More

  ‘ರೇವ್​ಪಾರ್ಟಿ’ ಮರೆಮಾಚಲು ಹೇಮಾ ‘ಬಿರಿಯಾನಿ’ ತಯಾರಿ! ಹಿಂದೆಂದೂ ಇಲ್ಲದ ರೆಸಿಪಿ ಈಗ್ಯಾಕೆ ಎಂದ ನೆಟ್ಟಿಗರು..

  ಬೆಂಗಳೂರು: ಭಾನುವಾರ ರಾತ್ರಿ ಬೆಂಗಳೂರಿನ ಜಿಆರ್ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸಿಕ್ಕಿಬಿದ್ದಿದ್ದು, ಬಳಿಕ ಆಕೆ ಹೈದರಾಬಾದ್​ನಲ್ಲಿದ್ದೇನೆಂದು ಸಿಕ್ಕಿಬಿದ್ದ ಫಾರ್ಮ್‌ಹೌಸ್‌​ನಿಂದಲೇ ವೀಡಿಯೋ ಮಾಡಿ ಸೋಸಿಯಲ್​ ಮೀಡಿಯಾದಲ್ಲಿ ಹರಿಬಿಟ್ಟು ನಗೆಪಾಟಲಿಗೆ ಈಡಾದದ್ದು ತಿಳಿದದ್ದೇ.

  ಇದನ್ನೂ ಓದಿ: ಗಂಗಾ ಆರತಿ ಮಾಡಿದ ಜಾಹ್ನವಿ ಕಪೂರ್​ಗೆ ರಾಜ್‌ಕುಮಾರ್ ರಾವ್ ಸಾಥ್​! ಕಾರಣ ಹೀಗಿದೆ..

  ಇದರ ನಡುವೆ ಈ ರೇವ್ ಪಾರ್ಟಿ ವಿಚಾರವನ್ನು ಸೈಡ್ ಟ್ರ್ಯಾಕ್ ಮಾಡಲು ಹೇಮಾ ಸಾಕಷ್ಟು ಪ್ರಯತ್ನಿಸುತ್ತಿದ್ದಾಳೆ. ಅಷ್ಟೇ ಅಲ್ಲ, ಮತ್ತೊಂದು ನಾಟಕ ಶುರು ಮಾಡಿದ್ದಾಳೆ. ಒಂದೆಡೆ ಈ ರೇವ್ ಪಾರ್ಟಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಈಕೆ ಮತ್ತೊಂದೆಡೆ ಇನ್ಸ್ಟಾದಲ್ಲಿ ರೆಸಿಪಿ ಕಾರ್ಯಕ್ರಮ ಆರಂಭಿಸಿದ್ದಾಳೆ.

  ಹೇಮಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಿರಿಯಾನಿ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಇದರಲ್ಲಿ ಹೇಮಾ ಬಿರಿಯಾನಿ ಮಾಡುವುದನ್ನು ತೋರಿಸಿದ್ದಾರೆ. ಆದರೆ ನೆಟಿಜನ್‌ಗಳು ಆಕೆಯನ್ನು ಕಾಮೆಂಟ್‌ಗಳ ಮೂಲಕ ಟೀಕಿಸುತ್ತಿದ್ದಾರೆ.

  ಹೇಮಾ ಅವರೇ, ನೀವು ಏನೆಲ್ಲ ನಾಟಕವಾಡಿದರೂ ಬೆಂಗಳೂರಿನ ವಿಡಿಯೋಗಳು ನೀವು ರೇವ್​ಪಾರ್ಟಿಯಲ್ಲಿ ಪಾಲ್ಗೊಂಡಿದ್ದನ್ನು ರುಜುವಾತುಪಡಿಸಿವೆ. ಹಿಂದೆಂದೂ ಇಲ್ಲದ ಬಿರಿಯಾನಿ ರೆಸಿಪಿ ಹೀಗ್ಯಾಕೆ? ನೆಟ್ಟಿಗರಿಗೆ ನೀಮ್ಮ ನಾಟಕದ ಅರಿವಿದೆ ಎಂದು ಪೋಸ್ಟ್‌ಗೆ ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿದ್ದಾರೆ.

  ಸದ್ಯ ಟಾಲಿವುಡ್, ಸ್ಯಾಂಡಲ್​ವುಡ್​ ಹಾಗೂ ರಾಜಕೀಯ ವಲಯದಲ್ಲಿ ಈ ರೇವ್ ಪಾರ್ಟಿ ವಿಚಾರದ ಸುದ್ದಿ ಬಿಸಿ ಬಿಸಿ ಚರ್ಚೆಗೆ ಗ್ರಾಸ ಒದಗಿಸಿದೆ.

  ರೇವ್ ಪಾರ್ಟಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಕೊಕೇನ್ ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ರಾಜ್ಯವನ್ನು ಮಾದಕ ವ್ಯಸನ ಮುಕ್ತವಾಗಿಸುವ ನಮ್ಮೆಲ್ಲ ಪ್ರಯತ್ನಗಳನ್ನು ಬೇರೆ ರಾಜ್ಯಗಳ ಡ್ರಗ್ ದಂಧೆಕೋರರು ವಿಫಲಗೊಳಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾದವರಿಂದ ಹೆಚ್ಚಿನ ವಿವರ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಇದರ ಕುರಿತು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದು ಗಮನಿಸಬಹುದು.

  ಪವನ್ ಕಲ್ಯಾಣ್​ಗೆ ಶಾಕ್ ಕೊಟ್ಟ ಹೀರೋಯಿನ್..! ಬಂಪರ್ ಆಫರ್ ಬೇಡ ಅಂದಿದ್ದೇಕೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts