More

    550 ಮಕ್ಕಳ ತಂದೆಗೆ ಡಚ್​ ನ್ಯಾಯಾಲಯ ನಿಷೇಧ ಹೇರಿದ್ದು ಯಾಕೆ?

    ಡಚ್​: 41 ವರ್ಷಕ್ಕೆ ಸುಮಾರು 550ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿದ್ದ ವ್ಯಕ್ತಿಗೆ ಈಗ ಸಂಕಷ್ಟ ಒಂದು ಎದುರಾಗಿದ್ದು ಇನ್ನು ಮುಂದೆ ಈ ರೀತಿ ಮಾಡಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

    ಡಚ್​ ಮೂಲದ ಸಂಗೀತಗಾರ ಜೋನಾಥನ್​ ಜಾಕೋಬ್​ ಮೈಜರ್​​(41)ಗೆ ಸ್ಥಳೀಯ ಡಚ್​ ನ್ಯಾಯಾಲಯ ಇನ್ನು ಮುಂದೆ ವೀರ್ಯ ದಾನ ಮಾಡದಂತೆ ಸೂಚಿಸಿದೆ.

    ಜೊನಾಥನ್ ವೀರ್ಯ ದಾನಕ್ಕೆ ತಡೆ

    ಜೊನಾಥನ್ ಇನ್ನು ಮುಂದೆ ವೀರ್ಯ ದಾನ ಮಾಡದಂತೆ ತಡೆಯಲು ಡೋನರ್ ಕೈಂಡ್ ಈ ನಿರ್ಧಾರ ಕೈಗೊಂಡಿದೆ. 100 ಮಹಿಳೆಯರಿಗೆ ವಂಚಿಸಿದ ಆರೋಪದ ಮೇಲೆ ಜೊನಾಥನ್​ಗೆ ಈಗಬ ಕಾನೂನು ಸಂಕಷ್ಟ ಎದುರಾಗಿದೆ.

    ಇದನ್ನೂ ಒದಿ: 41ರ ವಯಸ್ಸಿನಲ್ಲಿ 550 ಮಕ್ಕಳಿಗೆ ‘ತಂದೆ’ಯಾದ ವ್ಯಕ್ತಿ!

    ಏನಿದು ಘಟನೆ?

    41 ವರ್ಷದ ಜೊನಾಥನ್ ಜಾಕೋಬ್ ಮೈಜರ್, ನೆದರ್ಲ್ಯಾಂಡ್ಸ್ ನಿವಾಸಿಯಾಗಿದ್ದಾನೆ. ಈತನ ವಿರುದ್ಧ ನೂರಾರು ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ. ಆ ಮಕ್ಕಳಿಗೆ ತಾನೊಬ್ಬನೇ ತಂದೆ ಎಂದು ಹೇಳುತ್ತಾನೆ. 2017ರ ಹೊತ್ತಿಗೆ, ಜೋನಾಥನ್ ನೆದರ್ಲ್ಯಾಂಡ್ಸ್ನ 10 ವಿವಿಧ ಚಿಕಿತ್ಸಾಲಯಗಳಿಗೆ ತನ್ನ ವೀರ್ಯವನ್ನ ದಾನ ಮಾಡಿದ ಕಾರಣ 102 ಮಕ್ಕಳ ತಂದೆಯಾಗಿದ್ದಾನೆ.

    ಈತನಿಗೆ ವೀರ್ಯಾಣು ದಾನ ಮಾಡದಂತೆ ನ್ಯಾಯಾಲಯ ನಿಷೇಧ ಹೇರಿದೆ. ಆ ವ್ಯಕ್ತಿ ವೀರ್ಯಾಣು ದಾನ ಮಾಡುವುದರಿಂದ, ಅವನಿಂದ ಜನ್ಮ ತಾಳುವ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ, ಮಾಹಿತಿಯ ಕೊರತೆಯಿಂದಾಗಿ, ಅವರು ಮದುವೆಯಾಗುವ ಅಪಾಯವೂ ಹೆಚ್ಚಾಗುತ್ತದೆ ಎಂದು ನ್ಯಾಯಾಲಯ ನಿಷೇಧ ವಿಧಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts