More

  RCB vs CSK: ಮಳೆ ಬಗ್ಗೆ ವಿಚಾರಿಸಲು ಹವಾಮಾನ ಸಂಸ್ಥೆಗಳಿಗೆ ಫೋನ್​ ಕರೆಗಳ ಸುರಿಮಳೆ! ಫ್ಯಾನ್ಸ್​ಗೆ ಸಿಕ್ತು ಸಿಹಿ ಸುದ್ದಿ

  ಬೆಂಗಳೂರು: ನಾಳೆ (ಮೇ 18) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಆರ್​ಸಿಬಿ ಪ್ಲೇಆಫ್​ ಪ್ರವೇಶ ಮಾಡಲು ಈ ಪಂದ್ಯ ನಡೆಯಲೇಬೇಕು. ಆದರೆ, ಪಂದ್ಯಕ್ಕೆ ಮಳೆ ಭೀತಿ ಆವರಿಸಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಆರ್​ಸಿಬಿ ಐಪಿಎಲ್​ನಿಂದ ಹೊರಬೀಳಲಿದೆ. ಸಿಎಸ್​ಕೆ ಪಾಲಿಗೆ ವರದಾನವಾಗಲಿದೆ. ಹವಾಮಾನ ಇಲಾಖೆಯಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ ಇರುವುದರಿಂದ ಆರ್​ಸಿಬಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಖಂಡಿತವಾಗಿ ಮಳೆ ಬರುತ್ತದೋ? ಇಲ್ಲವೋ? ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕ್ರೀಡಾಭಿಮಾನಿಗಳು ಹವಾಮಾನ ಸಂಸ್ಥೆಗಳಿಗೆ ನಿರಂತರವಾಗಿ ಕರೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

  ಬೆಂಗಳೂರಿನಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಸಿ.ಎಸ್​. ಪಾಟೀಲ್​ ಮಾತನಾಡಿ, ಮಳೆ ವಿಚಾರವಾಗಿ ನಿತ್ಯವೂ ಸಾಕಷ್ಟು ಫೋನ್​ ಕಾಲ್​ಗಳನ್ನು ಸ್ವೀಕರಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನೇಕ ಖಾಸಗಿ ಹವಾಮಾನ ಸಂಸ್ಥೆಗಳಿಗೂ ಕೂಡ ಇದೇ ರೀತಿಯಾಗಿ ನೂರಾರು ಕರೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.

  ಇನ್ನೂ ಐಎಂಡಿ ಮತ್ತು ರಾಜ್ಯ ಸರ್ಕಾರದ ವರುಣ ಮಿತ್ರಾ ಸಹಾಯವಾಣಿಯು ಕೂಡ ಶನಿವಾರ ಸಂಜೆ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಆದರೆ, ಗುಡುಗು ಮಿಂಚುಗಳು ರಾತ್ರಿ 8 ಗಂಟೆ ಒಳಗೆ ವಿರಾಮ ಪಡೆಯಲಿದ್ದು, ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಮಳೆಯಾದರೂ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ವಾಕ್ಯೂಮ್​ ಪವರ್ಡ್​ ಡ್ರೈನೇಜ್​ ಸಿಸ್ಟಮ್​ ಅಂಡ್​ ಸ್ಟೇಟ್​ ಆಫ್​ ದಿ ಆರ್ಟ್​ ಸಬ್​ಸರ್ಫೇಶ್​ ಏರೇಷನ್​ ನೆರವಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಬಹುತೇಕ ಪಂದ್ಯ ನಡೆಯುವ ಸಾಧ್ಯತೆ ಇದೆ ಎಂದು ಕೇಳಿಬರುತ್ತಿದೆ.

  ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನಗಳಲ್ಲಿ ವ್ಯಾಪಕವಾಗಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಪಾಟೀಲ್ ಹೇಳಿದ್ದಾರೆ. ಶನಿವಾರವೂ ಸಹ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಅದೇ ಸಮಯದಲ್ಲಿ ಮೇ 17 ಮತ್ತು 21ರ ನಡುವೆ ಬೆಂಗಳೂರಿನಲ್ಲಿ ಸುಮಾರು 400 ಮಿಮೀ ಮಳೆಯ ಮುನ್ಸೂಚನೆ ನೀಡಿರುವ ಐಎಂಡಿ, ಕೆಲವು ಪ್ರದೇಶಗಳಲ್ಲಿ ಪ್ರವಾಹ ಎಚ್ಚರಿಕೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಸಹ ಮಾಡಿದೆ.

  ಇನ್ನು ಆರ್​ಸಿಬಿ-ಸಿಎಸ್​ಕೆ ನಡುವಿನ ಪಂದ್ಯದ ವಿಚಾರಕ್ಕೆ ಬಂದರೆ, ಇದೊಂದು ರೀತಿಯಲ್ಲಿ ನಾಕೌಟ್​ ಪಂದ್ಯದಂತಿದೆ. ಇದರಲ್ಲಿ ಗೆದ್ದವರು ಪ್ಲೇಆಫ್‌ನಲ್ಲಿ ಮತ್ತೊಂದು ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಸದ್ಯ ಸಿಎಸ್​ಕೆ 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆರ್​ಸಿಬಿ 12 ಅಂಕಗಳೊಂದಿಗೆ 6 ಸ್ಥಾನದಲ್ಲಿದೆ. ಆರ್‌ಸಿಬಿ ತಂಡ ಸಿಎಸ್‌ಕೆ ವಿರುದ್ಧ ಉತ್ತಮ ಅಂತರದಿಂದ ಗೆದ್ದರೆ ಪ್ಲೇ ಆಫ್‌ಗೆ ಹೋಗಲಿದೆ. ಸಿಎಸ್‌ಕೆಗೆ ಯಾವುದೇ ರನ್​ ರೇಟ್​ ಅವಶ್ಯಕತೆ ಇಲ್ಲ, ಕೇವಲ ಗೆದ್ದರೆ ಸಾಕು ಪ್ಲೇಆಫ್​ಗೆ ಹೋಗುತ್ತದೆ. ಆದರೆ, ಆರ್‌ಸಿಬಿ ಮೊದಲು ಬ್ಯಾಟಿಂಗ್​ ಮಾಡಿದರೆ 18 ರನ್​​​ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಚೇಸಿಂಗ್​ ಮಾಡಿದರೆ 18.1 ಓವರ್​ಗಳಲ್ಲೇ ಗುರಿ ಮುಟ್ಟಬೇಕು. ಹೀಗಾಗಿ ಇದೇ 18ರ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ಕಾಯುತ್ತಿದೆ. ಪ್ರಸಕ್ತ ಐಪಿಎಲ್ ಋತುವಿನಲ್ಲಿ ನಾಕೌಟ್ ಪಂದ್ಯವಾಗಿ ಮಾರ್ಪಟ್ಟಿದೆ. ಆದರೆ, ಮಳೆ ಭೀತಿ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದ್ದು, ಮಳೆ ಬರದಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

  ಆರ್​ಸಿಬಿ ಈ ಒಂದು ಕೆಲಸ ಮಾಡಿದ್ರೆ ಸಾಕು ಪ್ಲೇಆಫ್​ ಅಲ್ಲ ಕಪ್​ ಸಹ ಗೆಲ್ಲುತ್ತದೆ ಎಂದ ಮೊಹಮ್ಮದ್​ ಕೈಫ್​!

  ಪ್ಲೇಆಫ್​ಗೇರಲು RCB-CSK ನಡುವೆ ಹೈವೋಲ್ಟೇಜ್​ ಪಂದ್ಯ! ಭಜ್ಜಿ ಪ್ರಕಾರ ಗೆಲ್ಲೋದು ಇವರೇ…

  ಗಂಭೀರ್​​ ನಗುವವರೆಗೂ ನನ್ನ ಕ್ರಶ್​ಗೆ ಪ್ರಪೋಸ್ ಮಾಡಲ್ಲ ಎಂದ ಅಭಿಮಾನಿ! ಗೌತಿ ಕೊಟ್ಟ ಪ್ರತಿಕ್ರಿಯೆ ವೈರಲ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts