More

    ಹೆಂಡತಿ ಸೋತಿದ್ದಕ್ಕೆ, ಅಪ್ಪನ ಪ್ರಾಣವನ್ನೇ ತೆಗೆದ ಮಗ..!?

    ಕೋಲ್ಕತ್ತಾ: ಕುಟುಂಬದೊಳಗಿನ ರಾಜಕೀಯ ವೈಷಮ್ಯವಾಗಿ ಪರಿಣಮಿಸಿದ ಪರಿಣಾಮ ಮಗನೊಬ್ಬ ತನ್ನ ಹೆತ್ತ ತಂದೆಯನ್ನು ಹತ್ಯೆ
    ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಬಳಿ ನಡೆದಿದೆ.

    ಇದನ್ನೂ ಓದಿ: ರೈತರನ್ನು ಚಿಂತೆಗೀಡು ಮಾಡಿದ ರಾಸುಗಳ ಮಾರಕ ಕಾಯಿಲೆ: ಲಕ್ಷಣ, ಮುಂಜಾಗ್ರತಾ ಕ್ರಮಗಳು ಇಲ್ಲಿವೆ…

    ಬುರಾನ್ ಮುರ್ಮು(52) ಎಂಬಾತನೇ ಮೃತ ದುರ್ದೈವಿಯಾಗಿದ್ದು, ಮಗ ಬಿಪ್ಲಬ್ ಮುರ್ಮು ಮತ್ತು ಸೊಸೆ ಶರ್ಮಿಳಾ ಮುರ್ಮು ಜತೆಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದನು. ಭಾನುವಾರ ಬೆಳಿಗ್ಗೆ ಕೋಣೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುರಾನ್​ನ ಮೃತದೇಹ ಪತ್ತೆಯಾಗಿದ್ದು, ದೇಹದ ಮೇಲೆ ಅನೇಕ ಗಾಯದ ಗುರುತುಗಳು ಕಂಡು ಬಂದಿವೆ.

    ಹಲವು ದಿನಗಳ ಹಿಂದೆ ಬಂಗಾಳಲ್ಲಿ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಬಿಪ್ಲವ್​ನ ಹೆಂಡತಿಯು ಟಿಎಂಸಿ ಅಬ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಳು. ಈ ವೇಳೆ ಬುರಾನ್​ ಬಿಜೆಪಿಗೆ ಬೆಂಬಲವನ್ನು ನೀಡಿ, ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಆದರೆ ಚುನಾವಣಾ ಫಲಿತಾಂಶ ಬಳಿಕ ಶರ್ಮಿಳಾ ಬಿಜೆಪಿ ಅಭ್ಯರ್ಥಿವ ವಿರುದ್ಧ 56 ಮತಗಳ ಅಂತರದಿಂದ ಸೋತಿದ್ದಳು.

    ಇದನ್ನೂ ಓದಿ: ವೀರಾಂಜನೇಯ ಸ್ವಾಮಿ ದೇವಸ್ಥಾನದ ಹೊಸ್ತಿಲಿಗೆ ಮುಖವಿಟ್ಟು ಕೊನೆಯುಸಿರೆಳೆದ ಕೋತಿ

    ಈ ಹಿನ್ನೆಲೆಯಲ್ಲಿ ತಂದೆ-ಮಗನ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೇ, ಬುರಾನ್ ಮೇಲೆ ಅತನ ಮಗ ಮತ್ತು ಇತರ ತೃಣಮೂಲ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಶರ್ಮಿಳಾಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಪುತ್ರ ಬಿಪ್ಲಬ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts