More

    ಬೆಂಗಳೂರಿನ ಫೈನಾನ್ಸ್ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಹೆಚ್ಚಳವಾಗಿದ್ದೇಕೆ?

    ನವದೆಹಲಿ: ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು ಬಹು-ಪಟ್ಟು ನಿವ್ವಳ ಲಾಭವನ್ನು ವರದಿ ಮಾಡಿದ ನಂತರ ಮಂಗಳವಾರದಂದು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಷೇರುಗಳ ಬೆಲೆ ಶೇಕಡಾ 20 ರಷ್ಟು ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹಿಟ್​ ಆಯಿತು.

    ಈ ಸ್ಟಾಕ್ 19.99 % ಏರಿಕೆಯಾಗಿ ರೂ 599 ಕ್ಕೆ ಸ್ಥಿರವಾಯಿತು. ಈ ಮೂಲಕ ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾದ 600.35 ರೂಪಾಯಿ ಸಮೀಪಕ್ಕೆ ಬಂದಿತು.

    ಈ ಕಂಪನಿಯ ಮಾರುಕಟ್ಟೆ ಮೌಲ್ಯವು 1,043.82 ಕೋಟಿ ರೂಪಾಯಿಗಳಿಂದ 6,264.96 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

    ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸೋಮವಾರ ಮಾರ್ಚ್ ತ್ರೈಮಾಸಿಕದಲ್ಲಿ ಬಹು-ಪಟ್ಟು ಜಿಗಿತವನ್ನು ವರದಿ ಮಾಡಿದೆ. ಇದರ ನಿವ್ವಳ ಲಾಭ 321.67 ಕೋಟಿ ರೂ. ಆಗಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಾಲದಾತ ಕಂಪನಿಯು ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ 80.99 ಕೋಟಿ ಲಾಭ ಮಾಡಿತ್ತು. ಅಲ್ಲದೆ, ಇದೇ ಹಣಕಾಸು ವರ್ಷದ ಹಿಂದಿನ ಅವಧಿಯಲ್ಲಿ ರೂ 134.64 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿತ್ತು.

    2023-24ರ ಹಣಕಾಸು ವರ್ಷದಲ್ಲಿ ಕಂಪನಿಯ ನಿವ್ವಳ ಲಾಭವು 669.54 ಕೋಟಿ ರೂ.ಗೆ ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 255.97 ಕೋಟಿ ರೂ. ನಿವ್ವಳ ಲಾಭವಾಗಿತ್ತು.

    2024ರ ಮಾರ್ಚ್ ತ್ರೈಮಾಸಿಕದಲ್ಲಿ, ಕಂಪನಿಯ ಒಟ್ಟು ಆದಾಯವು ತ್ರೈಮಾಸಿಕ ಹಿಂದಿನ ಅವಧಿಯಲ್ಲಿನ 1,009.78 ಕೋಟಿಗಳಿಂದ 1,290.94 ಕೋಟಿಗೆ ಏರಿದೆ. 2024ರ ಮಾರ್ಚ್​ ತ್ರೈಮಾಸಿಕದಲ್ಲಿ ಒಟ್ಟು ವೆಚ್ಚವು 949 ಕೋಟಿ ರೂ.ಗಳಾಗಿದ್ದು, ನಿಬಂಧನೆಗಳು 175 ಕೋಟಿ ರೂ. ಇವೆ.

    ದೊಡ್ಡ ಡೀಲ್​ ಮಾಡಿಕೊಂಡ ಏರ್​ಪೋರ್ಟ್​ ಸಂಬಂಧಿ ಕಂಪನಿ: ಷೇರು ಬೆಲೆ ಏರಲಿದೆ ಎನ್ನುತ್ತಾರೆ ತಜ್ಞರು

    ಅದಾನಿ ಕಂಪನಿಯ ತ್ರೈಮಾಸಿಕ ಲಾಭ 71% ಹೆಚ್ಚಳ: ಷೇರು ಬೆಲೆ ತೀವ್ರ ಏರಿಕೆಯಾಗಲಿದೆ ಎನ್ನುತ್ತಾರೆ ತಜ್ಞರು

    4 ಷೇರುಗಳಲ್ಲಿ ಗೋಚರಿಸುತ್ತಿದೆ ಗೋಲ್ಡನ್ ಕ್ರಾಸ್ ಓವರ್: ಲಾಭ ಗಳಿಸಲು ದೊಡ್ಡ ಅವಕಾಶ ಸೃಷ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts