More

    110ರಿಂದ 4 ರೂಪಾಯಿಗೆ ಕುಸಿದ ರಿಲಯನ್ಸ್​ ಷೇರು: 5 ದಿನಗಳಿಂದ ಸತತ ಅಪ್ಪರ್​ ಸರ್ಕ್ಯೂಟ್​ ಹಿಟ್; ರಾಕೆಟ್​ ವೇಗದಲ್ಲಿ ಏರಿಕೆ ಏಕೆ?

    ಮುಂಬೈ: ಅನಿಲ್ ಅಂಬಾನಿಯವರ ಹೆಚ್ಚಿನ ಕಂಪನಿಗಳ ಷೇರುಗಳು ದೀರ್ಘಾವಧಿಯಲ್ಲಿ ಹೂಡಿಕೆದಾರರನ್ನು ದಿವಾಳಿ ಮಾಡಿವೆ. ಇಂತಹ ಒಂದು ಷೇರು ರಿಲಯನ್ಸ್ ಹೋಮ್ ಫೈನಾನ್ಸ್ (Reliance Home Finance) ಆಗಿದೆ. ಈ ಷೇರಿನ ಬೆಲೆ ಒಂದು ಕಾಲದಲ್ಲಿ ರೂ 110 ರ ಮಟ್ಟದಲ್ಲಿತ್ತು, ಅದು ಈಗ ರೂ 5 ಕ್ಕಿಂತ ಕಡಿಮೆಯಾಗಿದೆ. ಆದರೂ, ಕಳೆದ ಕೆಲವು ದಿನಗಳಲ್ಲಿ, ಈ ಸ್ಟಾಕ್ ರಾಕೆಟ್​ ವೇಗದಲ್ಲಿ ಏರಿಕೆಗೆ ಸಾಕ್ಷಿಯಾಗಿದೆ.

    ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರ ಷೇರಿನ ಬೆಲೆ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಯಿತು. ಈ ಷೇರಿನ ಬೆಲೆ 5% ಏರಿಕೆಯಾಗಿ ರೂ. 4.30ಕ್ಕೆ ಏರಿತು. ಕಳೆದ 5 ದಿನಗಳಿಂದ ಈ ಸ್ಟಾಕ್ ನಿರಂತರವಾಗಿ ಅಪ್ಪರ್ ಸರ್ಕ್ಯೂಟ್ ಹಿಟ್​ ಆಗುತ್ತಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 6.22 ರೂ. ಇದೆ. ಈ ಬೆಲೆ ಜನವರಿ 2024 ರಲ್ಲಿತ್ತು.
    ಈ ಷೇರುಗಳ ಬೆಲೆ ಕಳೆದೊಂದು ವಾರದಲ್ಲಿ ಶೇ. 22 ಮತ್ತು ಕಳೆದೊಂದು ತಿಂಗಳಲ್ಲಿ ಶೇ. 45ರಷ್ಟು ಏರಿಕೆಯಾಗಿದೆ.

    ಏತನ್ಮಧ್ಯೆ, ರಿಲಯನ್ಸ್ ಹೋಮ್ ಫೈನಾನ್ಸ್‌ನಲ್ಲಿ ವೃತ್ತಿಪರ ಮತ್ತು ಆಡಿಟ್-ಸಂಬಂಧಿತ ಅಕ್ರಮಗಳಿಗಾಗಿ ಆಡಿಟ್ ಕಂಪನಿ ಮತ್ತು ಇಬ್ಬರು ಲೆಕ್ಕಪರಿಶೋಧಕರಿಗೆ ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎನ್‌ಎಫ್‌ಆರ್‌ಎ) ಒಟ್ಟು 1.6 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.

    2018-19ನೇ ಹಣಕಾಸು ವರ್ಷದ ಲೆಕ್ಕಪರಿಶೋಧನಾ ಕಾರ್ಯದಲ್ಲಿ ಅಕ್ರಮ ಎಸಗಿರುವ ಲೆಕ್ಕಪರಿಶೋಧನಾ ಕಂಪನಿಗಳಾದ ಧೀರಜ್ ಮತ್ತು ಧೀರಜ್‌ಗೆ 1 ಕೋಟಿ ರೂ., ಪಿಯೂಷ್ ಪಾಟ್ನಿಗೆ 50 ಲಕ್ಷ ರೂ. ಮತ್ತು ಪವನ್ ಕುಮಾರ್ ಗುಪ್ತಾಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಎನ್‌ಎಫ್‌ಆರ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.

    ಪಾಟ್ನಿ ಮತ್ತು ಗುಪ್ತಾ ಅವರು ಮುಂಬೈ ಮೂಲದ ಆಡಿಟ್ ಸಂಸ್ಥೆಯಾದ ಧೀರಜ್ ಮತ್ತು ಧೀರಜ್‌ನಲ್ಲಿ ಪಾಲುದಾರರಾಗಿದ್ದಾರೆ.

    ಇದಲ್ಲದೆ, ಹಣಕಾಸು ವರದಿ ನಿಯಂತ್ರಕರು ಪಾಟ್ನಿ ಮತ್ತು ಗುಪ್ತಾ ಅವರನ್ನು ಲೆಕ್ಕ ಪರಿಶೋಧಕರಾಗಿ ನೇಮಿಸದಂತೆ ಅಥವಾ ಹಣಕಾಸು ಹೇಳಿಕೆಗಳು ಅಥವಾ ಆಂತರಿಕ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ಯಾವುದೇ ಲೆಕ್ಕ ಪರಿಶೋಧನೆಯನ್ನು ಕ್ರಮವಾಗಿ ಐದು ವರ್ಷ ಮತ್ತು ಮೂರು ವರ್ಷಗಳವರೆಗೆ ನಿರ್ಬಂಧಿಸಿದ್ದಾರೆ.

    ಈ ವಿವಾದವು 2018-19ನೇ ಹಣಕಾಸು ವರ್ಷದ ಕಂಪನಿಯ ಲೆಕ್ಕಪರಿಶೋಧನಾ ಅಕ್ರಮಕ್ಕೆ ಸಂಬಂಧಿಸಿದ್ದಾಗಿದೆ. ಪಾಟ್ನಿ ಎಂಗೇಜ್​ಮೆಂಟ್​ ಪಾರ್ಟನರ್​ ಮತ್ತು ಗುಪ್ತಾ ಎಂಗೇಜ್​ಮೆಂಟ್​ ಪಾರ್ಟನರ್​ ಕಂಟ್ರೋಲ್​ ರಿವ್ಯೂ ಪಾರ್ಟನರ್​ ಆಗಿದ್ದರು. ಪ್ರೈಸ್ ವಾಟರ್‌ಹೌಸ್ ಮತ್ತು ಕಂಪನಿ ಚಾರ್ಟರ್ಡ್ ಅಕೌಂಟೆಂಟ್ಸ್ ಎಲ್‌ಎಲ್‌ಪಿ (ಪಿಡಬ್ಲ್ಯೂ) ಅನ್ನು ಆರಂಭದಲ್ಲಿ 2018-19 ಈ ಕಂಪನಿಯ ಲೆಕ್ಕಪರಿಶೋಧಕರಾಗಿ ನೇಮಿಸಲಾಯಿತು.


    ಆದರೆ ಪ್ರೈಸ್ ವಾಟರ್‌ಹೌಸ್ ಈ ಕೆಲಸವನ್ನು ಪೂರ್ಣಗೊಳಿಸದೆ ಜೂನ್ 2019 ರಲ್ಲಿ ಆಡಿಟ್‌ನಿಂದ ಹಿಂದೆ ಸರಿಯಿತು. ಇದಲ್ಲದೆ, ಮಾರ್ಚ್ 31, 2019 ರಂತೆ ಅಂದಾಜು 7,900 ಕೋಟಿ ರೂಪಾಯಿ ಮೊತ್ತದ ಸಾಲಕ್ಕೆ ಸಂಬಂಧಿಸಿದ ವಂಚನೆಯ ಬಗ್ಗೆಯೂ ಅದು ಶಂಕೆ ವ್ಯಕ್ತಪಡಿಸಿತು. ತರುವಾಯ, ಧೀರಜ್ ಮತ್ತು ಧೀರಜ್ ಅವರ ಸಂಸ್ಥೆಯನ್ನು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯು ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ನೇಮಿಸಿತು.

    ಹಣಕಾಸಿನ ಹೇಳಿಕೆಗಳ ಮೇಲೆ ‘ಸಾಮಾನ್ಯ ಉದ್ದೇಶದ ಕಾರ್ಪೊರೇಟ್ ಸಾಲಗಳ’ (GPCL) ಪ್ರಭಾವ ಸೇರಿದಂತೆ ಸಾಕಷ್ಟು ವಿಷಯಗಳನ್ನು ಆಡಿಟ್ ವರದಿಯಲ್ಲಿ ಬಹಿರಂಗಪಡಿಸದೆಯೇ ಧೀರಜ್ ಮತ್ತು ಧೀರಜ್ 2018-19ರ ಹಣಕಾಸು ವರ್ಷದಲ್ಲಿ ಕ್ವಾಲಿಫೈಡ್​ ಒಪಿನಿಯನ್​ (ಅರ್ಹವಾದ ಅಭಿಪ್ರಾಯ) ನೀಡಿದ್ದಾರೆ ಎಂದು ಸೆಬಿಯು ಎನ್‌ಎಫ್‌ಆರ್‌ಎಗೆ ತಿಳಿಸಿದ ನಂತರ ದಂಡ ವಿಧಿಸುವ ಈ ಆದೇಶ ಹೊರಬಿದ್ದಿದೆ.

    3ರಿಂದ 60 ರೂಪಾಯಿಗೆ ಏರಿಕೆ ಸ್ಟಾಕ್​ ದರ: ಹೂಡಿಕೆದಾರರಿಗೆ ಒಂದೇ ವರ್ಷದಲ್ಲಿ 1752% ಲಾಭ

    ಹಣದ ಸುರಿಮಳೆ ಹರಿಸಿದ ಸ್ಮಾಲ್​ ಕ್ಯಾಪ್ ಕಂಪನಿ ಸ್ಟಾಕ್​: ಷೇರು ಬೆಲೆ 10 ದಿನಗಳಲ್ಲಿ 50% ಏರಿಕೆಯಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts