More

    ಪರೀಕ್ಷೆ ಫಲಿತಾಂಶ ಬಂದ 48 ಗಂಟೆಯಲ್ಲಿ ಸಾವಿಗೆ ಶರಣಾದ 9 ವಿದ್ಯಾರ್ಥಿಗಳು!

    ಆಂಧ್ರಪ್ರದೇಶ: ಕಳೆದ ಬುಧವಾರ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆ(Intermediate Examination)ಯ ಫಲಿತಾಂಶ ಪ್ರಕಟವಾದ ನಂತರದಲ್ಲಿ ಈವರೆಗೆ 9 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಸುಮಾರು 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪ್ರಥಮ ಪಿಯುಸಿಯಲ್ಲಿ ಶೇ 61ರಷ್ಟು ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯಲ್ಲಿ 72 ಶೇ. ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

    ಇದನ್ನೂ ಓದಿ: ಪ್ರಿಯತಮೆಯ ಮದುವೆ ನಿಲ್ಲಿಸಲು ಮುಂದಾದ ಪಾಗಲ್ ಪ್ರೇಮಿ; ಯುವತಿ ಮನೆಯವರೇ ಹತ್ಯೆ ಮಾಡಿದ್ದಾರೆಂದು ನಾಟಕ!

    ವಿದ್ಯಾರ್ಥಿಗಳಿಂದ ದುಡುಕಿನ ನಿರ್ಧಾರ

    ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಶ್ರೀಕಾಕುಳಂ ಜಿಲ್ಲೆಯಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬ ರೈಲಿಗೆ ತಲೆಕೊಟ್ಟರೆ, ಮಲ್ಕಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿನಾಧಪುರಂನಲ್ಲಿ ಎಂಬಲ್ಲಿ 16 ವರ್ಷದ ಬಾಲಕಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿ ಖಿನ್ನತೆಗೆ ಒಳಗಾಗಿದ್ದ ಅನಕಾಪಲ್ಲಿ ಎಂಬಲ್ಲಿನ 17 ವರ್ಷದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲ್ ಆದೆ ಎಂದು ಮನನೊಂದು ನೇಣು ಬಿಗಿದುಕೊಂಡಿದ್ದಾನೆ.

    ಇದನ್ನೂ ಓದಿ: 550 ಮಕ್ಕಳ ತಂದೆಗೆ ಡಚ್​ ನ್ಯಾಯಾಲಯ ನಿಷೇಧ ಹೇರಿದ್ದು ಯಾಕೆ?

    ಆತ್ಮಹತ್ಯೆಗೆ ಮುಂದಾದ ವಿದ್ಯಾರ್ಥಿಗಳು

    ವಿಶಾಖಪಟ್ಟಣಂನ ಕಂಚರಪಾಲೆಂ ಪ್ರದೇಶದಲ್ಲಿ 18 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಚಿತ್ತೂರು ಜಿಲ್ಲೆಯ 17 ವರ್ಷದ ಇಬ್ಬರು ವಿದ್ಯಾರ್ಥಿಗಳು ಎಪಿ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವುದಕ್ಕೆ ಆತ್ಮಹತ್ಯೆ ಸಾವಿಗೆ ಶರಣಾಗಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆ, ವಿದ್ಯಾರ್ಥಿಯೊಬ್ಬ ಕೀಟನಾಶಕ ಸೇವಿಸಿ ಸಾವನ್ನಪ್ಪಿದ್ದಾನೆ.

    ಆಂಧ್ರಪ್ರದೇಶದ ವಿವಿಧ ಭಾಗದಲ್ಲಿ ಒಂಭತ್ತು ವಿದ್ಯಾರ್ಥಿಗಳು ಪರೀಕ್ಷೆಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡೆ ಎಂಬ ಕಾರಣಕ್ಕೆ ಮನನೊಂದು ದುಡಿಕಿನ ನಿರ್ಧಾರ ಕೈಗೊಂಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts