More

  ಮಾತೃಭಾಷಾ ಶಿಕ್ಷಣ ಸಂಸ್ಥೆಗೆ ಆದ್ಯತೆ : ಡಾ.ವಿಜಯ ಬಲ್ಲಾಳ್ ಸಲಹೆ

  ಕೋಟ: ಆಂಗ್ಲಭಾಷೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳೇ ಪ್ರತಿಭಾವಂತರು ಎಂಬ ಮೌಢ್ಯತೆಯನ್ನು ಪಾಲಕರು ತೊರೆಯಬೇಕು. ಕನ್ನಡ ಶಾಲೆಗಳಲ್ಲಿರುವ ಶಿಕ್ಷಕರೂ ಮಕ್ಕಳಲ್ಲಿ ಬದುಕುವ ಸಾಮರ್ಥ್ಯ ತುಂಬಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಆದ್ಯತೆ ನೀಡಿ ಎಂದು ಶ್ರೀ ಕ್ಷೇತ್ರ ಅಂಬಲಪಾಡಿ ಧರ್ಮದರ್ಶಿ ಡಾ.ವಿಜಯ ಬಲ್ಲಾಳ್ ಹೇಳಿದರು.

  ಹೊಸ ಕಾರ್ಕಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಹಬ್ಬ ಇಂಚರ-2024 ಉದ್ಘಾಟಿಸಿ ಮಾತನಾಡಿದರು.

  ಉದ್ಯಮಿ ಆನಂದ್ ಸಿ.ಕುಂದರ್ ದತ್ತಿನಿಧಿ ಬಹುಮಾನ ವಿತರಿಸಿ ಶುಭಹಾರೈಸಿದರು. ನಿಕಟಪೂರ್ವ ಸಂಚಾಲಕಿ ಲೀಲಾವತಿ ಕಾಮತ್ ಅವರ ಭಾವಚಿತ್ರವನ್ನು ನಿವೃತ್ತ ಮುಖ್ಯಶಿಕ್ಷಕ ಪಿ.ಶ್ರೀಪತಿ ಹೇರ್ಳೆ ಅನಾವರಣಗೊಳಿಸಿದರು. ಮೂಡುಗಿಳಿಯಾರಿನ ಎಸ್‌ಎಚ್‌ಆರ್‌ಎಫ್ ಯೋಗಬನದ ಮುಖ್ಯ ವೈದ್ಯಾಧಿಕಾರಿ ಡಾ.ಮಾನಸ ಉಡುಪ ಸ್ವಸ್ತಿ ವಾಚನಗೈದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿವೇಕಾನಂದ ಗಾಂವ್‌ಕರ್ ಬಹುಮಾನ ವಿತರಿಸಿದರು. ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ವಿಜಯಕುಮಾರ್ ಶೆಟ್ಟಿ ಕ್ರೀಡಾಳುಗಳನ್ನು ಗೌರವಿಸಿದರು.

  ಹಳೇ ವಿದ್ಯಾರ್ಥಿನಿ ಹಾಗೂ ಪಡುಬಿದ್ರಿ ಓಂಕಾರ್ ಕಾಸ್ಟೂೃಮ್ಸ್‌ನ ಗೀತಾ ಅರುಣ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಹಳೇ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

  ಮಣೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡೆನಿಸ್ ಬಾಂಜಿ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಂಭು ಭಟ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್ ಸ್ವಾಗತಿಸಿ, ಶಾಲಾ ವರದಿ ವಾಚಿಸಿದರು. ಶಿಕ್ಷಕ ಸತ್ಯನಾರಾಯಣ ವಂದಿಸಿದರು. ಶಿಕ್ಷಕ ನಾರಾಯಣ ಆಚಾರ್ ಮತ್ತು ಸುಮಾ.ಜಿ ಕಾರ್ಯಕ್ರಮ ನಿರೂಪಿಸಿದರು.

  See also  ಬೆಂಗಳೂರಿನ ವಿವೇಕಾನಂದ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts