲಗುವ ಮುನ್ನ ತುಳಸಿ ಎಲೆಗಳನ್ನು ನಿಮ್ಮ ತಲೆಯ ಕೆಳಗೆ ಇಟ್ಟುಕೊಂಡು ನಿದ್ರೆಗೆ ಜಾರಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆ ಪ್ರಯೋಜನಗಳು ಏನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
    * ತುಳಸಿ ಎಲೆಗಳನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಧನಾತ್ಮಕ ಶಕ್ತಿ ಬರುತ್ತದೆ
    * ಕೋಪವನ್ನು ನಿಯಂತ್ರಿಸುವಲ್ಲಿ ತುಂಬಾ ಸಹಾಯ ಮಾಡುತ್ತದೆ
    * ಒತ್ತಡವನ್ನು ಕಡಿಮೆ ಮಾಡುತ್ತದೆ
    * ಮನಸ್ಸಿನಿಂದ ಕೆಟ್ಟ ಆಲೋಚನೆಗಳನ್ನು ದೂರ ಮಾಡುತ್ತದೆ
    * ಒಳ್ಳೆಯದು ಹೆಚ್ಚು ಕೇಳುತ್ತದೆ

    ಇದಿಷ್ಟೇ ಅಲ್ಲದೆ, ತುಳಸಿ ಎಲೆಗಳನ್ನು ಕೆಂಪು ಬಟ್ಟೆಯಲ್ಲಿ ಹಾಕಿ, ತಲೆಯ ಕೆಳಗೆ ಇಟ್ಟುಕೊಂಡರೆ ಹಣದ ಹರಿವು ಹೆಚ್ಚಾಗುತ್ತದೆ. ಅಂದರೆ, ಹಣದ ಸಮಸ್ಯೆ ಬಗೆಹರಿಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ತುಳಸಿ ವಾಸನೆಯಿಂದ ಯಾವುದೇ ಭಯವೂ ನಿಮ್ಮ ಕಾಡುವುದಿಲ್ಲ.

    ಅಂದಹಾಗೆ ತುಳಸಿ ಎಲೆಗಳು ಮಧುಮೇಹಿಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಪ್ರಿಡಯಾಬಿಟಿಕ್ ಮತ್ತು ಡಯಾಬಿಟಿಕ್ ಸ್ಥಿತಿಯಲ್ಲಿರುವ ಜನರು ಇದನ್ನು ಪ್ರತಿದಿನ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. (ಏಜೆನ್ಸೀಸ್​)

    ಆರ್​ಸಿಬಿ ತಂಡವನ್ನು ಕೆಣಕಿದ ನಟಿ ಕಸ್ತೂರಿಗೆ ಖಡಕ್​ ತಿರುಗೇಟು ಕೊಟ್ಟ ಅಭಿಮಾನಿಗಳು!

    ಬಿಸಿ ಗಾಳಿ ಹೆಚ್ಚಳ: ಈ ರಾಜ್ಯಗಳಿಗೆ ಮೇ. 30ರವರೆಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts