ಬಸವ ಜಯಂತಿ ಬೃಹತ್ ಮೆರವಣಿಗೆ

1 Min Read
ಬಸವ ಜಯಂತಿ ಬೃಹತ್ ಮೆರವಣಿಗೆ
ಬಸವ ಜಯಂತಿ ಪ್ರಯುಕ್ತ ಕಮಲನಗರದಲ್ಲಿ ಶುಕ್ರವಾರ ಸಂಜೆ ಬೃಹತ್ ಮೆರವಣಿಗೆ ನಡೆಯಿತು.

ಕಮಲನಗರ: ವಿಶ್ವಗುರು ಬಸವಣ್ಣನವರ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ಬಸವೇಶ್ವರ ಮೂರ್ತಿಯ ಬೃಹತ್ ಮೆರವಣಿಗೆ ಶುಕ್ರವಾರ ಸಂಜೆ ನಡೆಯಿತು.

ಪಟ್ಟಣದ ಬಸವೇಶ್ವರ ಮಂದಿರದಿಂದ ಆರಂಭವಾದ ಮೆರವಣಿಗೆಗೆ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಶಿವಣಕರ ಚಾಲನೆ ನೀಡಿದರು. ಮೆರವಣಿಗೆಯು ಬಸವೇಶ್ವರ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಹನುಮಾನ ಮಂದಿರ, ಅಲ್ಲಮಪ್ರಭು ವೃತ್ತದಿಂದ ಸಾಗಿ ಪ್ರವಾಸಿ ಮಂದಿರ, ಶಿವಾಜಿ ವೃತ್ತ, ಅಕ್ಕಮಹಾದೇವಿ ವೃತ್ತದಿಂದ ಬಸವೇಶ್ವರ ಮಂದಿರಕ್ಕೆ ಬಂದು ಕೊನೆಗೊಂಡಿತು.ರ‍್ಯಾಲಿಯುದ್ದಕ್ಕೂ ವಿಶ್ವಗುರು ಬಸವಣ್ಣನಿಗೆ ಜಯವಾಗಲಿ ಎಂಬ ಘೋಷಣೆ ಕೂಗಲಾಯಿತು. ಬೈಕ್ ರ‍್ಯಾಲಿಯಲ್ಲಿ ವಿವಿಧ ಸಮಾಜದ ಯುವಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಚಂದ್ರಕಾAತ ಸಂಗಮೆ, ಅವಿನಾಶ ಶಿವಣಕರ, ಅಜಿತ್ ರಾಗಾ, ಹಾವಗಿರಾವ ಟೊಣ್ಣೆ, ಅಮರ ಶಿವಣಕರ, ಜೀತೇಂದ್ರ ಮಹಾಜನ್, ವಿಜಯಕುಮಾರ ಕೋಡಗೆ, ದತ್ತು ಮಹಾಜನ್, ಬಸವರಾಜ ಭವರಾ, ಕಾರ್ತಿಕ ಬಳತೆ, ರಾಜಶೇಖರ ಮಹಾಜನ್, ಸಾಗರ ಮಿರ್ಚೆ, ಸಂತೋಷ ಕನಾಡೆ, ಸಂತೋಷ ಟೊಣ್ಣೆ, ಗುರು ಶಿವಣಕರ, ಪ್ರವೀಣ ಪಾಟೀಲ್, ಗಣೇಶ ಟೊಣ್ಣೆ, ಶಿವಾನಂದ ವಡ್ಡೆ, ಲಿಂಗಾನಂದ ಮಹಾಜನ್, ಬಸವರಾಜ ಪಾಟೀಲ್, ಪ್ರಭುರಾವ ಬಿರಾದಾರ, ನಾಗೇಶ ಪತ್ರೆ, ಶಿವಶರಣಪ್ಪ ಚಿಕಮುರ್ಗೆ ಇತರರಿದ್ದರು.

See also  ಸಡಗರದ ದಸರಾ ಶೋಭಾಯಾತ್ರೆ  -ಕೇಸರಿ ಬಂಟಿಂಗ್ಸ್, ಭಗವಾದ್ವಜಗಳ ಹಾರಾಟ - ಕಲಾ ತಂಡಗಳ ಮೆರುಗು 
Share This Article