ಸಿನಿಮಾ

VIDEO| ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ‘ದಿ ಕೇರಳ ಸ್ಟೋರಿ’ ಚಿತ್ರ ವೀಕ್ಷಿಸಿದ ಯುಪಿ ಸಿಎಂ!

ಲಖನೌ: ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಲವ್​ ಜಿಹಾದ್​ ಆಧಾರಿತ ಸಿನಿಮಾ ದಿ ಕೇರಳ ಸ್ಟೋರಿ ಚಿತ್ರವು ರಾಷ್ಟ್ರಮಟ್ಟದಲ್ಲಿ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದೆ.

ಇನ್ನು ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಸಿನಿಮಾವನ್ನು ವೀಕ್ಷಿಸಿದ್ಧಾರೆ.

ಚಿತ್ರತಂಡ ಸಾಥ್​

ಇತ್ತೀಚಿಗೆ ಚಿತ್ರತಂಡದ ಸದಸ್ಯರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿ ತಮ್ಮ ಚಿತ್ರವನ್ನು ವೀಕ್ಷಿಸುವಂತೆ ಆಹ್ವಾನ ನೀಡಿತ್ತು.

ಚಿತ್ರತಂಡದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಯೋಗಿ ಉತ್ತರಪ್ರದೇಶದಲ್ಲಿ ಸಿನಿಮಾಗೆ ತೆರಿಗೆ ವಿನಾಯ್ತಿಯನ್ನು ಘೋಷಿಸಿದ್ದರು ಮತ್ತು ಶುಕ್ರವಾರ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಚಿತ್ರವನ್ನು ವೀಕ್ಷಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ: ತಿಂಗಳಿಗೆ 30 ಸಾವಿರ ರೂ. ಸಂಬಳ; ಆಸ್ತಿ ಮೌಲ್ಯ 7 ಕೋಟಿ ರೂ. ಮಹಿಳಾ ಅಧಿಕಾರಿ ಕಮಾಲ್!

ವಿಶೇಷ ಪ್ರದರ್ಶನ

ಉತ್ತರಪ್ರದೇಶ ಸರ್ಕಾರ ಆಯೋಜನೆ ಮಾಡಿರುವ ವಿಶೇಷ ಪ್ರದರ್ಶನದಲ್ಲಿ 100 ಮಂದಿ ಪತ್ರಕರ್ತರು, ಲಖನೌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಆಹ್ವಾನ ನೀಡಲಾಗಿತ್ತು.

Latest Posts

ಲೈಫ್‌ಸ್ಟೈಲ್