More

    ರಾಜ್ಯ ಶಿಕ್ಷಣ ನೀತಿಗೆ ಡಾ. ಆರ್.ಎಂ. ಕುಬೇರಪ್ಪ ಸ್ವಾಗತ

    ರಾಣೆಬೆನ್ನೂರ: ರಾಜ್ಯ ಶಿಕ್ಷಣ ನೀತಿ ಸ್ವಾಗತಿಸುರುವ ಕೆಪಿಸಿಸಿ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಪ್ರಕಟಣೆ ನೀಡಿರುವ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ 4 ವರ್ಷದ ವರ್ಷ ಪದವಿ ತರಗತಿ, ಒಂದು ವರ್ಷ ಪದವಿ ಅಧ್ಯಯನ ಮಾಡಿದರೆ ಸರ್ಟಿಫಿಕೇಟ್ ಕೋರ್ಸ್, 2 ವರ್ಷದ ಪದವಿ ಅಧ್ಯಯನ ಮಾಡಿದವರಿಗೆ ಡಿಪ್ಲೋಮಾ ಸರ್ಟಿಫಿಕೇಟ್ ಮತ್ತು ಅವೈಜ್ಞಾನಿಕ ಕ್ರೆಡಿಟ್ ಬ್ಯಾಂಕ್ ನಿರ್ಮಾಣ ಮಾಡಿ ಉನ್ನತ ಶಿಕ್ಷಣದ ಸಂಪೂರ್ಣ ಮಾನ ಹರಾಜು ಮಾಡಿದ ಬಿಜೆಪಿಯವರು, ಈಗ ರಾಜ್ಯ ಶಿಕ್ಷಣ ನೀತಿಯನ್ನು ತಳಬುಡವಿಲ್ಲದೇ ರದ್ದು ಮಾಡಿ ಎಂಬ ಕೂಗೆಬ್ಬಿಸಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
    ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು ನೇರವಾಗಿ ಪಿಎಚ್.ಡಿ. ಮತ್ತು ನೆಟ್, ಸೆಟ್‌ಗೆ ಹೊಗುವುದಕ್ಕೆ ತೊಂದರೆಯಾಗಿದೆ. ಆದ್ದರಿಂದ ರಾಜ್ಯ ಶಿಕ್ಷಣ ನೀತಿ ಕೈ ಬಿಡಬೇಕು ಎಂದು ಹೇಳಿರುವುದು ಅವರ ಹುದ್ದೆಗೆ ಘನತೆ ತರುವಂಥದ್ದಲ್ಲ. ಎನ್.ಇ.ಪಿ. ಶಿಕ್ಷಣ ನೀತಿ ಅಳವಡಿಸಿದ ಮೇಲೆ 4 ವರ್ಷದ ಪದವಿಗೆ, ಐವಿ ಸಿಲೆಬಸ್ ಬಿಟ್ಟರೆ ಅಧ್ಯಾಪಕರಿಗೆ ಪಾಠ ಮಾಡಲು ಒಂದು ಪುಸ್ತಕ ಬಿಡಲಿಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ಪಠ್ಯ ಪುಸ್ತಕ ಬಿಡಲಿಲ್ಲ. ಯೂಟ್ಯೂಬ್, ನೆಟ್‌ನಲ್ಲಿ ಪದವಿ ತರಗತಿಗೆ ಅಧ್ಯಯನ ಮಾಡುವಂತಹ ದುರ್ಗತಿ ಉನ್ನತ ಶಿಕ್ಷಣಕ್ಕೆ ಬಂದಿದೆ. ಎನ್.ಇ.ಪಿ. ಪದವಿ ಮುಗಿಸಿದ ಯಾವ ವಿದ್ಯಾರ್ಥಿಗಳಿಗೂ ಈವರೆಗೆ ಓರಿಜನಲ್ ಅಂಕಪಟ್ಟಿ ನೀಡಿರುವುದಿಲ್ಲ, ಆಗಸ್ಟ್- ಸೆಪ್ಟೆಂಬರ್ ತಿಂಗಳಿನಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭ ಮಾಡಿರುವುದು ಸರಿಯಲ್ಲ.
    ಯಾವ ತಜ್ಞರ ಅಭಿಪ್ರಾಯ ಪಡೆಯದೆ, ಕರಡು ಪ್ರತಿ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡದೆ ಯಾವುದೇ ಶೈಕ್ಷಣಿಕ ಮಂಡಳಿ ಅಭಿಪ್ರಾಯ ಪಡೆಯದೆ ಆಯಾ ರಾಜ್ಯಗಳ ಸದನಗಳಲ್ಲಿ ಚರ್ಚೆಯಾಗದೆ, ಯಾರೋ ಮೋದಿಯವರ ಭಟ್ಟಂಗಿಗಳು ರೂಪಿಸಿದ ಶಿಕ್ಷಣ ನೀತಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಎಂದು ದಿಢೀರನೇ ಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕುಬೇರಪ್ಪ ಪ್ರಶ್ನಿಸಿದ್ದಾರೆ.
    ಮಾಹಿತಿ ಇಲ್ಲದ ಎಬಿವಿಪಿ ಹುಡುಗರನ್ನು ಶಿಕ್ಷಣ ವ್ಯವಸ್ಥೆ ವಿರುದ್ಧ ಎತ್ತಿಕಟ್ಟುವುದು ಅತ್ಯಂತ ಪಾಪದ ಕೆಲಸವಾಗುತ್ತದೆ. ಎಸ್.ವಿ. ಸಂಕನೂರ ಅವರು ಅಪ್ರಬುದ್ಧವಾದ ಮತ್ತು ಹಠಮಾರಿತನದ ಪ್ರತಿಕ್ರಿಯೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts