More

    ವಿದ್ಯೆ ಜತೆಗೆ ಕೌಶಲವೂ ಅಗತ್ಯ

    ಚನ್ನಪಟ್ಟಣ: ವಿದ್ಯೆಯಿದ್ದು ಕೌಶಲ ಇಲ್ಲದಿದ್ದರೆ ಪ್ರಯೋಜನವಿಲ್ಲ. ವಿದ್ಯೆಯ ಜತೆಗೆ ಕೌಶಲವೂ ಅಗತ್ಯವಾಗಿದೆ. ವಿದೇಶಗಳು ಸ್ಕಿಲ್ ಮ್ಯಾನೇಜ್ಮೆಂಟ್‌ನಲ್ಲಿ ಬಹಳ ಮುಂದಿವೆ. ಆದರೆ, ನಮ್ಮ ದೇಶ ತುಂಬಾ ಹಿಂದೆ ಉಳಿದಿದೆ ಎಂದು ಬೆಂಗಳೂರು ವಿವಿ ಕುಲಪತಿ ಎಸ್. ಎಂ. ಡಾ.ಜಯಕರ್ ಅಭಿಪ್ರಾಯಪಟ್ಟರು.

    ನಗರದ ಶತಮಾನೋತ್ಸವ ಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಜೀವನದಲ್ಲಿ ಚಟುವಟಿಕೆ ಯೋಚನೆಗಳು ಅವಶ್ಯಕವಾಗಿದೆ. ದೇಶದಲ್ಲಿ ಸುಮಾರು 30 ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಬಡತನ, ಆಹಾರ, ಆರೋಗ್ಯ ಕ್ಷೇತ್ರವನ್ನು ಸುಧಾರಣೆ ಮಾಡಬೇಕಿದೆ. ವಿಶ್ವದಲ್ಲಿ ಶೇ.20 ಯುವ ಸಮುದಾಯ ಭಾರತದಲ್ಲಿ ಇದ್ದು, 4.3 ಕೋಟಿ ಯುವಕರು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣ ವ್ಯವಸ್ಥೆ ಯನ್ನು ಇನ್ನುಷ್ಟು ಸುಧಾರಿಸಬೇಕಿದೆ. ವಿಜ್ಞಾನ -ತಂತ್ರಜ್ಞಾನ ಇಂದು ಆದ್ಯತೆ ಕ್ಷೇತ್ರವಾಗಿದೆ. ವಿದ್ಯಾರ್ಥಿಗಳು ದೇಶದ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ಚಿಂತಿಸಬೇಕು ಎಂದು ಕರೆ ನೀಡಿದರು.

    ವಿಷನ್ ಡಿಜಿಟಲ್ ಇಂಡಿಯಾ ಅಧ್ಯಕ್ಷ ಹಾಗೂ ಯುಎಸ್‌ಎ ಗ್ಲೋಬಲ್ ಡಿಜಿಟಲ್ ವಿವಿ ಕುಲಪತಿ ಡಾ. ಹರಿಕೃಷ್ಣ ಮರ್ಮ ಮಾತನಾಡಿ, ದೇಶದ ಶತಮಾನದ ಇತಿಹಾಸ ನೋಡಿದರೆ, ಅಂದಿಗೂ ಇಂದಿಗೂ ಬದಲಾವಣೆ ಕಂಡಿದ್ದು, ಸ್ವಾತಂತ್ರ್ಯ ಬಂದ ನಂತರದ ಎಲ್ಲ ಸರ್ಕಾರಗಳು ಅಭಿವೃದ್ಧಿಗೆ ಆದ್ಯತೆ ನೀಡಿದವು. ಇಂದು ಭಾರತದ ಕಡೆ ವಿಶ್ವದ ವಿಶ್ವಾಸ ಬೆಳೆದಿದೆ. ವಿದೇಶಗಳು ಲಾಂಗ್ ಟರ್ಮ್ ಇನ್ವೆಸ್ಟ್ ಮೆಂಟ್‌ಗೆ ಭಾರತ ಸುರಕ್ಷಿತ ಎಂದು ಭಾವಿಸಿವೆ. ಇದೇ ಮಾದರಿಯಲ್ಲಿ ಅಭಿವೃದ್ಧಿ ಕಂಡರೆ, ನಮ್ಮ ದೇಶ ವಿಶ್ವಕ್ಕೆ ನಂಬರ್ ಒನ್ ಆಗುತ್ತದೆ. ಇವೆಲ್ಲ ಬೆಳವಣಿಗೆಗೆ ಶಿಕ್ಷಣ ಕ್ಷೇತ್ರವೇ ಕಾರಣವಾಗಿದೆ. ಹಲವು ಭಾರತೀಯರು ಇಂದು ವಿಶ್ವದ ದೊಡ್ಡ ಕಂಪನಿಗಳ ಸಿಇಒ ಆಗಿದ್ದಾರೆ. ಇಂದು ನಾವು ವಿಶ್ವಕ್ಕೆ ಕೊಡುಗೆ ನೀಡುವ ಮಟ್ಟಕ್ಕೆ ಬೆಳೆದಿದ್ದೇವೆ. ನಮ್ಮ ದೇಶದ ಔಷಧಗಳು ನೂರಕ್ಕ ಹೆಚ್ಚು ದೇಶಗಳಿಗೆ ರ‌್ತಾಗುತ್ತವೆ. ಮುಂದಿನ ದಿನಗಳಲ್ಲ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಬದಲಾವಣೆ ಆಗಲಿದೆ ಎಂದರು.

    ಪ್ರಾಧ್ಯಾಪಕರಾದ ಪ್ರೊ. ಎಸ್. ಡಾ. ಮುಜಾಹಿದ್ ಖಾನ್, ಪ್ರೊ. ಎನ್. ಶ್ರೀಕಾಂತ್, ಪ್ರೊ. ಆರ್. ಹರೀಶ್ ಕುಮಾರ್, ಆಂಗ್ಲ ಭಾಷಾ ವಿಭಾಗದ ಡಾ. ಎಸ್. ದೀಪ್ತಿ, ಭೌತಶಾಸ್ತ್ರ ವಿಭಾಗದ ಡಾ.ವಿ. ಶಿವಪ್ರಸಾದ್ ಇದ್ದರು.

    ಪರಿಸರ ಹಾಳು ಮಾಡುತ್ತಿರುವ ಕಾರಣ ಗ್ಲೋಬಲ್ ವಾರ್ಮಿಂಗ್ ಹೆಚ್ಚಿದೆ. ಅದು ಇಂದಿನ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದ ಮರಗಳನ್ನು ಬೆಳೆಸಲು ಮತ್ತು ನೀರು ಉಳಿಸಲು ಪ್ರತಿಯೊಬ್ಬರು ಪಣತೊಡಬೇಕು. ಶಿಕ್ಷಣಕ್ಕೆ ಬಹಳ ಮಹತ್ವವಿದೆ. ಇಂಥ ಸಮ್ಮೇಳನದ ಮೂಲಕ ಬೇರೆ ದೇಶಗಳ ವಿಚಾರ ಅರಿಯಲು ಸಹಕಾರಿಯಾಗಿದೆ.

    ಟಿ.ಆರ್. ಶೋಭಾ ಕಾಲೇಜು, ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts