ತುಂಗಭದ್ರಾ ಒಡಲಲ್ಲಿ ನೀರಿಲ್ಲ! 10% ಕೂಡ ತುಂಬದ ಜಲಾಶಯ…

dam
ಖಾಲಿ ಮೈದಾನದಂತೆ ಆಗಿರುವ ತುಂಗಭದ್ರಾ ಒಡಲು
Published on

ವಿಜಯನಗರ: ಐತಿಹಾಸಿಕ ತುಂಗಭದ್ರಾ ಜಲಾಶಯದ ಒಡಲಾಳ ಖಾಲಿಯಾಗುತ್ತಿದ್ದು ಅಪಾಯದ ಹಂತ ತಲುಪಿದೆ. ಸದ್ಯ ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೆಜ್ ಗೆ ತಲುಪಿದ್ದು ಸರಿಯಾಗಿ ಜಲಾಶಯ 10% ಕೂಡ ತುಂಬಿಲ್ಲ.

ರಾಜ್ಯದ ನಾನಾ ಕಡೆ ಮಳೆಯಾಗಿರುವುದು ಎಲ್ಲರಿಗೂ ತಿಳಿದದ್ದೇ. ಅಲ್ಲಿ ಮಳೆಯಾಗುತ್ತದೆ, ಇಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ಹೊರಡಿಸುತ್ತಿರುವುದನ್ನು ನೋಡಿದ್ದೇವೆ. ಆದರೆ ವರುಣ ದೇವನ ಕೃಪೆ ಮಾತ್ರ ಈ ಭಾಗದಲ್ಲಿ ಆಗುತ್ತಿಲ್ಲ.

ಕಳೆದ ವರ್ಷ ಈ ಹೊತ್ತಿಗೆ ಆಗಲೇ 35 ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಿತ್ತು. ಆದ್ರೆ ಈ ಬಾರಿ ಇನ್ನೂ 5 ಟಿಎಂಸಿ ಕೂಡ ಸಂಗ್ರವಾಗಿಲ್ಲ. ತುಂಗಭದ್ರಾ ಜಲಾಶಯಕ್ಕೆ ಒಟ್ಟು 105 ಟಿಎಂಸಿ ಸಂಗ್ರಹ ಮಾಡುವ ಸಾಮರ್ಥ್ಯವಿದೆ.ಆದರೆ ಈ ಬಾರಿ ಕೇವಲ 5 ಟಿಎಂಸಿವರೆಗೆ ಮಾತ್ರವೇ ಸಂಗ್ರಹವಾಗಿ ಭಯದ ವಾತಾವರಣ ಸೃಷ್ಟಿಸಿದೆ.

ಈ ಜಲಾಶಯ, ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಕೆಲ ಜಿಲ್ಲೆಗಳಿಗೆ ಜೀವನಾಡಿಯಾಗಿದೆ. ಆದಷ್ಟು ಬೇಗ ಮಳೆಯಾಗದಿದ್ದಲ್ಲಿ ಜಲಾಶಯದಲ್ಲಿ ನೀರು ಸಂಗ್ರವಿಲ್ಲದ ಕಾರಣ ಈ ಬಾರಿ ರೈತರಿಗೆ ಸಂಕಷ್ಟ ಎದುರಾಗುತ್ತಾ ಎನ್ನುವ ಭಯ ಕೂಡ ಕಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net