More

    ತುಂಗಭದ್ರಾ ನದಿ ಪಾತ್ರದಲ್ಲಿ ಆತಂಕ ತಂದೊಡ್ಡಿದ ವಿಮಾನ ಹಾರಾಟ

    ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ, ಶೀರನಹಳ್ಳಿ, ಶಿಂಗಟಾಲೂರು, ಹಮ್ಮಿಗಿ, ಗುಮ್ಮಗೋಳ ಭಾಗದಲ್ಲಿ ಅತಿ ಕಡಿಮೆ ಅಂತರದ ಎತ್ತರದಲ್ಲಿ ಕಳೆದೆರಡು ದಿನಗಳಿಂದ ವಿಮಾನ ಹಾರಾಡುತ್ತಿದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಸಮಯದಲ್ಲಿ ಮೂರ‌್ನಾಲ್ಕು ಬಾರಿ ಪದೇಪದೆ ಹಾರಾಟ ನಡೆಸುತ್ತಿದ್ದು, ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
    ವಿಮಾನವು ಬೆಳಗ್ಗೆ, ಮಧ್ಯಾಹ್ನ ಸಮಯದಲ್ಲಿ ತುಂಗಭದ್ರಾ ನದಿ ಪಾತ್ರದ ಹಲವು ಗ್ರಾಮಗಳ ಭಾಗದಲ್ಲಿ ದಿನಕ್ಕೆ ಎರಡ್ಮೂರು ಬಾರಿ ಹೋಗುವುದು, ಬರುವುದು ಮಾಡುತ್ತಿದೆ. ಅತಿ ಕಡಿಮೆ ಎತ್ತರದಲ್ಲಿ ವಿಮಾನ ಸಂಚರಿಸುತ್ತಿರುವುದರಿಂದ ಹೊಲಗಳಲ್ಲಿ ಕೆಲಸ ಮಾಡುವ ರೈತರು, ಅನೇಕ ಗ್ರಾಮಸ್ಥರಲ್ಲಿ ಭಯ ಆವರಿಸಿದೆ.
    ವಿಮಾನವು ಎರಡು ದಿನಗಳಿಂದ ಈ ಭಾಗದಲ್ಲಿ ಹಾರಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಮಾಹಿತಿ ನೀಡಿ ಜನರ ಆತಂಕ ದೂರು ಮಾಡಬೇಕು ಎಂದು ಶೀರನಹಳ್ಳಿ ಗ್ರಾಪಂ ಸದಸ್ಯ ಮೈಲಾರಪ್ಪ ಉದಂಡಿ, ಗುಮ್ಮಗೋಳ ಗ್ರಾಮಸ್ಥ ಶ್ರೀಕಾಂತ ಬಿ.ಜೆ. ಆಗ್ರಹಿಸಿದ್ದಾರೆ. ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ‘ವಿಮಾನ ಹಾರಾಟದ ವಿಷಯ ಎಸ್ಪಿ ಗಮನಕ್ಕೆ ತರಲಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts