More

    ಬಿಸಿಲೋ ಬಿಸಿಲು…ರಣ ಬಿಸಿಲಿನಲ್ಲಿ ಶಾಖದ ಹೊಡೆತ ತಡೆಗಟ್ಟಲು ಹೀಗೆ ಮಾಡಿ…

    ಬೆಂಗಳೂರು: ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನ ಬಿಸಿಲಿನ ತಾಪಕ್ಕೆ ತತ್ತರಿಸುತ್ತಿವೆ. ಏರುತ್ತಿರುವ ತಾಪಮಾನದ ಜೊತೆಗೆ, ಚಂಡಮಾರುತದ ಗಾಳಿಯ ಎಚ್ಚರಿಕೆಯೂ ಇದೆ. ಇಂತಹ ವಾತಾವರಣದಲ್ಲಿ ಅನಾರೋಗ್ಯ ಕಾಡುವುದು ಸಹಜ. ಇದಲ್ಲದೇ ದೇಹದ ಭಾಗಗಳು ಸುಡುವುದರಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಬಿಸಿಲಿನ ಶಾಖದ ಹೊಡೆತ ತಡೆಗಟ್ಟಲು ಹೀಗೆ ಮಾಡಿ…

    ಅಗತ್ಯವಿದ್ದಲ್ಲಿ ಬೆಳಿಗ್ಗೆ 11 ರಿಂದ ಸಂಜೆ 4 ರ ನಡುವೆ ಹೊರಗೆ ಹೋಗಬೇಡಿ

    ಬಿಸಿಲಿಗೆ ಹೋಗುವಾಗ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಿ. ಕೊಡೆ, ಸನ್ ಗ್ಲಾಸ್, ಟೋಪಿ, ನೀರಿನ ಬಾಟಲ್ ಜತೆಗೆ ಇರಿಸಿಕೊಳ್ಳಿ.

    ಶಾಖದಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಒದ್ದೆಯಾದ ಕರವಸ್ತ್ರದಿಂದ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಿ.

    ಹೆಚ್ಚು ನೀರು ಕುಡಿ. ನೀರಿನೊಂದಿಗೆ ಉಪ್ಪು-ಸಕ್ಕರೆ ನೀರು, ಒಆರ್ ಎಸ್ ನೀರು, ಕಬ್ಬಿನ ಜ್ಯೂಸ್​ ಮತ್ತು ತಾಜಾ ಹಣ್ಣಿನ ಜ್ಯೂಸ್​​ ಹಾಗೂ ಹಣ್ಣುಗಳ ಸೇವನೆ ಮಾಡುತ್ತೀರಿ.

    ಹುರಿದ, ಕೊಬ್ಬಿನ ಮತ್ತು ಮಸಾಲೆಯುಕ್ತ ಆಹಾರವನ್ನು ಸಾಧ್ಯವಾದ್ಷ್ಟು ಕಡಿಮೆ ಸೇವನೆ ಮಾಡಿ.

    ಮೊಸರು, ಮಜ್ಜಿಗೆ, ನೀರು ಸೇವನೆ ಮಾಡಿ. ಪುದೀನಾ, ಹುಳಿ ಮೊಸರು ಮತ್ತು ಹಸಿರು ಈರುಳ್ಳಿಯಂತಹ ಆಹಾರಗಳು ದೇಹವನ್ನು ತಂಪಾಗಿರಿಸುತ್ತದೆ.

    ಬಿಸಿಲಿನ ಜತೆ ಶಕೆ ಕೂಡಾ ಹೆಚ್ಚಾಗಿರುವುದರಿಂದ ಕಪ್ಪು ಬಟ್ಟೆ ಧರಿಸವುದನ್ನು ತಪ್ಪಿಸಿ. ಸಾಧ್ಯವಾದಷ್ಟು ನಿಮಗೆ ಕಂಪರ್ಟ್​​ ಇರುವ ದೊಡ್ಡ ಬಟ್ಟೆ ಧರಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts