More

  ಮುನಿಯಾಲು ಪೇಟೆಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ: ಚಾಲಕ ಸಾವು

  ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಚಾಲಕ ಸಾವಿಗೀಡಾದ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಪಂ ವ್ಯಾಪ್ತಿಯ ಮುನಿಯಾಲು ಪೇಟೆಯಲ್ಲಿ ಗುರುವಾರ ಸಂಜೆ ನಡೆದಿದೆ.

  ಚಟ್ಕಲ್‌ಪಾದೆಯಿಂದ ಮುನಿಯಾಲು ಕಡೆಗೆ ಸಾಗುತಿದ್ದ ಕಾರು, ಕಾರ್ಕಳದಿಂದ ಹೆಬ್ರಿ ಕಡೆಗೆ ಸಾಗುತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಕಾರಿನ ಚಾಲಕ ಜಗದೀಶ್ ಆಚಾರ್(70) ಹಾಗೂ ಮಹಿಳೆಯೋರ್ವರಿಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಜಗದೀಶ್ ಆಚಾರ್ ತೀರಿಕೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರುಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

  ಒಂದೇ ತಿಂಗಳಲ್ಲಿ ಎಂಟು ಅಪಘಾತಗಳು

  ಕಾಡುಹೊಳೆ ಮುನಿಯಾಲು ಚಟ್ಕಲ್ ಪಾದೆ ಮುಖ್ಯರಸ್ತೆಯು ಚತುಷ್ಪಥ ರಸ್ತೆಯಾಗಿ ಮೆಲ್ದರ್ಜೆಗೆ ಏರಿಸಲಾಗುತಿದೆ. ಆದರೆ ಕಳೆದ ಒಂದೂವರೆ ವರ್ಷಗಳಲ್ಲಿ ಅಗಲೀಕರಣ ಕಾಮಗಾರಿ ನಡೆಯುತಿದ್ದರೂ ಇನ್ನೂ ಪೂರ್ಣ ಗೊಂಡಿಲ್ಲ. ಕಾಮಗಾರಿಯ ಇಕ್ಕೆಲಗಳಲ್ಲಿ ಎಲ್ಲಿಯೂ ಬೋರ್ಡ್ ಅಳವಡಿಸಿಲ್ಲ. ಇದರಿಂದಾಗಿ ಸರಣಿ ಅಪಘಾತಗಳು ನಡೆಯುತ್ತಿವೆ. ವೇಗವಾಗಿ ಸಾಗುವ ವಾಹನಗಳಿಗೆ ಬೋರ್ಡ್‌ಗಳಿಲ್ಲದ ಕಾರಣ ದನವೊಂದು ಡಿಕ್ಕಿಯಾಗಿ ಸತ್ತು ಹೋಗಿತ್ತು. ಕಳೆದ ಒಂದೇ ತಿಂಗಳಲ್ಲಿ ಎಂಟು ಅಪಘಾತಗಳು ನಡೆದಿದ್ದು ಲೋಕೋಪಯೋಗಿ ಇಲಾಖೆ ಹಾಗೂ ಗುತ್ತಿಗೆದಾರರು ಸೂಚನಾ ಫಲಕಗಳ ಬೋರ್ಡ್ ಅಳವಡಿಸಿಲ್ಲ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts