More

    ಮುತ್ತಿನ ರೋಗದ ಬಗ್ಗೆ ನಿಮಗೆಷ್ಟು ಗೊತ್ತು? ಲಕ್ಷಣಗಳೇನು? ಕಾಯಿಲೆಗೆ ಕಾರಣಗಳೇನು? ಇಲ್ಲಿದೆ ಪೂರ್ಣ ಮಾಹಿತಿ…

    ಪ್ರೀತಿಯ ಸಂಕೇತವಾಗಿರುವ ಚುಂಬನ ಕೆಲವೊಮ್ಮೆ ಅಪಾಯಕಾರಿಯು ಹೌದು. ಜಗತ್ತನ್ನೇ ಕಾಡಿದ ಕರೊನಾ ಹರಡಲು ಇದು ರೀತಿಯಲ್ಲಿ ಕಾರಣವಾಗಿದೆ. ಇದೀಗ ಮುತ್ತಿನಿಂದ ಹರಡುವ ಮತ್ತೊಂದು ರೋಗ ಭಯ ಹುಟ್ಟಿಸುವಂತಿದೆ. ಇದನ್ನು ಕಿಸ್ಸಿಂಗ್​ ಡಿಸೀಸ್​ ಅಥವಾ ಮುತ್ತಿನ ರೋಗ ಎಂದೇ ಕರೆಯಲಾಗುತ್ತದೆ. ಹೀಗಾಗಿ ಮುತ್ತು ನೀಡುವಾಗಲು ತುಂಬಾ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.

    ವೇಗವಾಗಿ ಹರಡುವ ರೋಗವಲ್ಲ

    ಮುತ್ತಿನ ರೋಗವನ್ನು ಮಾನೋ ನ್ಯೂಕ್ಲಿಯೊಸಿಸ್ ಎಂತಲೂ ಕರೆಯುತ್ತಾರೆ. ಇದೊಂದು ಸಾಂಕ್ರಮಿಕ ಕಾಯಿಲೆ. ಇದು ಎಪ್ಸ್ಟೀನ್-ಬಾರ್ ವೈರಸ್​ನಿಂದ ಎಂಜಲು ಅಥವಾ ಸಲೈವಾ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಅದರಲ್ಲೂ ಅತಿ ಹೆಚ್ಚು ಚುಂಬನದಿಂದಲೇ ಈ ಕಾಯಿಲೆ ಹರಡುತ್ತದೆ. ಚುಂಬನ ಹೊರತುಪಡಿಸಿದರೆ, ಈ ವೈರಸ್​ ತಗುಲಿದ ವ್ಯಕ್ತಿಯ ಲೋಟವನ್ನು ಶೇರ್​ ಮಾಡಿಕೊಳ್ಳುವುದು ಮತ್ತು ಆತ ಊಟ ಮಾಡಿದ ತಟ್ಟೆಯಲ್ಲಿ ಊಟ ಮಾಡುವುದರಿಂದ ವೈರಸ್​ ಹರಡುತ್ತದೆ. ಆದರೆ, ಸಮಾಧಾನಕರ ಸಂಗತಿ ಏನೆಂದರೆ, ಈ ಮಾನೋನ್ಯೂಕ್ಲಿಯೊಸಿಸ್ ನೆಗಡಿಯಂತೆ ವೇಗವಾಗಿ ಹರಡುವ ರೋಗವಲ್ಲ.

    ಇದನ್ನೂ ಓದಿ: ಅನಾರೋಗ್ಯಕ್ಕೀಡಾದ ಚಾಲಕನನ್ನು ಆಸ್ಪತ್ರೆಗೆ ಸೇರಿಸಿ ಸ್ವತಃ ಬಿಎಂಟಿಸಿ ಬಸ್​ ಚಲಾಯಿಸಿದ ಎಸಿಪಿ ರಾಮಚಂದ್ರ!

    ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆ

    ಅಂದಹಾಗೆ ಚುಂಬನ ರೋಗವನ್ನು ಸಾಮಾನ್ಯವಾಗಿ ಗಂಭೀರ ಕಾಯಿಲೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಅದರ ರೋಗಲಕ್ಷಣಗಳು ತುಂಬಾ ತೀವ್ರವಾಗಿರುತ್ತವೆ. ಇದಲ್ಲದೆ, ಸೋಂಕಿನ ಪರಿಣಾಮವಾಗಿ ಅನೇಕ ಸಮಸ್ಯೆಗಳು ಸಹ ಸಂಭವಿಸುತ್ತವೆ. ಸರಿಯಾದ ಚಿಕಿತ್ಸೆಯ ಬಗ್ಗೆ ಗಮನಹರಿಸದಿದ್ದಲ್ಲಿ ಸೋಂಕಿತ ವ್ಯಕ್ತಿಯು ಹಲವಾರು ವಾರಗಳವರೆಗೆ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

    ರೋಗಲಕ್ಷಣಗಳೇನು?

    ಇತರ ಕಾಯಿಲೆಗಳಂತೆ ಇದರ ಲಕ್ಷಣಗಳು ಸಹ ಕಂಡುಬರುತ್ತವೆ. ಸಾಮಾನ್ಯ ರೋಗಲಕ್ಷಣಗಳು ಯಾವುವೆಂದರೆ ಸುಸ್ತು, ಗಂಟಲು ನೋವು, ಜ್ವರ, ಕುತ್ತಿಗೆ ಮತ್ತು ಕಂಕುಳಲ್ಲಿ ಊದಿಕೊಂಡ ದುಗ್ಧರಸ ಗ್ರಂಥಿಗಳು, ತಲೆನೋವು ಹಾಗೂ ಚರ್ಮದ ದದ್ದುಗಳನ್ನು ಒಳಗೊಂಡಿರಬಹುದು.

    ಇದನ್ನೂ ಓದಿ: ಸಹಕಾರಿ ಭ್ರಷ್ಟಾಚಾರಕ್ಕೆ ಬ್ರೇಕ್: ಕಾಮನ್ ಕೇಡರ್ ಅಥಾರಿಟಿ ಜಾರಿಗೆ ಸರ್ಕಾರ ಚಿಂತನೆ

    ಸೋಂಕಿಗೆ ಒಳಗಾಗಿದವರು ಕಿಸ್ ಮಾಡಬೇಡಿ

    ನಿಮಗೆ ಮುತ್ತಿನ ಕಾಯಿಲೆ ಇದ್ದರೆ, ಯಾರನ್ನೂ ಚುಂಬಿಸಬೇಡಿ. ಈ ರೋಗವು ಲಾಲಾರಸದ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದರ ಹೊರತಾಗಿ ನಿಮ್ಮ ಆಹಾರ, ಪಾತ್ರೆಗಳು, ಲೋಟಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ನಿಮ್ಮ ಜ್ವರ ಸಂಪೂರ್ಣ ಹೋಗುವವರೆಗೆ ನಿಯಮಿತವಾಗಿ ಕೈ ತೊಳೆಯಬೇಕು. (ಏಜೆನ್ಸೀಸ್​)

    ಪತ್ನಿ ಎದುರಲ್ಲೇ ಪತಿ ಹತ್ಯೆ ಪ್ರಕರಣ​: ಭೀಮನ ಅಮಾವಾಸ್ಯೆ ದಿನ ಪಾದ ಪೂಜೆ ಮಾಡಿ ಕೊಲೆಗೆ ಮುಹೂರ್ತ ಇಟ್ಟಿದ್ದೇ ಹೆಂಡತಿ

    ‘ಗುಂಟೂರು ಕಾರಂ’ ಚಿತ್ರದಿಂದ ನಟಿ ಪೂಜಾ ಹೆಗ್ಡೆ ಔಟ್​​, ಮೀನಾಕ್ಷಿ ಚೌಧರಿ ಇನ್​​?

    ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಜೆಟ್​ನಲ್ಲಿ ಅನುದಾನ ಕಡಿಮೆ: ಪರಿಷತ್​ನಲ್ಲಿ ವಿಜಯವಾಣಿ ವರದಿಗಳು ಪ್ರಸ್ತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts