ಕೃನಾಲ್​ ಪಾಂಡ್ಯ ಪೋಸ್ಟ್​ಗೆ ನತಾಶಾ ರಿಯಾಕ್ಷನ್: ಹಾರ್ದಿಕ್​ ಪಾಂಡ್ಯ ಅಭಿಮಾನಿಗಳ ದಿಲ್​ ಖುಷ್​!​

Hardik Pandya

ನವದೆಹಲಿ: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟೀಮ್​ ಇಂಡಿಯಾ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಅವರ ಡಿವೋರ್ಸ್​ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್​ರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇಬ್ಬರ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಬೇರೆ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ. ಹೀಗಾಗಿ ಹಾರ್ದಿಕ್​ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಇದರ ನಡುವೆ ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ.

ಹಾರ್ದಿಕ್​ ಪಾಂಡ್ಯ ಸಹೋದರ ಕೃನಾಲ್​ ಪಾಂಡ್ಯ ಅವರು ಎರಡು ದಿನಗಳ ಹಿಂದೆ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಆ ಫೋಟೋದಲ್ಲಿ ಕೃನಾಲ್​, ತಮ್ಮ ಪುತ್ರ ಕವಿರ್​ ಹಾಗೂ ಹಾರ್ದಿಕ್​ ಪುತ್ರ ಅಗಸ್ತ್ಯನನ್ನು ಹೊತ್ತುಕೊಂಡು ಹ್ಯಾಪಿ ಪ್ಲೇಸ್​ ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ನತಾಶಾ ಅವರು ನಗೆಯ ಎಮೋಜಿಯೊಂದಿಗೆ ಲೈಕ್​ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು ಹಾರ್ದಿಕ್​ ಮತ್ತು ನತಾಶಾ ನಡುವೆ ಸಣ್ಣ ವೈಮನಸ್ಸು ಮೂಡಿರಬಹುದಷ್ಟೇ, ಇಬ್ಬರು ವಿಚ್ಛೇದನ ಪಡೆಯುವುದಿಲ್ಲ ಎಂದಿದ್ದಾರೆ. ಇದು ಕೇವಲ ವದಂತಿಗಳು ಎಂದು ಫ್ಯಾನ್ಸ್​ ಭಾವಿಸಿದ್ದಾರೆ.

ಅಂದಹಾಗೆ ನತಾಶಾ ಮತ್ತು ಹಾರ್ದಿಕ್ ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. 2020ರ ಜನವರಿ 1ರಂದು ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು. ಬಳಿಕ 2020ರ ಮೇ ತಿಂಗಳಲ್ಲಿ ಮದುವೆಯಾದರು. ದಂಪತಿಗೆ ಅಗಸ್ತ್ಯ ಪಾಂಡ್ಯ ಎಂಬ 3 ವರ್ಷದ ಮಗನಿದ್ದಾನೆ. ನತಾಶಾ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ‘ಪಾಂಡ್ಯ’ ಉಪನಾಮವನ್ನು ತೆಗೆದುಹಾಕಿರುವುದನ್ನು ನೆಟಿಜನ್‌ಗಳು ಗಮನಿಸಿದ ನಂತರ ಡಿವೋರ್ಸ್​ ವದಂತಿಗಳು ಆನ್‌ಲೈನ್‌ನಲ್ಲಿ ಹರಡಲು ಪ್ರಾರಂಭಿಸಿದವು. ಮಾರ್ಚ್​ 4ರ ನತಾಶಾ ಹುಟ್ಟುಹಬ್ಬದಂದು ಹಾರ್ದಿಕ್​ ಪಾಂಡ್ಯ ಒಂದೇ ಒಂದು ಪೋಸ್ಟ್​ ಹಾಕದಿರುವುದು ಕೂಡ ಈ ವದಂತಿಗೆ ಪುಷ್ಠಿ ನೀಡಿತು.

ಟೀಮ್​ ಇಂಡಿಯಾದ ಸ್ಟಾರ್ ಆಟಗಾರನಾಗಿರುವ ಹಾರ್ದಿಕ್ ಪಾಂಡ್ಯ ಈ ವರ್ಷ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಮೊದಲ ಪ್ರಯತ್ನದಲ್ಲೇ ಗುಜರಾತ್‌ ಟೈಟಾನ್ಸ್​ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ ಹಾರ್ದಿಕ್​, ಮುಂಬೈಗೆ ಹಿಂತಿರುಗಿ ನಾಯಕನ ಸ್ಥಾನವನ್ನು ಅಲಂಕರಿಸಿದರು. ಆದರೆ, ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ತಂಡ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತು. ಇದರಿಂದ ಹಾರ್ದಿಕ್​ ತೀವ್ರ ಟೀಕೆಗೆ ಗುರಿಯಾದರು.

ಐಪಿಎಲ್​ ಸುದ್ದಿ ತಣ್ಣಗಾಗುತ್ತಿದ್ದಂತೆಯೇ ಹಾರ್ದಿಕ್​ ಅವರ ವೈವಾಹಿಕ ಜೀವನದ ಸುದ್ದಿ ಹೆಚ್ಚು ಚರ್ಚೆಯಾಗುತ್ತಿದೆ. ನತಾಶಾ ಮತ್ತು ಹಾರ್ದಿಕ್​ ನಡುವೆ ವೈಮನಸ್ಸು ಮೂಡಿದ್ದು, ಬೇರೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಇದರ ನಡುವೆ ನತಶಾ, ಬೇರೋಬ್ಬನ ಜತೆ ಸುತ್ತಾಡುತ್ತಿರುವ ಫೋಟೋಗಳು ವೈರಲ್​ ಆಗಿವೆ. ಈ ಎಲ್ಲ ಕಾರಣಗಳಿಂದ ಹಾರ್ದಿಕ್​ ಮತ್ತು ನತಾಶಾ ಡಿವೋರ್ಸ್​ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ. ಇನ್ನು ನತಾಶಾ ಅವರು ಸೆರ್ಬಿಯಾ ದೇಶದಕ್ಕೆ ಸೇರಿರುವುದರಿಂದ ಆ ದೇಶದ ನಿಯಮದ ಪ್ರಕಾರ ಹಾರ್ದಿಕ್ ಪಾಂಡ್ಯ ಶೇ.70ರಷ್ಟು ಆಸ್ತಿಯನ್ನು ಪತ್ನಿಗೆ ನೀಡಬೇಕಿದೆ ಎನ್ನಲಾಗುತ್ತಿದೆ. ಆದರೆ, ನತಾಶಾ ಆಗಲಿ ಅಥವಾ ಹಾರ್ದಿಕ್​ ಆಗಲಿ ಇದುವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡಲ್ಲ. ಇದರ ನಡುವೆ ಕೃನಾಲ್​ ಪಾಂಡ್ಯ ಪೋಸ್ಟ್​ಗೆ ನತಾಶಾ ಪ್ರತಿಕ್ರಿಯೆ ನೀಡಿರುವುದು ಆಶಾದಾಯಕವಾಗಿದೆ. (ಏಜೆನ್ಸೀಸ್​)

ನತಾಶಾ ಜತೆ ಡಿವೋರ್ಸ್ ಆಗುತ್ತೆ ಅಂತ ಮದ್ವೆಗೂ ಮೊದಲೇ ಹಾರ್ದಿಕ್​ಗೆ ಗೊತ್ತಿತ್ತು! ವೈರಲ್​ ಆಗ್ತಿದೆ ಹಳೆಯ ವಿಡಿಯೋ

99 ರೂಪಾಯಿ ಆಫರ್! ಮದ್ವೆಯಾದ ಖುಷಿಯಲ್ಲಿ ಸಂಭ್ರಮಿಸಲು ಹೋಗಿ ಸುಟ್ಟುಕರಕಲಾದ ನವದಂಪತಿ

Share This Article

Success Secrets: ನಿಮ್ಮ ಜೀವನದಲ್ಲಿ ಈ 4 ಸ್ಥಳಗಳಲ್ಲಿ ಎಂದಿಗೂ ಹಿಂಜರಿಯಬೇಡಿ! ಈ ಕೆಲಸ ಮಾಡಿದ್ರೆ ಸಕ್ಸಸ್‌ ಗ್ಯಾರೆಂಟಿ

ಬೆಂಗಳೂರು: ಆಚಾರ್ಯ ಚಾಣಕ್ಯರನ್ನು ಭಾರತದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ…

Salt Benefits | ಒಂದು ತಿಂಗಳು ಉಪ್ಪು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ರೆ ತೂಕ ನಷ್ಟ ಪಕ್ಕಾ! ಅಪಾಯವೂ ಖಂಡಿತ

ಬೆಂಗಳೂರು:  ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಗಮನ…

Palmistry: ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದ್ರೆ ನಿಮ್ಮಂಥ ಅದೃಷ್ಟವಂತರು ಯಾರೂ ಇಲ್ಲ! ಹಣ ನಿಮ್ಮನ್ನು ಹುಡುಕಿ ಬರುತ್ತೆ

ಅನೇಕ ಜನರು ತಮ್ಮ ಭವಿಷ್ಯ (prediction)ವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ…