ಕರಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ಆಗಿದ್ದು ಇನ್ನೊಂದು ದುರಂತ!

bear attack
Published on

ತುಮಕೂರು: ಇಲ್ಲೊಬ್ಬ ಬೈಕ್​ ಸವಾರ, ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಇನ್ನೊಂದು ಅಪಘಾತಕ್ಕೆ ಒಳಗಾದ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮಂತಪುರದ ನಿವಾಸಿ ಕೃಷ್ಣ (34) ಎಂಬುವವರು ಮಿಡಿಗೇಶಿಯಿಂದ ತಮ್ಮ ಊರಿಗೆ ಹಿಂತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸ್ವಂತ ಊರಿಗೆ ಬೈಕ್​ ಮೇಲೆ ಹಿಂತಿರುಗುತ್ತಿದ್ದಾಗ ಧಿಡೀರನೆ ಕರಡಿ ಅಡ್ಡಬಂದಿದ್ದು ಗಾಬರಿಗೆ ಒಳಗಾದ ಕೃಷ್ಣ, ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ ಚಾಲನೆಯಲ್ಲಿ ವ್ಯತ್ಯಯವಾಗಿದೆ. ಈ ಸಂದರ್ಭ ಬೈಕ್​ನಿಂದ ಆಯತಪ್ಪಿ ಬಿದ್ದ ಕೃಷ್ಣ, ಮಾರಣಾಂತಿಕ ಅಲ್ಲದಿದ್ದರೂ ತೀವ್ರವಾಗಿ ಗಾಯಗೊಂಡಿದ್ದಾರೆ.

ನಂತರ ಸ್ಥಳೀಯರ ಸಹಾಯದಿಂದ ಕೃಷ್ಣ ಮಧುಗಿರಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಾಹಿತಿ ತಿಳಿದ ಅರಣ್ಯಾಧಿಕಾರಿ ಮುತ್ತುರಾಜ್, ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net