More

    ಮತದಾನಕ್ಕೆ ಜಿಲ್ಲಾಡಳಿತ ಸಜ್ಜು, ಡಿಸಿ ನಲಿನ್​ ಅತುಲ್​ ಮಾಹಿತಿ

    ಕೊಪ್ಪಳ: ಲೋಕಸಭೆ ಚುನಾವಣೆಗೆ ಮೇ 7ರಂದು ಮತದಾನ ನಡೆಯಲಿದ್ದು, ಜಿಲ್ಲಾದ್ಯಂತ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಹೇಳಿದರು.

    ಕೊಪ್ಪಳ ಕ್ಷೇತ್ರಾದ್ಯಂತ 2,045 ಮತಗಟ್ಟೆಗಳಿದ್ದು, 9,19,499 ಪುರುಷ, 9,46,763 ಮಹಿಳೆ ಹಾಗೂ 135 ಇತರ ಒಟ್ಟು 18,66,397 ಮತದಾರರಿದ್ದಾರೆ. ಮತಗಟ್ಟೆಗಳಲ್ಲಿ ಶೌಚಗೃಹ, ನೆರಳಿನ ವ್ಯವಸ್ಥೆ, ರ್ಯಾಂಪ್​, ವಿದ್ಯುತ್​ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ಮಸ್ಟರಿಂಗ್​ ಕಾರ್ಯ ನಡೆಯಲಿದೆ. ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನಕಗಿರಿ ಕರ್ನಾಟಕ ಪಬ್ಲಿಕ್​ ಶಾಲೆ, ಗಂಗಾವತಿ ಲಯನ್ಸ್​ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳ ಗವಿಸಿದ್ದೇಶ್ವರ ಬಿಇಡಿ ಕಾಲೇಜು, ಸಿಂಧನೂರು ಸರ್ಕಾರಿ ಪದವಿ ಕಾಲೇಜು, ಮಸ್ಕಿ ದೇವನಾಮ ಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಿರಗುಪ್ಪ ಶ್ರೀ ವಿವೇಕಾನಂದ ಪಬ್ಲಿಕ್​ ಸ್ಕೂಲ್​ನಲ್ಲಿ ಮಸ್ಟರಿಂಗ್​, ಡಿಮಸ್ಟರಿಂಗ್​ ನಡೆಯಲಿದೆ.

    ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಧಾನಸಭಾ ಕ್ಷೇತ್ರವಾರು 9 ಭದ್ರತಾ ಕೊಠಡಿ, ಅಂಚೆ ಮತಪತ್ರಕ್ಕೆ 1 ಭದ್ರತಾ ಕೊಠಡಿ ನಿರ್ಮಿಸಲಾಗಿದೆ. ಜೂನ್​4ರಂದು ಮತ ಎಣಿಕೆ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ಚುನಾವನಾ ಕರ್ತವ್ಯಕ್ಕೆ 2,435 ಪಿಆರ್​ಒ, 2,435 ಎಪಿಆರ್​ಒ, 4,869 ಪಿಒ ಹಾಗೂ 248 ಎಂಒಗಳನ್ನು ನೇಮಿಸಲಾಗಿದೆ. ಮೇ 6 ರಂದು ಮತದಾನ ಸಿಬ್ಬಂದಿ ಮಸ್ಟರಿಂಗ್​ ಕೇಂದ್ರಗಳಿಗೆ ತೆರಳುವರು. ಅವರ ಆರೋಗ್ಯ ದೃಷ್ಟಿಯಿಂದ ಕೇಂದ್ರಗಳಲ್ಲಿ ಹೆಲ್ತ್​ ಶೆಲ್ಟರ್​ ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಗೆ ಹೆಲ್ತ್​ ಕಿಟ್​ ಇರಲಿದೆ. ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. 4,990 ಬ್ಯಾಲೆಟ್​ ಯೂನಿಟ್​, 2,657 ಕಂಟ್ರೋಲ್​ ಯೂನಿಟ್​, 2,755 ವಿವಿಪ್ಯಾಟ್​ ಸಿದ್ಧಗೊಳಿಸಲಾಗಿದೆ. ಸಿಬ್ಬಂದಿ ಕರೆದೊಯ್ಯಲು 271 ಸಾರಿಗೆ ಬಸ್​, 115 ಕ್ರೂಸರ್​, 86 ಮಿನಿ ಬಸ್​ ಬಳಸಲಾಗುವುದೆಂದರು.

    76 ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್​ ಪಡೆ ನಿಯೋಜಿಸಲಾಗಿದೆ. 248 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್​ಗಳನ್ನು ನೇಮಕ ಮಾಡಲಾಗಿದೆ. 1,024 ಮತಗಟ್ಟೆಗಳಲ್ಲಿ ವೆಬ್​ ಕಾಸ್ಟಿಂಗ್​ ಇರಲಿದೆ. ಮತದಾರರು ಆಧಾರ್​ ಕಾರ್ಡ್​, ನರೇಗಾ ಜಾಬ್​ಕಾರ್ಡ್​, ಬ್ಯಾಂಕ್​/ಅಂಚೆ ಕಚೇರಿ ಪಾಸ್​ ಬುಕ್​, ಕಾರ್ಮಿಕ ಸಚಿವಾಲಯದ ಆರೋಗ್ಯ ವಿಮೆ ಕಾರ್ಡ್​, ಚಾಲನಾ ಪರವಾನಗಿ, ವಿಶೇಷ ಚೇತನರ ಗುರುತಿನ ಚೀಟಿ, ಪ್ಯಾನ್​ಕಾರ್ಡ್​, ಪಾಸ್​ ಪೋರ್ಟ್​, ಪಿಂಚಣಿ ದಾಖಲೆ, ಕೇಂದ್ರ/ರಾಜ್ಯ/ಪಿಎಸ್​ಯುಗಳ ಸೇವಾ ಗುರುತಿನ ಚೀಟಿ, ಜನ ಪ್ರತಿನಿಧಿಗಳಿಗೆ ನೀಡಿದ ಅಧಿಕೃತ ಗುರುತಿನ ಚೀಟಿ ಬಳಸಿ ಮತ ಚಲಾಯಿಸಬಹುದೆಂದು ಮಾಹಿತಿ ನೀಡಿದರು.

    ಮೇ 5ರ ಸಂಜೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಕಲ್ಯಾಣ ಮಂಟಪ, ಸಮುದಾಯ ಭವನ, ವಸತಿಗೃಹಗಳ ಮೇಲೆ ನಿಗಾವಹಿಸಲಾಗುವುದು. ಚೆಕ್​ಪೋಸ್ಟ್​ನಲ್ಲಿ ಹೊರಗಿನ ಮತದಾರರ ಪ್ರವೇಶ ಪರಿಶೀಲಿಸಲಾಗುವುದು. ಅನುಮತಿ ಇಲ್ಲದೇ ಜಾಹೀರಾತು ಪ್ರಕಟಿಸುವಂತಿಲ್ಲ. 85 ವರ್ಷ ಮೇಲ್ಪಟ್ಟ 1,304 ಮತದಾರರು, 563 ವಿಕಲಚೇತನ ಮತದಾರರು 16 ಇಲಾಖೆ 43, ಚುನಾವಣಾ ಕರ್ತವ್ಯ ನಿರತ 2,752 ಮತದಾರರಿಗೆ ಅಂಚೆ ಮತಪತ್ರ ವಿತರಿಸಲಾಗಿದೆ. ಇದೇ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ 6,721 ಮತದಾರರಿಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರವನ್ನು ನೀಡಿದ್ದು, ಅವರು ಕರ್ತವ್ಯ ನಿರ್ವಹಿಸುವ ಮತಗಟ್ಟೆಯಲ್ಲಿಯೇ ಮತಚಲಾಯಿಸಲು ಅವಕಾಶ ನೀಡಲಾಗಿದೆ ಎಂದರು. ಎಸಿ ಕ್ಯಾ.ಮಹೇಶ್​ ಮಾಲಗಿತ್ತಿ, ಚುನಾವಣಾ ಶಾಖೆಯ ನಾಗರಾಜ, ಶಿವು, ಪ್ರಸನ್ನ ಇತರರಿದ್ದರು.

    ಮಾದರಿ ನೀತಿ ಸಂಹಿತೆ ಉಲ್ಲಂನೆ ಸಂಬಂಧ ಚುನಾವಣಾಧಿಕಾರಿಗಳಿಂದ 6 ಹಾಗೂ ಪೊಲೀಸ್​ ಇಲಾಖೆಯಿಂದ 44 ಪ್ರಕರಣಗಳು ದಾಖಲಾಗಿವೆ. 1,02,42,500ರೂ ಹಣ ಜಪ್ತಿ ಮಾಡಿದ್ದು, ಪರಿಶೀಲನೆ ಬಳಿಕ 69,00,000ರೂ. ಬಿಡುಗಡೆ ಮಾಡಲಾಗಿದೆ. ಅಬಕಾರಿ ಅಧಿಕಾರಿಗಳು 2,44,91,000ರೂ. ಮೌಲ್ಯದ 60,742.42 ಲೀ. ಮದ್ಯ ವಶಕ್ಕೆ ಪಡೆದಿದೆ. ಪೊಲೀಸರು 1,68,000ರೂ. ಮೌಲ್ಯದ 370.98 ಲೀ.ಮದ್ಯ ಜಪ್ತಿ ಮಾಡಿದೆ. ಸಿವಿಜಿಲ್​ನಡಿ 124 ದೂರು ಬಂದಿದ್ದು, ಪರಿಹಾರ ಕಲ್ಪಿಸಲಾಗಿದೆ.

    ನಲಿನ್​ ಅತುಲ್​. ಕೊಪ್ಪಳ ಡಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts