ಅವರಿಬ್ಬರ ನಡುವೆ ಅವಳು ಬಂದಾಗ.. ಕಿತ್ತಾಟ-ರಂಪಾಟ; ಕೊನೆಗೆ ಮೂವರನ್ನೂ ವಶಕ್ಕೆ ಪಡೆದ ಪೊಲೀಸ್​

love
Published on

ಕೊಡೆರ್ಮಾ: ವ್ಯಕ್ತಿಯೊರ್ವನಿಗಾಗಿ ಇಬ್ಬರು ಮಹಿಳೆಯರು ಸಾರ್ವಜನಿಕವಾಗಿಯೇ ಕಿತ್ತಾಡಿರುವ ಘಟನೆ ಝಾರ್ಖಂಡ್​ನ ಕೊಡೆರ್ಮಾ ಎಂಬಲ್ಲಿ ನಡೆದಿದೆ.

ಸಂದೀಪ್ ರಾಮ್​ನಿಗಾಗಿ ಗುಡಿಯಾದೇವಿ ಹಾಗೂ ಪೂಜಾ ಎಂಬ ಮಹಿಳೆಯರೇ, ಇಲ್ಲಿನ ಜನನಿಬಿಡ ಪ್ರದೇಶದವಾದ ಝಂಡಾ ಚೌಕ್‌ನಲ್ಲಿ ಆತನೇ ತಮ್ಮ ಗಂಡ ಎಂದು ಹೇಳಿ ಕಿತ್ತಾಡಿದ್ದಾರೆ. ತಕ್ಷಣವೇ ಸಾರ್ವಜನಿಕರಿಂದ ಮಾಹಿತಿಯನ್ನು ಪಡೆದುಕೊಂಡ ಪೊಲೀಸರ ಸ್ಥಳಕ್ಕೆ ಆಗಮಿಸಿ, ನಂತರ ಮೂವರನ್ನೂ ಠಾಣೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: ದೈಹಿಕ, ಮಾನಸಿಕ ಆರೋಗ್ಯಕ್ಕೆ ಏರೋಬಿಕ್ಸ್ ಸಹಕಾರಿ

ಈ ಕುರಿತು ಪೊಲೀಸರು ಸಂದೀಪ್​ನ ತಂದೆ ಬಚ್ಚುರಾಮ್​ನನ್ನು ವಿಚಾರಿಸಿದ್ದಾರೆ. ಈ ವೇಳೆ ಆತ, 2015ರಲ್ಲಿ ತನ್ನ ಮಗ ಡೊಮ್‌ಚಾಂಚ್​ನ ನಿವಾಸಿ ಗುಡಿಯಾ ದೇವಿಯೊಂದಿಗೆ ಪ್ರೇಮ ವಿವಾಹವಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ಆದರ ಈಗ ಮತ್ತೊಬ್ಬ ಮಹಿಳೆ ಬಂದು ಸಂದೀಪ್ ತನ್ನನ್ನು ಮದುವೆಯಾಗಿದ್ದಾನೆ ಎಂದು ಹೇಳಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದಾನೆ.

ಆದರೆ ಈ ಕುರಿತು ಗುಡಿಯಾ, ತಾನು ಕುಟುಂಬ ಮತ್ತು ಸಮಾಜವನ್ನು ಎದುರುಹಾಕಿಕೊಂಡು ಪ್ರೇಮ ವಿವಾಹ ಮಾಡಿಕೊಂಡು ಇಬ್ಬರೂ ಸಂತೋಷದಿಂದ ಬದುಕುತ್ತಿದ್ದೇವೆ. ಆದರೆ ಸಂದೀಪ್ ಮುಂಬೈನ ಹೋಟೆಲ್‌ನಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಾನೆ. ಮೂರು ದಿನಗಳ ಹಿಂದೆ ಆತ ಮುಂಬೈನಿಂದ ಹಿಂದಿರುಗಿದಾಗ, ಪೂಜಾಳನ್ನು ತನ್ನೊಂದಿಗೆ ಕರೆತಂದಿದ್ದಾನೆ.

ಅಲ್ಲದೇ, ಆಕೆಯು ಮುಂದೆ ಗುಡಿಯಾ ಹಾಗೂ ತನಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದ. ಕೊನೆಗೆ ಸಂದೀಪ್​ ಉಪಾಯವೊಂದನ್ನು ಮಾಡಿ ಗುಡಿಯಾ ಮತ್ತು ಪೂಜಾಳನ್ನೂ ತನ್ನೊಂದಿಗೆ ಇಟ್ಟುಕೊಳ್ಳಲು ಬಯಸಿದ್ದನು. ಆದರೆ ಗುಡಿಯ ಇದರಿಂದ ಸಿಟ್ಟಾಗೆದ್ದು ಜನನಿಬಿಡ ಪ್ರದೇಶದಲ್ಲಿ ಗಲಾಟೆ ಆರಂಭಿಸಿದ್ದಾಗಿ ಆರೋಪಿಸಿದ್ದಾಳೆ.

ಇದನ್ನೂ ಓದಿ: ಹಣ ಕಳೆದುಕೊಂಡರೂ ಮಗಳಿಗೆ ಹೇಗೋ ಲ್ಯಾಪ್​ಟಾಪ್​ ಕೊಡಿಸಿದ ತಂದೆ!

ಕೊನೆಗೆ ಪೊಲೀಸರು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದು, ಈ ಪ್ರಕರಣ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net