ವೀರಾಂಜನೇಯ ಸ್ವಾಮಿ ದೇವಸ್ಥಾನದ ಹೊಸ್ತಿಲಿಗೆ ಮುಖವಿಟ್ಟು ಕೊನೆಯುಸಿರೆಳೆದ ಕೋತಿ

Monkey Life
Published on

ಆನೇಕಲ್: ದೇವಾಲಯದ ಬಾಗಿಲಿನಲ್ಲೇ ಮಂಗವೊಂದು ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸರ್ಜಾಪುರದ ರಾಮನಾಯಕನಹಳ್ಳಿಯಲ್ಲಿ ನಡೆದಿದೆ.

ವೀರಾಂಜನೇಯ ಸ್ವಾಮಿ ದೇವಾಲಯದ ಮುಖ್ಯ ದ್ವಾರದ ಬಳಿಯೇ ಕೋತಿ ಪ್ರಾಣ ಬಿಟ್ಟಿದೆ. ಈ ಘಟನೆ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಕೊತ್ತೋಲು ಮುನಯ್ಯ ಎಂಬುವವರು ದಾನವಾಗಿ ನೀಡಿದ್ದ ಜಮೀನಿನಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯವಿದೆ. ಕೋತಿ, ದಿನನಿತ್ಯ ದೇವಾಲಯದ ಬಳಿಯೇ ಓಡಾಡಿಕೊಂಡಿತ್ತು.

ನಿನ್ನೆ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಸಂಜೆ ದೇವಾಲಯದ ಬಾಗಿಲು ಹಾಕಿಕೊಂಡು ಅರ್ಚಕರು ಹೋಗಿದ್ದರು. ಇದೀಗ ಕೋತಿ ದೇವಾಲಯದ ಮುಖ್ಯದ್ವಾರದ ಬಳಿಯೇ ತಲೆ ಇಟ್ಟು ಕೊನೆಯುಸಿರೆಳೆದಿದೆ.

ಈ ವಿಸ್ಮಯಕಾರಿ ಘಟನೆ ತಿಳಿದ ಬಳಿಕ ಗ್ರಾಮಸ್ಥರು ಹಾಗೂ ಸ್ಥಳೀಯ ಜನರು ದೇವಾಲಯದ ಬಳಿ ಜಮಾಯಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net