More

    ದೊಡ್ಡ ಡೀಲ್​ ಮಾಡಿಕೊಂಡ ಏರ್​ಪೋರ್ಟ್​ ಸಂಬಂಧಿ ಕಂಪನಿ: ಷೇರು ಬೆಲೆ ಏರಲಿದೆ ಎನ್ನುತ್ತಾರೆ ತಜ್ಞರು

    ಮುಂಬೈ: ಜಿಎಂಆರ್​ ಏರ್​ಪೋರ್ಟ್ಸ್​ ಇನ್​​ಫ್ರಾಸ್ಟ್ರಕ್ಚರ್​ ಲಿಮಿಟೆಡ್​ (GMR Airports Infrastructure Limited) ದೊಡ್ಡ ಒಪ್ಪಂದವನ್ನು ಮಾಡಿಕೊಂಡಿದೆ. WAISL ಕಂಪನಿಯಲ್ಲಿ 8.4 ಶೇಕಡಾ ಪಾಲನ್ನು ಖರೀದಿಸುವುದಾಗಿ ಕಂಪನಿಯು ಮಂಗಳವಾರ ಪ್ರಕಟಿಸಿದೆ.

    WAISL ಕಂಪನಿಯು ವಿಮಾನ ನಿಲ್ದಾಣಗಳಲ್ಲಿ ಡಿಜಿಟಲ್ ಮೂಲಸೌಕರ್ಯ ಸೇವೆಗಳನ್ನು ಒದಗಿಸುತ್ತದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ಕಂಪನಿಯು ಈ ಪಾಲನ್ನು ಖರೀದಿಸಿದೆ.

    ಒಪ್ಪಂದದ ಬೆಲೆ ಎಷ್ಟು?
    ಉತ್ತಿಷ್ಠ ವಿರಾಟ್ ಫಂಡ್‌ನಿಂದ 56.66 ಕೋಟಿ ರೂ.ಗೆ 4,60,000 ಷೇರುಗಳು ಅಥವಾ WAISL ನ ಶೇ. 8.4 ಪಾಲನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ ಎಂದು ಜಿಎಂಆರ್​ ಏರ್‌ಪೋರ್ಟ್ಸ್ ಷೇರು ಮಾರುಕಟ್ಟೆಗೆ ತಿಳಿಸಿದೆ.

    ಈ ಸುದ್ದಿಯ ನಡುವೆ, ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರ ಜಿಎಂಆರ್ ಏರ್‌ಪೋರ್ಟ್ಸ್ ಷೇರುಗಳ ಬೆಲೆ ಕುಸಿತ ಕಂಡಿತು. ವಹಿವಾಟಿನ ಸಮಯದಲ್ಲಿ, ಷೇರಿನ ಬೆಲೆಯು ಶೇಕಡಾ 3 ಕ್ಕಿಂತ ಹೆಚ್ಚು ಕುಸಿದು 84 ರೂ. ತಲುಪಿತು. ವಹಿವಾಟಿನ ಅಂತ್ಯಕ್ಕೆ ಷೇರಿನ ಬೆಲೆ 2.76% ಇಳಿಕೆಯಾಗಿ 85.18 ರೂ. ಮುಟ್ಟಿತು.

    ಫೆಬ್ರವರಿ 2024 ರಲ್ಲಿ ಈ ಷೇರುಗಳ ಬೆಲೆ ರೂ 94.30 ಕ್ಕೆ ಏರಿತ್ತು. ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಈ ಷೇರಿನ ಬೆಲೆ 40 ರೂ.ಗೆ ಕುಸಿದಿತ್ತು.

    ಇತ್ತೀಚಿಗೆ ಪ್ರಭುದಾಸ್ ಲೀಲಾಧರ ಬ್ರೋಕರೇಜ್​ ಸಂಸ್ಥೆಯ ಶಿಜುಕುತುಪಲಕ್ಕಲ್ ಅವರು ಈ ಷೇರು ಬೆಲೆ ರೂ 98 ಕ್ಕೆ ಏರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಈ ಸ್ಟಾಕ್​ನ ಸ್ಟಾಪ್ ಲಾಸ್ ಅನ್ನು 81 ರೂ.ನಲ್ಲಿ ಇಡುವುದು ಸೂಕ್ತ ಎಂದಿದ್ದಾರೆ.
    ರೆಲಿಗೇರ್ ಬ್ರೋಕಿಂಗ್‌ನ ರವಿ ಸಿಂಗ್ ಪ್ರಕಾರ, ಜಿಎಂಆರ್ ಇನ್‌ಫ್ರಾ ಷೇರುಗಳ ಬೆಲೆ ಅಲ್ಪಾವಧಿಯಲ್ಲಿ ರೂ 100 ತಲುಪಬಹುದು. ಅಲ್ಪಾವಧಿಯಲ್ಲಿ ಈ ಷೇರುಗಳ ಬೆಲೆ 102 ರೂ.ಗಳ ಮಟ್ಟವನ್ನು ತಲುಪಬಹುದು ಎನ್ನುತ್ತಾರೆ ಟಿಪ್ಸ್2ಟ್ರೇಡ್ಸ್​ನ ಎಆರ್ ರಾಮಚಂದ್ರನ್.

    ಜಿಎಂಆರ್ ಏರ್‌ಪೋರ್ಟ್ಸ್ ಇನ್‌ಫ್ರಾಸ್ಟ್ರಕ್ಚರ್, ಜಿಎಂಆರ್ ಏರ್‌ಪೋರ್ಟ್ಸ್ ಲಿಮಿಟೆಡ್ (ಜಿಎಎಲ್) ಮೂಲಕ ದೆಹಲಿ, ಹೈದರಾಬಾದ್, ಗೋವಾ ಸೇರಿದಂತೆ ವಿವಿಧ ನಗರಗಳ ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತದೆ.

    ಅದಾನಿ ಕಂಪನಿಯ ತ್ರೈಮಾಸಿಕ ಲಾಭ 71% ಹೆಚ್ಚಳ: ಷೇರು ಬೆಲೆ ತೀವ್ರ ಏರಿಕೆಯಾಗಲಿದೆ ಎನ್ನುತ್ತಾರೆ ತಜ್ಞರು

    4 ಷೇರುಗಳಲ್ಲಿ ಗೋಚರಿಸುತ್ತಿದೆ ಗೋಲ್ಡನ್ ಕ್ರಾಸ್ ಓವರ್: ಲಾಭ ಗಳಿಸಲು ದೊಡ್ಡ ಅವಕಾಶ ಸೃಷ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts