ವಿಜಯಪುರ | ಸಾವಿಗೆ ಶರಣಾದ ಹದಿಹರೆಯದ ಪ್ರೇಮಿಗಳು!

Lovers pohto
Published on

ವಿಜಯಪುರ: ಹದಿಹರೆಯದ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದ ಅಂಗಡಗೇರಿ ಎಂಬಲ್ಲಿ ನಡೆದಿದೆ. ಸಚಿನ್ ಮಾದರ(17) ಮತ್ತು ಸಕ್ಕುಬಾಯಿ ಮಾದರ(15) ಮೃತಪಟ್ಟವರು.

ನೇಣು ಬಿಗಿದುಕೊಂಡು ಆತ್ಮಹತ್ಯೆ

ಸಚಿನ್ ಮತ್ತು ಸಕ್ಕುಬಾಯಿ ನಿನ್ನೆ ಮನೆಯಿಂದ ಹೊರಹೋಗುವುದಾಗಿ ತೆರಳಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ತೆರಳಿ ನೇಣು ಬಿಗಿದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಪ್ರಕರಣ ದಾಖಲು

ಕೂಡಗಿ ಎನ್​ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರೀತಿಸುತ್ತಿದ್ದರು ಎನ್ನಲಾದ ಸಚಿನ್ ಮತ್ತು ಸಕ್ಕುಬಾಯಿ ಸಣ್ಣ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆ ಇದೀಗ ಸಾವರ್ಜನಿಕ ವಲಯದಲ್ಲಿ ಎದ್ದಿದೆ. ಪೊಲೀಸರ ತನಿಖೆಯಿಂದ ಅಪ್ರಾಪ್ತ ವಯಸ್ಕರಿಬ್ಬರು ಪ್ರಾಣ ಕಳೆದುಕೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net