More

  ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

  ಕುಕನೂರು: ಪಾಲಕರು ಪ್ರತಿನಿತ್ಯ ಮಕ್ಕಳ ಚಲನವಲನಗಳನ್ನು ಗಮನಿಸಬೇಕು ಎಂದು ಯುವ ಪರಿವರ್ತಕ ಅಜ್ಮೀರ್ ದೊಡ್ಡಮನಿ ಹೇಳಿದರು.

  ಇದನ್ನೂ ಓದಿ: ಮಾತೃಭಾಷಾ ಶಿಕ್ಷಣ ಸಂಸ್ಥೆಗೆ ಆದ್ಯತೆ : ಡಾ.ವಿಜಯ ಬಲ್ಲಾಳ್ ಸಲಹೆ

  ತಾಲೂಕಿನ ನಿಟ್ಟಾಲಿ ಗ್ರಾಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಿಮ್ಹಾನ್ಸ್ ಬೆಂಗಳೂರು ಆಶ್ರಯದಲ್ಲಿ ಯುವಸ್ಪಂದನ ಯೋಜನೆಯಡಿ ಪ್ರಾರಂಭಗೊಂಡ ನರೇಗಾ ಕೂಲಿಕಾರರಿಗೆ ಅರಿವು ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

  ಇತ್ತೀಚಿನ ದಿನಗಳಲ್ಲಿ ಮಕ್ಕಳು, ಯುವಕರು ಮದ್ಯಪಾನ, ಧೂಮಪಾನ, ಜೂಜಾಟದಂತಹ ಮೋಜು ಮಸ್ತಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮೊಬೈಲ್ ಹಾವಳಿಯಿಂದ ಯುವ ಸಮುದಾಯ ದಾರಿತಪ್ಪುತ್ತಿದೆ. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು. ಪ್ರಮುಖರಾದ ಮಂಜುನಾಥ್ ಗುರಿಕಾರ, ಇಮಾಮ ದೊಡ್ಡಮನಿ, ಆಸಿಫ್ ಅಂಗಡಿ, ಕೋಟೇಶ್ ಬೇವಿನಗಿಡ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts