More

  ಚಪ್ಪಲಿ ಹಾರ ಹಾಕಿ ಮತಯಾಚನೆಗೆ ಹೊರಟ ಅಭ್ಯರ್ಥಿ; ಅಲೆಲೆಲೆಲೆ.. ಇದ್ಯಾವುದಪ್ಪ ಹೊಸ ವರಸೆ? ಎಂದ್ರು ನೆಟ್ಟಿಗರು

  ಉತ್ತರಪ್ರದೇಶ: ದೇಶದಲ್ಲಿ ಸಾರ್ವತ್ರಿಕ ಚುನಾವಣಾ ಪ್ರಚಾರ ಜೋರಾಗಿದೆ. ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಆಯಾ ಪಕ್ಷಗಳ ಪ್ರಮುಖರ ಜತೆಗೆ ಅಭ್ಯರ್ಥಿಗಳೂ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರನ್ನು ಆಕರ್ಷಿಸಲು ನಾನಾ ಕಸರತ್ತು ನಡೆಸಲಾಗುತ್ತಿದೆ.

  ಉತ್ತರಪ್ರದೇಶ ರಾಜ್ಯದ ಪಂಡಿತ್ ಕೇಶವ್ ದೇವ್ ವಿನೂತನ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.  ಪಂಡಿತ್ ಕೇಶವ್ ದೇವ್ ಅಲಿಘರ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಚುನಾವಣಾ ಆಯೋಗವು ಅವರಿಗೆ ಜೋಡು ಸಂದಲು (ಚಪ್ಪಲಿ) ಚಿಹ್ನೆಯನ್ನು ನೀಡಿದೆ. ಇದರೊಂದಿಗೆ ಹೂವಿನೊಂದಿಗೆ ಚಪ್ಪಲಿ ಹಾರವನ್ನು ಕೊರಳಿಗೆ ಹಾಕಿಕೊಂಡು ವೈವಿಧ್ಯಮಯ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

  ತಮ್ಮ ಚುನಾವಣಾ ಚಿಹ್ನೆಯನ್ನು ಮತದಾರರು ಚೆನ್ನಾಗಿ ನೆನಪಿಟ್ಟುಕೊಳ್ಳಲು 7 ಚಪ್ಪಲಿ ಹಾರವನ್ನು ಕೊರಳಿಗೆ ಹಾಕಿಕೊಂಡಿದ್ದರೆಂದು ಅವರ ಬೆಂಬಲಿಗರು ಹೇಳುತ್ತಾರೆ. ಅಲಿಗಢದ ಮತದಾರರು ಅವರನ್ನು ಎಷ್ಟರ ಮಟ್ಟಿಗೆ ಬೆಂಬಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಗರಿಷ್ಠ 80 ಎಂಪಿ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಎಲ್ಲಾ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

  ಪಾಕ್‌ನಿಂದ ಬಂದ ಸೀಮಾ ಹೈದರ್ ಮೇಲೆ ಗಂಡನಿಂದ ಹಲ್ಲೆ; ವಿಡಿಯೋ ನೋಡಿ

  ಕಿಯಾರಾ ಅಡ್ವಾಣಿಯಿಂದ ಸೆ*ಕ್ಸ್‌ ಟಾಯ್ಸ್ ಮಾರಾಟ ಹೆಚ್ಚಾಯ್ತು; ಸತ್ಯ ಬಿಚ್ಚಿಟ್ಟ ನಿರ್ಮಾಪಕ

  ಬಿಸಿಲೋ ಬಿಸಿಲು…ರಣ ಬಿಸಿಲಿನಲ್ಲಿ ಶಾಖದ ಹೊಡೆತ ತಡೆಗಟ್ಟಲು ಹೀಗೆ ಮಾಡಿ…

  ಶಾರುಖ್ ಮ್ಯಾನೇಜರ್ ಸಂಭಾವನೆ ಎಷ್ಟು ಗೊತ್ತಾ? ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ಈಕೆ ರೇಂಜ್….

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts