More

  ಡೆಂಘೆ ನಿಯಂತ್ರಣ ಎಲ್ಲರ ಜವಾಬ್ದಾರಿ

  ಕೊಪ್ಪಳ: ಡೆಂಘೆ ಮಾರಕ ರೋಗವಾಗಿದ್ದು, ನಿಯಂತ್ರಣಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಡಿಎಚ್​ಒ ಡಾ.ಟಿ.ಲಿಂಗರಾಜು ಹೇಳಿದರು.

  ಡೆಂಘೆ ಮಾಸಾಚರಣೆ ಅಂಗವಾಗಿ ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡೆಂಘೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿರು.

  ಪ್ರತಿ ವರ್ಷ ಮೇ16ನ್ನು ರಾಷ್ಟ್ರೀಯ ಡೆಂಘೆ ದಿನಾಚರಣೆ ಮಾಡಲಾಗುತ್ತಿದೆ. ರೋಗ ಪ್ರಸರಣ ಮುನ್ನವೇ ಜನರನ್ನು ಜಾಗೃತಗೊಳಿಸಬೇಕಿದೆ. ಈಗಾಗಲೇ ಅಭಿಯಾನ, ಜಾಥಾ, ರ್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ. ರೋಗ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ. ಇಲಾಖೆಯಿಂದ ಅಗತ್ಯ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಡೆಂ, ಚಿಕೂನ್​ ಗೂನ್ಯಾ ರೋಗಕ್ಕೆ ರ್ನಿದಿಷ್ಟ ಚಿಕಿತ್ಸೆ ಇಲ್ಲ. ಆದರೂ ಭಯಪಡುವ ಅಗತ್ಯವಿಲ್ಲ. ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುವುದು. ನಿರಂತರ ಜ್ವರ ಕಂಡುಬಂದಲ್ಲಿ ತಕ್ಷಣ ಪರೀೆ ಮಾಡಿಸಿಕೊಳ್ಳಿ ಎಂದರು.

  ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ ಮಾತನಾಡಿ, ಡೆಂಘೆ ಜ್ವರ ವೈರಸ್​ ಕಾಯಿಲೆ. ಇದು ಈಡಿಸ್​ ಜಾತಿ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಇವು ಬಹುತೇಕ ಹಗಲಿನಲ್ಲಿ ಕಚ್ಚುತ್ತವೆ. ನೀರು ಸಂಗ್ರಹಣೆ ಆಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

  ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಿಂದ ಬಸ್​ ನಿಲ್ದಾಣ ಮಾರ್ಗವಾಗಿ ಜಾಥಾ ಸಾಗಿತು. ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಲಾಯಿತು. ಬಸ್​ ಡಿಪೋದಲ್ಲಿ ವಿಶೇಷ ಲಾರ್ವಾ ಸಮೀೆ ನಡೆಸಿ ಅರಿವು ಮೂಡಿಸಲಾಯಿತು.

  ಜಿಲ್ಲಾ ವಿ.ಬಿ.ಡಿ ಸಲಹೆಗಾರರಾದ ರಮೇಶ್​ ಕೆ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಮಾತನಾಡಿದರು. ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಪ್ರಕಾಶ ಎಚ್​.ಎಸ್​., ಟಿಎಚ್​ಒ ಡಾ.ರಾಮಾಂಜನೇಯ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts