More

    ಮನೆಯಿಂದಲೇ ಮತದಾನ ಮಾಡಿದ ಶತಾಯುಷಿಗಳು

    ಕೊಪ್ಪಳ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರದಿಂದ 58 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನ ಮತದಾರರ ಮನೆಯಿಂದಲೇ ಮತ ಚಲಾಯಿಸುವ ಕಾರ್ಯ ಆರಂಭವಾಗಿದೆ. ನಗರ ಸೇರಿ ಗ್ರಾಮೀಣ ಭಾಗಗಳಲ್ಲಿ ಅನೇಕರು ಮತ ಚಲಾಯಿಸಿ ಖುಷಿಪಟ್ಟರು.

    ಮೇ 7ರಂದು ಮತದಾನನಡೆಯಲಿದೆ. ವೃದ್ಧರು ಹಾಗೂ ಅಂಗವಿಕಲರಿಗೆ 12ಡಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿದವರಿಂದ ಏ.25ರಿಂದ 30ವರೆಗೆ ಮನೆಗೆ ತೆರಳುವ ಚುನಾವಣಾ ಸಿಬ್ಬಂದಿ ಮತದಾನ ಮಾಡಲು ಅವಕಾಶ ನೀಡಲಿದ್ದಾರೆ. ಇದಕ್ಕಾಗಿ ರೂಟ್‌ಗಳನ್ನು ರಚಿಸಿದ್ದು, ಸಿಬ್ಬಂದಿ ನಿಯೋಜಿಸಲಾಗಿದೆ. ಕೊಪ್ಪಳ ನಗರದ ಬನ್ನಿಕಟ್ಟಿ ನಿವಾಸಿ 103 ವರ್ಷದ ರಾಧಾಬಾಯಿ ಗಡಚಿಂತಿ ಉತ್ಸಾಹದಿಂದ ಮತ ಚಲಾಯಿಸಿದರು. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಆಕ್ಸಿಜನ್ ಹಾಕಿಕೊಂಡಿದ್ದರೂ ಹಕ್ಕು ಚಲಾಯಿಸಿ ವಿಶೇಷತೆ ಮೆರೆದರು. 1952 ರಿಂದ ಲೋಕಸಭೆ, ವಿಧಾನಸಭೆ, ಪುರಸಭೆ, ನಗರಸಭೆ ಸೇರಿದಂತೆ ಇತರ ಸ್ಥಳೀಯ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಿದ್ದಾರೆ. ನಮ್ಮ ಮತ ನಮ್ಮ ಹಕ್ಕು, ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು.

    ಮತದಾನ ಸ್ಥಳಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಭೇಟಿ ನೀಡಿ ಪರಿಶೀಲಿಸಿದರು. ಕೊಪ್ಪಳ ನಗರದ ಶತಾಯುಷಿಗಳಾದ ರಾಧಾಬಾಯಿ ಗಡಚಿಂತಿ, ಕಲಾವತಿ ಹಾಗೂ ಮಾಬಮ್ಮ ಅವರ ಮತದಾನದ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತದಾನ ನಮ್ಮೆಲ್ಲರ ಕರ್ತವ್ಯ. ಇದಕ್ಕೆ ಶತಾಯುಷಿ ಮತದಾರರು ಸಾಕ್ಷಿ. 85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರು ಇತರರಿಗೆ ಮಾದರಿ ಎಂದರು. ಗಿರಿಜಮ್ಮ, ಜೈನಾಬಿ, ಹುಸೇನ್ ಬಿ, ಮೋದಿನಬೀ, ಕರಕವ್ವ, ಪ್ರಲ್ಹಾದ ಆಚಾರ್, ಸುಶಿಲೇಂದ್ರ ಆಚಾರ್, ದಿರೇಂದ್ರ ಆಚಾರ್, ಲಲಿತಾಬಾಯಿ, ಪದ್ಮಾವತಿ, ಸೀತಾಬಾಯಿ, ರಾಜುಬಾಯಿ, ಹನುಮಮ್ಮ, ನಾರಾಯಣರಾವ್ ಇತರರು ಈ ವೇಳೆ ಮತಚಲಾಯಿಸಿದರು.

    ವಿಶೇಷ ಚೇತನ ಮತದಾರರಾದ ಅಮೃತ್, ರಾಧಾಬಾಯಿ, ಗೌಸಿಯಾ ಬೇಗಂ, ಅಶ್ವಿನಿ, ಪುರುಶೋತ್ತಮ್ಮ ಇತರರು ತಮ್ಮ ಹಕ್ಕು ಚಲಾಯಿಸಿದರು. ಕೊಪ್ಪಳ ತಹಸೀಲ್ದಾರ್ ವಿಠ್ಠಲ ಚೌಗಲಾ, ಸೆಕ್ಟರ್ ಅಧಿಕಾರಿ ವಿದ್ಯಾಧರ, ಪೊಲಿಂಗ್ ಅಧಿಕಾರಿಗಳಾದ ಮಲ್ಲಪ್ಪ ಹಾಗೂ ಮರ್ದಾನ, ಬಿ.ಎಲ್.ಒ ಸುಜಾತಾ ಪಾಟೀಲ್ ಹಾಗೂ ರಾಮಣ್ಣ, ಜಿಲ್ಲಾ ಸ್ವೀಪ್ ಸಂಯೋಜಕ ಶ್ರೀನಿವಾಸ ಚಿತ್ರಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts