More

    ರೈತರನ್ನು ಚಿಂತೆಗೀಡು ಮಾಡಿದ ರಾಸುಗಳ ಮಾರಕ ಕಾಯಿಲೆ: ಲಕ್ಷಣ, ಮುಂಜಾಗ್ರತಾ ಕ್ರಮಗಳು ಇಲ್ಲಿವೆ…

    ಆನೇಕಲ್: ಮಾರಕ ಖಾಯಿಲೆಯೊಂದು ಕಾಣಿಸಿಕೊಂಡು ಹಲವಾರು ರಾಸುಗಳು ಮೃತಪಟ್ಟಿರುವ ಘಟನೆ ಬೆಂಗಳೂರಿನ ಆನೇಕಲ್​ ಬಳಿ ನಡೆದಿದೆ.

    ಇದನ್ನೂ ಓದಿ: ಜಾಲತಾಣದಲ್ಲಿ ಅವಹೇಳನಕಾರಿ ಬರಹ: IPS​ ಅಧಿಕಾರಿ ಆಕಾಶ್​ ಶಂಕರ್ ವಿರುದ್ಧ ಪತ್ನಿಯಿಂದಲೇ ದೂರು​

    ಒಟೈಟೀಸ್ ಎಂಬ ಮಾರಕ ಖಾಯಿಲೆ ಜಾನುವಾರುಗಳಲ್ಲಿ ಹರಡಿದ್ದು, ಇದರಿಂದಾಗಿ ರೈತರು ಚಿಂತೆಗೊಳಗಾಗಿದ್ದಾರೆ. ಈ ಹಿಂದೆ ತಮಿಳುನಾಡು ಭಾಗದಲ್ಲಿ ಮಾರಕವಾಗಿ ಹರಡಿದ್ದ ಈ ಖಾಯಿಲೆ ಬಂದರೆ ಹಸು ಬದುಕುಳಿಯುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗಿದೆ.

    ಈ ಖಾಯಿಲೆಗೆ ಔಷಧ ಇಲ್ಲದೇ ರೈತರ ಪರದಾಡುತ್ತಿದ್ದು, ಕಳೆದ ವರ್ಷ ಎಮ್.ಸಿ.ಎಫ್​ (Malignant Catarrhval Favor) ಎಂಬುದು ವೈರಲ್ ಖಾಯಿಲೆ ಎಂದು ವಿಜ್ಞಾನಿಗಳು ಹೇಳಿದ್ದರು. ಈ ಜ್ವರವು ವಿರಳವಾದ ರೋಗವಾಗಿದ್ದು, ಒಂದೇ ಜಾನುವಾರುವನ್ನು ಬಾಧಿಸುತ್ತದೆ ಆದರೆ ಕೆಲವೊಮ್ಮೆ ಜಾನುವಾರುಗಳ ಗುಂಪಿನಲ್ಲಿ ತೀವ್ರವಾಗಿ ಬಾಧಿಸುತ್ತದೆ. ಅಲ್ಲದೇ ಈ ರೋಗ ತಗುಲಿದ ನಂತರ ಪ್ರಾರಂಭದಲ್ಲಿ ಕಿವಿ ಸೋರಲು ಪ್ರಾರಂಭವಾಗಿ ಬಳಿಕ ತಲೆ‌ ನೋವು ಕಾಣಿಸಿಕೊಂಡು ಹಸು ಸೊರಗುತ್ತದೆ. ಅನಂತರ ರಾಸುಗಳ ಮೂಗು,ಬಾಯಿ,ಕಿವಿ ಸೋರಿಕೆಯಾಗುವುದು ಈ ರೋಗದ ಲಕ್ಷಣಗಳಾಗಿವೆ.

    ಈ ಕಾಯಿಲೆಯ ಮುಂಜಾಗ್ರತಾ ಕ್ರಮಗಳು ಇಂತಿವೆ:
    ಖಾಯಿಲೆ ಕಾಣಿಸಿಕೊಂಡಾಗ ರಾಸುಗಳನ್ನು ಪ್ರತ್ಯೇಕವಾಗಿ ಕಟ್ಟಿಹಾಕಬೇಕು.
    ಪಶು ವೈದ್ಯರಿಂದ ನಿರಂತರ ಚಿಕಿತ್ಸೆ ಕೊಡಿಸಬೇಕು.
    ಆಂಟಿ ಬಯೋಟೆಕ್, ಐವರ್ ಮೆಕ್ಟೀನ್ ಮುಂತಾದ ಇಂಜೆಕ್ಷನ್​ಗಳನ್ನು ಅಗತ್ಯವಿರುವಾಗ ಚುಚ್ಚಿಸಬೇಕು.
    ಖಾಯಿಲೆ ಇರುವಂತಹ ಹಸು ತಿಂದ ಆಹಾರ ಪದಾರ್ಥವನ್ನು, ಆರೋಗ್ಯದಿಂದಿರುವ ಹಸುವಿಗೆ ನೀಡಬಾರದು.

    ಈ ಮಾರಕ ಕಾಯಿಲೆಯು ಆನೇಕಲ್​ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಹಬ್ಬಿದ್ದು, ಇಂಡ್ಲವಾಡಿ, ಸುರಗಜಕ್ಕನಹಳ್ಳಿ, ವಣಕನಹಳ್ಳಿ, ದಿನ್ನೂರು ಸೇರಿ ಹಲವೆಡೆ ರಾಸುಗಳು ಮೃತಪಟ್ಟಿವೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts