More

    ಹುಟ್ಟಿದ ದಿನದಿಂದಲೇ ಹಾಲು ನೀಡುತ್ತಿರುವ ಆಕಳು ಕರು !

    ಕೊಪ್ಪಳ: ಸಾಮಾನ್ಯವಾಗಿ ಆಕಳು ಕರು ಹಾಕಿದ ದಿನದಿಂದ ಹಾಲು ಕೊಡುತ್ತದೆ. ಇದು ಪ್ರಕೃತಿ ನಿಯಮ. ಆದರೆ, ಹುಟ್ಟಿದ ದಿನದಿಂದಲೇ ಆಕಳು ಕರುವೊಂದು ಹಾಲು ನೀಡುವುದನ್ನು ನಿವೆಂದು ಕಂಡು, ಕೇಳಿರಲು ಸಾಧ್ಯವಿಲ್ಲ. ಆದರೆ, ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ಆಕಳ ಕರುವೊಂದು ಹುಟ್ಟಿದ ದಿನದಿಂದಲೇ ಹಾಲು ನೀಡುತ್ತಿದ್ದು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

    ಗೊಂಡಬಾಳ ಗ್ರಾಮದ ರೈತ ಹೊನ್ನಪ್ಪ ಮೆತಗಲ್ ಎಂಬುವರು ಕಳೆದ ಐದು ವರ್ಷದಿಂದ ಡೈರಿ ಮಾಡಿಕೊಂಡಿದ್ದಾರೆ. 16 ಆಕಳುಗಳಿದ್ದು, ಎಲ್ಲವೂ ಸಾಮಾನ್ಯವಾಗಿವೆ. ಏ.1ರಂದು ಇವರ ಬಳಿ ಇರುವ ಎಚ್‌ಎಫ್ ತಳಿಯ ಆಕಳು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಅಂದಿನಿAದ ಆಕಳು ಹಾಲು ನೀಡುತ್ತಿದೆ. ಆಗ ತಾನೆ ಜನಿಸಿದ ಹೆಣ್ಣು ಕರು ಸಹ ಹಾಲು ನೀಡಲು ಶುರು ಮಾಡಿದ್ದು ಎಲ್ಲರನ್ನು ಬೆರಗುಗೊಳಿಸಿದೆ. ಕರುವಿನ ಕೆಚ್ಚಲು ಬಾವು ಕಂಡು ಮಾಲೀಕರು ಸುಮ್ಮನಾಗಿದ್ದಾರೆ. ನಂತರ ಹಾಲು ತೊಟ್ಟಿಕ್ಕುವುದನ್ನು ಕಂಡು ಕರೆದಿದ್ದಾರೆ. ಮರು ದಿನ ಎಂದಿನAತೆ ಮತ್ತೆ ಕೆಚ್ಚಲು ಹಾಲಿನಿಂದ ತುಂಬಿಕೊAಡಿದೆ. ಅಂದಿನಿAದ ನಿರಂತರವಾಗಿ ಹಾಲು ಕರೆಯುತ್ತಿದ್ದಾರೆ. ನಿತ್ಯ ಕಾಲು ಲೀಟರ್ ಹಾಲು ನೀಡುತ್ತಿದೆ. ಇದನ್ನು ನೋಡಲು ಜನರು ತಂಡೋಪತAಡವಾಗಿ ಆಗಮಿಸುತ್ತಿದ್ದಾರೆ.

    ಪ್ರಕೃತಿಗೆ ವಿರುದ್ಧ ನಡವಳಿಕೆ ಕಂಡ ಮಾಲೀಕರು ಪಶು ವೈದ್ಯಾಧಿಕಾರಿಗಳಿಂದ ಪರೀಕ್ಷಿಸಿದ್ದಾರೆ. ಆಕಳು ಕರುವಿಗೆ ಜನ್ಮ ನೀಡಿದಿಂದಲೇ ಹಾಲು ನೀಡಲು ಶುರು ಮಾಡುತ್ತದೆ. ಈ ಅವಧಿಯಲ್ಲಿ ದೇಹದಲ್ಲಿ ಹಾರ್ಮೋನು ಬದಲಾವಣೆ ಆಗಲಿದೆ. ತಾಯಿ ಹಾಗೂ ಕರುವಿನ ನಡುವೆ ಕರುಳ ಬಳ್ಳಿ ಸಂಪರ್ಕ ಇರುತ್ತದೆ. ಹಾರ್ಮೋನ್ ಈ ಮೂಲಕ ವರ್ಗಾವಣೆ ಆಗಿರುವ ಸಾಧ್ಯತೆಯಿದೆ. ಇದರಿಂದ ಕರು ಹಾಲು ನೀಡುತ್ತದೆ. ಲಕ್ಷಾಂತರ ಪ್ರಕರಣಲ್ಲಿ ಒಂದು ಈ ರೀತಿ ಘಟನೆ ಸಂಭವಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಾರ್ಮೋನ್ ಪ್ರಮಾಣ ಕಡಿಮೆಯಾದಂತೆ ಕರು ಸಾಮಾನ್ಯ ಸ್ಥಿತಿಗೆ ಬರಲಿದೆ. ಇದರಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಿದ್ದಾರೆ.

    ನಮ್ಮ ಆಕಳು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಆ ಕರು ಹುಟ್ಟಿದಾಗಿನಿಂದ ಹಾಲು ಕೊಡುತ್ತಿದೆ. ಈ ಬಗ್ಗೆ ವೈದ್ಯರನ್ನು ಕೇಳಿದ್ದು ಯಾವುದೇ ಸಮಸ್ಯೆ ಇಲ್ಲವೆಂದು ಹೇಳಿದ್ದಾರೆ. ನಿತ್ಯ ಕಾಲು ಲೀಟರ್ ಹಾಲು ನೀಡುತ್ತಿದೆ. ಅದನ್ನು ಬಳಕೆ ಮಾಡುತ್ತಿದ್ದೇವೆ.

    ಹೊನ್ನಪ್ಪ ಮೆತಗಲ್. ಆಕಳು ಮಾಲಿಕ.

    ಆಕಳು ಕರುವಿಗೆ ಜನ್ಮ ನೀಡುವ ಮುನ್ನ ಹಾಲು ಉತ್ಪಾದಿಸುವ ಹಾರ್ಮೋನ್ ಸೃಷ್ಟಿ ಆಗಲಿವೆ. ಈ ಸಮಯದಲ್ಲಿ ಕರುವಿಗೆ ವರ್ಗಾವಣೆ ಆಗಿರುವ ಸಾಧ್ಯತೆಯಿದೆ. ಹಾರ್ಮೋನ್ ಶಕ್ತಿ ಇರುವಷ್ಟು ದಿನ ಹಾಲು ನೀಡುತ್ತದೆ. ಇದು ಅಪರೂಪದ ಪ್ರಕರಣ. ನನ್ನ 12 ವರ್ಷದ ವೃತ್ತಿ ಬದುಕಿನಲ್ಲಿ ಇಂಥ ಪ್ರಕರಣ ಕಂಡಿಲ್ಲ. ಲಕ್ಷಕ್ಕೊಂದು ಘಟಿಸುತ್ತವೆ. ಕರುವಿಗೆ ಹಾಲು ಉತ್ಪಾದಿಸುವ ಶಕ್ತಿ ಇಲ್ಲ. ಹಾರ್ಮೋನ್ ಪ್ರಮಾಣ ಕಡಿಮೆಯಾದಂತೆ ಕರು ಸಾಮಾನ್ಯ ಸ್ಥಿತಿಗೆ ಬರಲಿದೆ.

    ಡಾ.ವಿನಯಕುಮಾರ್ ಅಂಗಡಿ. ಪಶು ವೈದ್ಯಾಧಿಕಾರಿ ಮುದ್ದಾಬಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts