More

    ‘ಹಾಗಂತ ನಾವು ಆ ತರ ಅಲ್ಲ ನಿನ್ನನ್ನು ನಾನು ಫ್ರೀ ಆಗಿ ಬಿಡ್ತೀನಿ, ನೀನು ನನ್ನನ್ನು ಫ್ರೀ ಆಗಿ ಬಿಡು’; ಗಟ್ಟಿಮೇಳ ಧಾರವಾಹಿ ನಟಿಯರ ಶಾಕಿಂಗ್​ ಹೇಳಿಕೆ…!

    ಕಿರುತೆರೆ ಅಂಗಳದ ನಟಿಯರಿಬ್ಬರ ಹೇಳಿಕೆ ಇದೀಗ ಭಾರೀ ಐರಲ್​ ಆಗಿದೆ. ಗಟ್ಟಿಮೇಳದ ಮೂಲಕ ಸಾಕಷ್ಟು ಜನರ ಮನ ಗೆದ್ದಂತಹ ನಿಶಾ ರವಿಕೃಷ್ಣನ್​ ಮತ್ತು ಅನ್ವಿತಾ ಸಾಗರ್​​ ಹೇಳಿಕೆ ಇದೀಗ ಎಲ್ಲರಿಗೂ ಶಾಕ್​ ನೀಡಿದೆ.


    ಗಟ್ಟಿಮೇಳ ಸೀರಿಯಲ್​ನಲ್ಲಿ ಬಗಳ ಆತ್ಮೀಯ ಪಾತ್ರವನ್ನ ನಿರ್ವಹಿಸಿದ್ದ ಇವರಿಬ್ಬರೂ ರಿಯಲ್​ ಲೈಫ್​ನಲ್ಲೂ ಆತ್ಮೀಯರು.

    ಚಾಯ್​​ ವಿತ್​ ಅನ್ವಿಶಾ ಸಾಗರ್​​ ಎಂಬ ವಿಡಿಯೋದಲ್ಲಿ ಮಾತನಾಡಿರುವ ಇವರು, ನಾವಿಬ್ಬರೂ ಮದುವೆಯಾಗುವಂತಹ ನಿರ್ಧಾರಕ್ಕೂ ಬಂದಿದ್ದೆವು ಎಂದು ಹೇಳಿ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ಅಕ್ಕ-ಅಕ್ಕ ಅಂತಾ ಕರೆದುಕೊಂಡು ಶುರುವಾಗಿದ್ದ ನಮ್ಮಿಬ್ಬರ ಸ್ನೇಹ ಇದೀಗ ಬೀಪ್​ವರೆಗೂ ಬಂದು ನಿಂತಿದೆ.
    ನಾವು ಮದುವೆಯಾಗೋಣ ಅಂತಲೂ ಅಂದುಕೊಂಡಿದ್ದೆವು ಎಂದು ಹೇಳಿ ಇಬ್ಬರೂ ಜೋರಾಗಿ ನಕ್ಕಿದ್ದಾರೆ.

    ಅದರಲ್ಲೂ ಎಲ್ಲರ ಗಮನ ಸೆಳೆದ ವಿಚಾರ ಏನಪ್ಪಾ ಅಂದ್ರೆ ನಾವು ಅಂದು ಯೋಚಿಸಿದ್ದ ವಿಚಾರ ಇಂದಿಗೂ ನಮ್ಮ ತಲೆಯಲ್ಲಿದೆ ಎಂದಿದ್ದಾರೆ. ಹಾಗಂತ ನಾವು ಆ ತರ ಅಲ್ಲ. ನಿನ್ನನ್ನು ನಾನು ಫ್ರೀ ಆಗಿ ಬಿಡ್ತೀನಿ. ನೀನು ನನ್ನನ್ನು ಫ್ರೀ ಆಗಿ ಬಿಡು. ಜಾಲಿಯಾಗಿ ಇದ್ದು ಬಿಡೋಣ ಅಂತೆಲ್ಲಾ ಯೋಚಿಸಿದ್ದೆವು ಎನ್ನುತ್ತಲೇ ಇಬ್ಬರೂ ನಕ್ಕಿದ್ದಾರೆ.

    ಸದ್ಯ ಗಟ್ಟಿಮೇಳ ಸೀರಿಯಲ್​ ಮೂಲಕ ಎಲ್ಲರ ಮನಗೆದ್ದಂತಹ ನಟಿಯರಿಬ್ಬರ ಈ ಹೇಳಿಕೆ ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ.

    ಇನ್ನು ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯಾ ಆಲಿಯಾಸ್ ರೌಡಿಬೇಬಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ನಟಿ ನಿಶಾ ರವಿಕೃಷ್ಣನ್ ಇದೀಗ ಸಿನಿಮಾ ಕಡೆಗೆ ಮುಖ ಮಾಡಿದ್ದು, .ಹೊಸದೊಂದು ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂಶು ಎಂಬ ಸಿನಿಮಾದಲ್ಲಿ ಪಾತ್ರವನ್ನು ಪಡೆದಿರುವ ಈಕೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಅಂದ ಹಾಗೆ ಈ ಸಿನಿಮಾವನ್ನು ಚೆನ್ನಕೇಶವ ಎನ್ನುವವರು ನಿರ್ದೇಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts