More

  ಇದು ಅತ್ಯುತ್ತಮ ಫೋಟೋ..ಪ್ರಜಾಪ್ರಭುತ್ವಕ್ಕೆ ಬಲ! ಹೀಗೆಂದಿದ್ದೇಕೆ ಆನಂದ್ ಮಹೀಂದ್ರಾ?

  ನವದೆಹಲಿ: ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ವ್ಯಾಪಾರ ಚಟುವಟಿಕೆಗಳಲ್ಲಿ ನಿರತರಾಗಿದ್ದರೂ ಸಹ ಸಾಮಾಜಿಕ ಮಾಧ್ಯಮಗಳಿಗೆ ಸಾಕಷ್ಟು ಸಮಯವನ್ನು ವಿನಿಯೋಗಿಸುತ್ತಾರೆ. ಅವರು ತಮ್ಮ ನೆಚ್ಚಿನ ಮತ್ತು ಸ್ಪೂರ್ತಿದಾಯಕ ವೀಡಿಯೋ ಮತ್ತು ಫೋಟೋಗಳನ್ನು ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಅವರು ಹಂಚಿಕೊಂಡಿರುವ ಫೋಟೋವೊಂದು ಜನರನ್ನು ಆಕರ್ಷಿಸುತ್ತಿದೆ.

  ಇದನ್ನೂ ಓದಿ: ಕಳ್ಳ, ಕಳ್ಳ ಎಂದು ಪೊಲೀಸರನ್ನೇ ಅಟ್ಟಿಸಿಕೊಂಡು ಹೋದ ಜನ.. ಹೊಯ್ಸಳ ವಾಹನದಲ್ಲಿದ್ದವರು ಪರಾರಿ!

  2024 ರ ಚುನಾವಣೆಯಲ್ಲಿ ಇದು ಅತ್ಯುತ್ತಮ ಚಿತ್ರ ಎಂದು ಆನಂದ್ ಮಹೀಂದ್ರಾ ಆ ಫೋಟೋವನ್ನು ಹಂಚಿಕೊಂಡಿದ್ದಾರೆ.

  ದೇಶಾದ್ಯಂತ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದು ತಿಳಿದ ಸಂಗತಿಯೇ. ಈ ಬಾರಿಯ ಚುನಾವಣೆಯಲ್ಲಿ ಅಪರೂಪದ ಘಟನೆ ನಡೆದಿದೆ. ಗ್ರೇಟ್ ನಿಕೋಬಾರ್ ದ್ವೀಪದ ಕಾಡುಗಳಲ್ಲಿ ವಾಸಿಸುವ ಶೋಂಪೆನ್ ಬುಡಕಟ್ಟಿನ ಏಳು ಜನರಲ್ಲಿ ಒಬ್ಬರು ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ.

  `2024ರ ಚುನಾವಣೆಯಲ್ಲಿ ಇದು ಅತ್ಯುತ್ತಮ ಫೋಟೋ. ಗ್ರೇಟ್ ನಿಕೋಬಾರ್‌ನ ಶೋಂಪೆನ್ ಬುಡಕಟ್ಟಿನ ಏಳು ಮಂದಿಯಲ್ಲಿ ಒಬ್ಬಾತ ಮೊದಲ ಬಾರಿಗೆ ಮತ ಚಲಾಯಿಸಿದ್ದಾನೆ. ಇದು ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಿದೆ ಎಂದು ಆನಂದ್ ಮಹೀಂದ್ರಾ ಪ್ರತಿಕ್ರಿಯಿಸಿದ್ದಾರೆ.

  ಈ ಬಾರಿ ಬಿಜೆಪಿಗೆ ಎಷ್ಟು ಸ್ಥಾನ ಸಿಗುತ್ತೆ..? ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳೋದೇನು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts