More

    ಅನಾರೋಗ್ಯಕ್ಕೀಡಾದ ಚಾಲಕನನ್ನು ಆಸ್ಪತ್ರೆಗೆ ಸೇರಿಸಿ ಸ್ವತಃ ಬಿಎಂಟಿಸಿ ಬಸ್​ ಚಲಾಯಿಸಿದ ಎಸಿಪಿ ರಾಮಚಂದ್ರ!

    ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಚಾಲಕನನ್ನು ಆಂಬ್ಯಲೆನ್ಸ್​ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಲ್ಲದೆ, ರಸ್ತೆಯಲ್ಲಿ ನಿಂತಿದ್ದ ಬಿಎಂಟಿಸಿ ಬಸ್​ ಅನ್ನು ಸ್ವತಃ ಚಲಾಯಿಸುವ ಮೂಲಕ ಹಲಸೂರು ಎಸಿಪಿ ರಾಮಚಂದ್ರ ಅವರು ಕರ್ತವ್ಯ ಪ್ರಜ್ಞೆಯ ಜತೆಗೆ ಮಾನವೀಯತೆಯನ್ನು ಮೆರೆದಿದ್ದಾರೆ.

    ಶಿವಾಜಿನಗರ-ಕಾಡುಗೋಡಿ‌ ಮಾರ್ಗದ ಬಿಎಂಟಿಸಿ ಚಾಲಕನಿಗೆ ಮಾರ್ಗ ಮಧ್ಯೆದಲ್ಲಿಯೇ ಅನ್ಯಾರೋಗ್ಯದಿಂದ ಬಳಲಿದರು. ಹೀಗಾಗಿ ಚಾಲಕ ಓಲ್ಡ್ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆ ಬಳಿ ಬಸ್​ ನಿಲ್ಲಿಸಿದ.

    ಇದನ್ನೂ ಓದಿ: ವಿಪಕ್ಷಗಳ ಒಗ್ಗಟ್ಟಿನ ಕಹಳೆ: ಬೆಂಗಳೂರಿನಲ್ಲಿ ಮಹಾಘಟಬಂಧನ್ ಸಭೆ; ಇಂದು ನಿರ್ಣಯ

    ನಗರಕ್ಕೆ ವಿವಿಐಪಿಗಳ ಆಗಮನ ಹಿನ್ನಲೆ ಓಲ್ಡ್ ಏರ್ಪೋರ್ಟ್​ ರಸ್ತೆಯಲ್ಲಿ ಎಸಿಪಿ ರಾಮಚಂದ್ರ ಅವರು ಭದ್ರತೆಗೆ ನಿಯೋಜನೆಗೊಂಡಿದ್ದರು. ಈ ವೇಳೆ ರಸ್ತೆ ಮಧ್ಯ ನಿಂತಿದ್ದ ಬಿಎಂಟಿಸಿ ಬಸ್​ ಅನ್ನು ಸುಮಾರು ಒಂದು ಕಿ.ಮೀ ದೂರದ ಬಸ್​ ನಿಲ್ದಾಣದವರೆಗೆ ಸ್ವತಃ ಚಾಲನೆ ಮಾಡಿದ್ದಾರೆ.

    ಇದಕ್ಕೂ ಮುನ್ನ‌ ಬಸ್​ ಚಾಲಕನನ್ನು ಆಂಬ್ಯುಲೆನ್ಸ್​ ಮೂಲಕ ಬೌರಿಂಗ್ ಆಸ್ಪತ್ರೆಗೆ ಎಸಿಪಿ ರಾಮಚಂದ್ರ ಅವರು ರವಾನಿಸಿದ್ದಾರೆ. ಎಸಿಪಿ, ಬಸ್​ ಚಾಲನೆ ಮಾಡಿರುವ ‌ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ‌ ವೈರಲ್​ ಆಗುತ್ತಿದ್ದು, ಪ್ರಯಾಣಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ಮೂರು ವರ್ಷಕ್ಕೊಮ್ಮೆ ಅಧಿಕ ಮಾಸ

    ಪುರುಷೋತ್ತಮ ಮಾಸದ ಮಹತ್ವ; ಈ ಮಾಸದಲ್ಲಿ ಶುಭಕಾರ್ಯ ವರ್ಜ್ಯ ಯಾಕೆ?

    ವ್ಯವಸ್ಥಿತವಾಗಿ ಜಾರಿಯಾಗಲಿ: ಪ್ಯಾಕ್ಸ್ ಭ್ರಷ್ಟಾಚಾರ ಕಡಿವಾಣಕ್ಕೆ ಕಾಮನ್ ಕೇಡರ್ ಅಥಾರಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts