More

    ತುಂಗಭದ್ರಾ ಜಲಾಶಯದ ಮುಂದಿನ ಕಿರು ಸೇತುವೆ ಮೇಲೆ ಜನರ ಹುಚ್ಚಾಟ

    ಕೊಪ್ಪಳ: ತಾಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಭಾನುವಾರ ನದಿಗೆ ಅಪಾರ ನೀರು ಬಿಡಲಾಗಿದೆ. ಡ್ಯಾಂ ಮುಂಭಾಗದ ಕಿರು ಸೇತುವೆ ಮೇಲೆ ಜನರು ನೀರು ತುಂಬಿಕೊಳ್ಳುವುದು, ಸೆಲ್ಪಿ ತೆಗೆಯಲು ಹೋಗಿ ಹುಚ್ಚಾಟ ಮೆರೆಯುತ್ತಿದ್ದು ಅಪಾಯ ತಂದುಕೊಳ್ಳುತ್ತಿದ್ದಾರೆ.

    ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳ ಹರಿವು ಹೆಚ್ಚುತ್ತಿದೆ. ಭಾನುವಾರ ಬೆಳಗ್ಗೆ 70 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವು ಮಧ್ಯಾಹ್ನ ವೇಳೆಗೆ 1 ಲಕ್ಷ ವರೆಗೆ ಹೆಚ್ಚಿದೆ. 105 ಟಿಎಂಸಿ ಅಡಿ ಸಾಮರ್ಥ್ಯವಿದ್ದು, 102 ಟಿಎಂಸಿ ಭರ್ತಿಯಾಗಿದೆ. ಹೀಗಾಗಿ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಜಲಾಶಯ ಮುಂಭಾಗದಲ್ಲಿನ ಟಿಬಿ ಡ್ಯಾಂ ಹಾಗೂ ಮುನಿರಾಬಾದ್ ಸಂಪರ್ಕಿಸುವ ಕಿರು ಸೇತುವೆ ಮುಳುಗಲು ಒಂದು ಅಡಿ ಬಾಕಿ ಇದೆ. ಸೇತುವೆಗೆ ಯಾವುದೇ ತಡೆಗೊಡೆ ಇಲ್ಲ. ಭಾನುವಾರ ರಜಾ ದಿನವಾದ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ನೀರು ಕಂಡು ಹರ್ಷಗೊಂಡು ಜನರು ಸೇತುವೆ ಮೇಲೆ ಓಡಾಡಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ ಬಾಟಲ್ ಹಿಡಿದು ಬಗ್ಗಿ ನೀರು ತುಂಬಿಕೊಳ್ಳುವ ಸಾಹಸ ಮೆರೆಯುತ್ತಿದ್ದು, ಅಪಾಯ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts