More

    41ರ ವಯಸ್ಸಿನಲ್ಲಿ 550 ಮಕ್ಕಳಿಗೆ ‘ತಂದೆ’ಯಾದ ವ್ಯಕ್ತಿ!

    ನವದೆಹಲಿ: ಕೀರ್ತಿಗೊಬ್ಬ ಮಗ ಮತ್ತು ಆರತಿಗೊಬ್ಬಳು ಮಗಳು ಎಂದು ಇಂದಿನ ದಂಪತಿ ಇಬ್ಬರು ಮಕ್ಕಳಿಗೆ ಮಾತ್ರ ಪೋಷಕರಾಗಲು ಇಚ್ಛೆ ಪಡುತ್ತಾರೆ. ಕೆಲವರು ಒಂದು ಮಗುವನ್ನು ಮಾತ್ರ ಹೊಂದುವವರಿದ್ದಾರೆ. ತಂದೆಯಾಗುವ ಭಾವನೆ ಪ್ರಪಂಚದ ಅತ್ಯಂತ ಸುಂದರವಾದ ಭಾವನೆಯಾಗಿದೆ. ಆದರೆ ಇಲ್ಲೊಬ್ಬ ಪುರುಷ 41ರ ವಯಸ್ಸಿನಲ್ಲಿ ಬರೋಬ್ಬರಿ 550 ಮಕ್ಕಳಿಗೆ ‘ತಂದೆ’ಯಾಗಿದ್ದಾನೆ.

    ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅನೇಕ ರೀತಿಯ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿವೆ, ಇದರಿಂದಾಗಿ ಮಕ್ಕಳನ್ನ ಪಡೆಯುವುದು ಸುಲಭವಾಗುತ್ತಿದೆ. ಇಂದಿನ ದಿನಗಳಲ್ಲಿ ವೀರ್ಯಾಣು ದಾನವು ತುಂಬಾ ಟ್ರೆಂಡ್‌ನಲ್ಲಿದೆ. ಭಾರತದಲ್ಲಿ ಅಷ್ಟಾಗಿ ಇಲ್ಲ, ಆದರೆ ವಿದೇಶದಲ್ಲಿ ಇದಕ್ಕೆ ಸಾಕಷ್ಟು ಬೇಡಿಕೆ ಇದೆ. ನಾವು ಹೇಳುತ್ತಿರುವ ವ್ಯಕ್ತಿ ಈ ‘ತಂತ್ರಜ್ಞಾನ’ ಮೂಲಕ 500ಕ್ಕೂ ಹೆಚ್ಚು ಮಕ್ಕಳ ತಂದೆಯಾಗಿದ್ದಾನೆ.

    ಇದನ್ನೂ ಓದಿ: ಸಿದ್ದರಾಮಯ್ಯ ಜೀವನಾಧರಿತ ಸಿನಿಮಾದ ಪೋಸ್ಟರ್ ರಿಲೀಸ್‌‌ ; ಲೀಡರ್ ರಾಮಯ್ಯ ಚಿತ್ರದಲ್ಲಿದೇ ಲವ್ ಸ್ಟೋ
    41 ವರ್ಷದ ಜೊನಾಥನ್ ಜಾಕೋಬ್ ಮೈಜರ್, ನೆದರ್ಲ್ಯಾಂಡ್ಸ್ ನಿವಾಸಿಯಾಗಿದ್ದಾನೆ. ಈತನ ವಿರುದ್ಧ ನೂರಾರು ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ. ಆ ಮಕ್ಕಳಿಗೆ ತಾನೊಬ್ಬನೇ ತಂದೆ ಎಂದು ಹೇಳುತ್ತಾನೆ. 2017ರ ಹೊತ್ತಿಗೆ, ಜೋನಾಥನ್ ನೆದರ್ಲ್ಯಾಂಡ್ಸ್ನ 10 ವಿವಿಧ ಚಿಕಿತ್ಸಾಲಯಗಳಿಗೆ ತನ್ನ ವೀರ್ಯವನ್ನ ದಾನ ಮಾಡಿದ ಕಾರಣ 102 ಮಕ್ಕಳ ತಂದೆಯಾಗಿದ್ದಾನೆ.

    ಇದನ್ನೂ ಓದಿ: 15 ವರ್ಷಗಳ ಬಳಿಕ ಪೆಪ್ಸಿ ಹೊಸ ಲೋಗೋ ಅನಾವರಣ!
    ಈತನಿಗೆ ವೀರ್ಯಾಣು ದಾನ ಮಾಡದಂತೆ ನ್ಯಾಯಾಲಯ ನಿಷೇಧ ಹೇರಿದೆ. ಆ ವ್ಯಕ್ತಿ ವೀರ್ಯಾಣು ದಾನ ಮಾಡುವುದರಿಂದ, ಅವನಿಂದ ಜನ್ಮ ತಾಳುವ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ, ಮಾಹಿತಿಯ ಕೊರತೆಯಿಂದಾಗಿ, ಅವರು ಮದುವೆಯಾಗುವ ಅಪಾಯವೂ ಹೆಚ್ಚಾಗುತ್ತದೆ ಎಂದು ನ್ಯಾಯಾಲಯ ನಿಷೇಧ ವಿಧಿಸಿತ್ತು. ಇದರ ಹೊರತಾಗಿಯೂ ಆತನಿಗೆ ಹಲವು ಮಕ್ಕಳಿದ್ದಾರೆ.

    ಈ ಪುರುಷ 550 ಮಕ್ಕಳಿಗೆ ತಂದೆಯಾಗಿದ್ದಾನೆ. ಇದು ನನ್ನ ಮಗುವಿಗೆ ಸಮಸ್ಯೆ ಉಂಟುಮಾಡಬಹುದು. ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಈತನಿಂದ ವೀರ್ಯಾಣು ದಾನ ಪಡೆದ ಮಹಿಳೆ ಆರೋಪಿಸಿದ್ದಾರೆ. ಮೈಜರ್ ಅವರು ಉಕ್ರೇನ್ ಮತ್ತು ಡೆನ್ಮಾರ್ಕ್ ಸೇರಿದಂತೆ ಇತರ ದೇಶಗಳಲ್ಲಿ ವೀರ್ಯಾಣು ದಾನ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts