ಮೋಜಿಗಾಗಿ ವಿದ್ಯಾರ್ಥಿನಿಯರಿಗೆ ಪದೇ ಪದೇ ವಿದ್ಯುತ್ ಶಾಕ್ ನೀಡಿದ ಎಲೆಕ್ಟ್ರಿಷಿಯನ್...

electrician
ಸಾಂದರ್ಭಿಕ ಚಿತ್ರ
Published on

ವಿಜಯವಾಡ:ಮೂವರು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಮೋಜಿಗೊಸ್ಕರ ಉದ್ದೇಶಪೂರ್ವಕವಾಗಿ ವಿದ್ಯುತ್​ ಶಾಕ್​ ನೀಡಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದ ವಿಜಯವಾಡದ ಎಡುಪುಗಲ್ಲು ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಹೆಂಡತಿ ಸೋತಿದ್ದಕ್ಕೆ, ಅಪ್ಪನ ಪ್ರಾಣವನ್ನೇ ತೆಗೆದ ಮಗ..!?

ಘಟನೆಗೆ ಸಂಬಂಧಿಸಿದಂತೆ ಸೂರಿಬಾಬು (30) ಮತ್ತು ವಿಜಯ ಶೇಖರ್ (45) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಕಂಕಿಪಾಡು ನಿವಾಸಿಗಳು ಎಂದು ಗುರುತಿಸಲಾಗಿದೆ. ಶಾಲಾ ಆಡಳಿತ ಮಂಡಳಿಯು ಆರೋಪಿಗಳಿಗೆ ಎಲೆಕ್ಟ್ರಿಕಲ್ ಔಟ್‌ಲೆಟ್‌ಗಳನ್ನು ಸರಿಪಡಿಸುವಂತೆ ಹೇಳಿತ್ತು. ಈ ವೇಳೆ ಆರೋಪಿ ವಿದ್ಯುತ್ ತಂತಿಗಳನ್ನು ಜೋಡಿಸುವ ವೇಳೆ ಸ್ಟೀಲ್ ಬೆಂಚ್​​ಗೆ ಜೋಡಿಸಿದ್ದು, ಬೆಂಚ್ ಮೇಲೆ ಕುಳಿತಿದ್ದ ಮೂವರು ಬಾಲಕಿಯರಿಗೆ ವಿದ್ಯುತ್ ಶಾಕ್ ತಗುಲಿದೆ.

ಆದರೆ ಆರೋಪಿಗಳು ತಂತಿಗಳನ್ನು ತೆಗೆಯದೇ ಮೋಜಿಗಾಗಿ ಇದನ್ನು ನೋಡುತ್ತ ಸುಮ್ಮನೇ ನಿಂತಿದ್ದು, ಆಗ ಓರ್ವ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದು ಇನ್ನಿಬ್ಬರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.
ಆದರೆ ಈ ಘಟನೆ ಕುರಿತಾಗಿ ಬಾಲಕಿಯರು ಪೋಷಕರಿಗೆ ತಿಳಿಸಿದ್ದು, ಕೂಡಲೇ ಅವರು ಈ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಬಳಿಕ ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net