More

    ಪ್ರಜ್ವಲ್ ವಿರುದ್ಧ ಬಿಜೆಪಿ ಪ್ರತಿಭಟನೆ ಏಕಿಲ್ಲ?


    ಕಲಬುರಗಿ: ಪ್ರಧಾನಿ ತಾಳಿ ಕಸಿದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅವರ ಅಕ್ರಮ ಮೈತ್ರಿಯ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡುತ್ತಾರೆ. ಲೈಂಗಿಕ ಪ್ರಕರಣದಲ್ಲಿ ಭಾಗಿ ಎಂಬ ಮಾಹಿತಿ ಇದ್ದರೂ ಟಿಕೆಟ್ ನೀಡಿದರು. ಪ್ರಜ್ವಲ್‌ಗೆ ವೋಟ್ ನೀಡಿದರೆ ನನಗೆ ವೋಟ್ ಹಾಕಿದಂತೆ ಎಂದು ಪ್ರಧಾನಿ ಹೇಳಿದ್ದರು. ನೇಹಾ ಹಿರೇಮಠ ಪ್ರಕರಣದಲ್ಲಿ ಪ್ರತಿಭಟಿಸಿದವರು ಈಗೇಕೆ ಪ್ರತಿಭಟಿಸುತ್ತಿಲ್ಲ ಎಂದು ಡಾ.ಅಜಯಸಿಂಗ್ ಪ್ರಶ್ನಿಸಿದರು.ಕಲ
    ಬೆಳೆ ಪರಿಹಾರಕ್ಕೆ ಕೋರ್ಟ್ಗೆ ಹೋಗುವ ಸ್ಥಿತಿ: ರಾಜ್ಯದ ೨೨೩ ತಾಲೂಕುಗಳು ಬರಪೀಡಿತವಾಗಿವೆ. ೩೫ ಸಾವಿರ ಕೋಟಿಯ ೪೪ ಲP್ಷÀ ಹೆಕ್ಟೆರ್ ಬೆಳೆ ಹಾನಿಯಾಗಿದೆ. ಆದರೆ ಕೇಂದ್ರ ಸರ್ಕಾರ ಬರ ಪರಿಹಾರ ನೀಡಲಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ಗೆ ಹೋಗುವ ಸ್ಥಿತಿ ಬಂದಿತ್ತು. ಇದೀಗ ೧೮ ಸಾವಿರ ಕೋಟಿ ರೂ. ಕೇಳಿದ್ದು, ಮೂರು ಸಾವಿರ ಕೋಟಿ ಮಾತ್ರ ನೀಡಿ, ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
    ಮೋದಿ ೨೦೧೪ರಲ್ಲಿ ಹೇಳಿದ್ದು ಮರೆತ್ತಿದ್ದಾರೆ. ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ. ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಆರು ಕೋಟಿ ರೈತರಿಗೆ ಅನುಕೂಲವಾಗಿತ್ತು. ಬಿಜೆಪಿಯವರ ಬಳಿ ರೈತರು ಕೇಳಿದರೆ ನಮ್ಮ ಬಳಿ ದುಡ್ಡಿನ ಮಶೀನ್ ಇದೆನಾ ಎಂದು ಪ್ರಶ್ನಿಸಿದ್ದರು. ಈಗಲೂ ಸಾಲ ಮನ್ನಾ ಮಾಡಲೂ ಕಾಂಗ್ರೆಸ್ ಬದ್ಧ ಎಂದರು.

    ಜೇವರ್ಗಿ ಮತ ಕ್ಷೇತ್ರದಲ್ಲಿ ೧೦ ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಪಡೆಯುತ್ತೇವೆ. ಹಿಂದಿನ ಬಾರಿ ಎಂಟು ಕ್ಷೇತ್ರದಲ್ಲಿ ಆರು ಕ್ಷೇತ್ರದಲ್ಲಿ ಲೀಡ್ ಬಂದಿದೆ. ಜೇವರ್ಗಿಯಲ್ಲಿ ೨೪ ಸಾವಿರ ಲೀಡ್ ಬಂದಿದೆ. ೨೮ ಕ್ಷೇತ್ರದಲ್ಲಿ ಕಾಂಗ್ರೆಸ್ ಒಂದೇ ಕ್ಷೇತ್ರದಲ್ಲಿ ಗೆದ್ದಿದೆ. ರಾಜ್ಯದಲ್ಲಿ ವಾತಾವರಣ ಬೇರೆ ಇದೆ. ಕಲ್ಯಾಣ ಕರ್ನಾಟಕದ ಐದು ಜಿ¯್ಲೆಯಲ್ಲಿ ಐದು ಸೇರಿ ರಾಜ್ಯದ ೧೮ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ.
    | ಡಾ.ಅಜಯಸಿಂಗ್
    ಅಧ್ಯಕ್ಷ ಕೆಕೆಆರ್‌ಡಿಬಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts