More

  ಸದ್ವಿಚಾರಕ್ಕೆ ಮಾತ್ರ ಜಾಲತಾಣ ಬಳಸಿ

  ಕುಶಾಲನಗರ: ಸಮಾಜದಲ್ಲಿ ಧಾರ್ಮಿಕತೆ ಉಳಿಸುವಲ್ಲಿ ಆರ್ಯವೈಶ್ಯರ ಕೊಡುಗೆ ಅಪಾರವಿದೆ ಎಂದು ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಅಮೃತ್‌ರಾಜ್ ಹೇಳಿದರು.

  ಕುಶಾಲನಗರ ವಾಸವಿ ಯುವಜನ ಸಂಘದಿಂದ ಶನಿವಾರ ಇಲ್ಲಿನ ವಾಸವಿ ಮಹಲ್‌ನಲ್ಲಿ ಹಮ್ಮಿಕೊಂಡಿದ್ದ ವಾಸವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

  ಯುವ ಜನತೆ ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ಸಮಾಜದಲ್ಲಿ ಈಗ ನಡೆಯುತ್ತಿರುವ ಹಲವು ದುಷ್ಪರಿಣಾಮಗಳಿಗೆ ಜಾಲತಾಣಗಳೇ ಕಾರಣವಾಗಿದೆ. ಒಳ್ಳೆಯ ವಿಚಾರಗಳಿಗೆ ಮಾತ್ರ ಜಾಲತಾಣ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

  ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಯುವಜನಾಂಗ ಸಮಾಜ ಸೇವೆ ಮಾಡುವ ಮನೋಭಾವ ಮೂಡಿಸಿಕೊಳ್ಳಬೇಕು. ಮಹತ್ಕಾರ್ಯ ಮಾಡಲು ತ್ಯಾಗ ಗುಣ ಅವಶ್ಯವಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಮಾನ ಮನಸ್ಕರು ಒಗ್ಗೂಡಬೇಕು ಎಂದು ಹೇಳಿದರು.

  ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಪ್ರವೀಣ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಆರ್ಯವೈಶ್ಯ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಕವಿತಾ ಪ್ರವೀಣ್, ಸ್ಪೂರ್ತಿ, ಯುವಜನ ಸಂಘದ ಕಾರ್ಯದರ್ಶಿ ಅಂಜನ್, ಆರ್ಯವೈಶ್ಯ ಸಮುದಾಯದವರು ಪಾಲ್ಗೊಂಡಿದ್ದರು.
  ಕುಶಾಲನಗರ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ರವಿಕುಮಾರ್, ಆರ್ಯವೈಶ್ಯ ಸಮುದಾಯದ ವಿವಿಧ ಕ್ಷೇತ್ರದ ಸಾಧಕರಾದ ಕೆ.ಎಸ್.ನಾಗೇಶ್, ಎನ್.ವಿ.ಬಾಬು, ಎಸ್.ಎನ್.ರಾಜೇಂದ್ರ, ನಿತಿನ್ ಗುಪ್ತ, ಚಿತ್ರ ರಮೇಶ್, ಆದರ್ಶ್, ಪ್ರಹ್ಲಾದ್ ಇತರರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

  ಒಂದು ವಾರದಿಂದ ಪೂಜೆ: ವಾಸವಿ ಜಯಂತಿ ಪ್ರಯುಕ್ತ ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಒಂದು ವಾರದಿಂದ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶನಿವಾರ ಬೆಳಗ್ಗೆ ಕಾವೇರಿ ಹೊಳೆಯಿಂದ ಮಹಿಳೆಯರು ಗಂಗಾ ಪೂಜೆ ಮಾಡಿ ಕಳಸ ಹೊತ್ತು ತಂದರು. ದೇವಿಗೆ ವಿಶೇಷ ಅಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಅರ್ಚಕ ಪ್ರಮೋದ್ ಭಟ್, ಯೋಗೀಶ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಜಯಂತಿ ಅಂಗವಾಗಿ ದೇವಿಗೆ ಸುವರ್ಣ ಮುಖವಾಡ ಹಾಕಲಾಗಿತ್ತು ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts