More

    ಅಭಿವೃದ್ಧಿಯಲ್ಲಿ ಐತಿಹಾಸಿಕ ಮೈಲಿಗಲ್ಲು

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಕನಸಿನ ಉಡಾನ್ ಯೋಜನೆಯಡಿ ನಿರ್ಮಾಣಗೊಂಡ ಕಲಬುರಗಿ ನಿಲ್ದಾಣದಲ್ಲಿ ರಾತ್ರಿ ವಿಮಾನ ಇಳಿಯುವ ಸೇವೆ ಪ್ರಾರಂಭವಾಗಿರುವುದು ಅಭಿವೃದ್ಧಿ ಮೈಲಿಗಲ್ಲು ಜತೆಗೆ ಈ ಭಾಗದ ಜನರಿಗೆ ಇದೊಂದು ಐತಿಹಾಸಿಕ ಕ್ಷಣ ಎಂದು ಸಂಸದ ಡಾ.ಉಮೇಶ ಜಾಧವ್ ಸಂತಸ ವ್ಯಕ್ತಪಡಿಸಿದರು.

    ಕಲಬುರಗಿ ನಿಲ್ದಾಣದಲ್ಲಿ ಗುರುವಾರ ನೈಟ್ ಲ್ಯಾಂಡಿಂಗ್ ಪ್ರಾರಂಭೋತ್ಸವ ನಿಮಿತ್ತ ಅಲಯನ್ಸ್ ಏರ್ ವಿಮಾನ ಸ್ವಾಗತಿಸಿದ ಅವರು, ಬಹುದಿನಗಳ ಕನಸು ಈಗ ಸಾಕಾರಗೊಂಡಿದ್ದರಿಂದ ಸಂಸದನಾಗಿ ಧನ್ಯತಾ ಭಾವ ಬಂದಿದೆ. ಈ ಸೇವೆ ನಿರಂತರ ಮುಂದುವರಿಯಲು ಪ್ರಯಾಣಿಕರು ಸಹಕರಿಸಬೇಕು ಎಂದು ಕೋರಿದರು.

    ಮುಂದಿನ ದಿನಗಳಲ್ಲಿ ಮುಂಬೈ, ಮಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಸಾಧಿಸಲು ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಜತೆ ಬುಧವಾರವಷ್ಟೇ ಮಾತುಕತೆ ನಡೆಸಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಅಭಿವೃದ್ಧಿ ಕೆಲಸ ನೆರವೇರಲು ನೆರವಾದ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಸಿಂಧಿಯಾ ಅವರಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದ ಅವರು, ಪ್ರತಿ ಗುರುವಾರದ ಈ ನೈಟ್ ಲ್ಯಾಂಡಿಂಗ್ ವಾರವಿಡೀ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಪದ್ಮಾಜಿ ಪಾಟೀಲ್​, ನಿಲ್ದಾಣ ಪ್ರಾಧಿಕಾರದ ಸದಸ್ಯ ನರಸಿಂಹ ಮೆಂಡನ್, ಪ್ರಮುಖರಾದ ಶಿವಕಾಂತ ಮಹಾಜನ್, ಆಕಾಶ, ಗುರುರಾಜ ಭಂಡಾರಿ, ಡಾ.ಸದಾನಂದ ಪೆರ್ಲ, ಉದ್ಯಮಿ ತರುಣ್ ಬೆಂಗಳೂರು, ವಿಮಾನ ನಿಲ್ದಾಣ ವಿಭಾಗದ ಡಿಜಿಎಂ ಬಸವರಾಜ, ಸಹಾಯಕ ಟ್ರಾಫಿಕ್ ಕಂಟ್ರೋಲರ್ ದ್ರುಪದಲ್ ಬ್ರಹ್ಮಚಾರಿ ಇತರರಿದ್ದರು. ವಿಮಾನ ನಿಲ್ದಾಣ ನಿರ್ದೇಶಕ ಮಹೇಶ ಚಿಲ್ಕಾ ಸ್ವಾಗತಿಸಿದರು.

    ತಾಂತ್ರಿಕ ವಿಳಂಬಕ್ಕೆ ವಿಷಾದ: ಅಲಯನ್ಸ್ ಏರ್ ವಿಮಾನ ರಾತ್ರಿ ೮ಕ್ಕೆ ಬೆಂಗಳೂರಿನಿಂದ ಹೊರಡಲು ಅಡಚಣೆ ಉಂಟಾದಾಗ ಖುದ್ದಾಗಿ ಸಂಸ್ಥೆ ನಿರ್ದೇಶಕರನ್ನು ಸಂಪರ್ಕಿಸಿ ಉದ್ಘಾಟನೆ ದಿನದ ವಿಮಾನ ರದ್ದಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದೆ. ಕೊಚ್ಚಿ-ಬೆಂಗಳೂರು ವಿಮಾನ ಕರೆಸಿ ರಾತ್ರಿ ೧೦.೪೦ಕ್ಕೆ ಬೆಂಗಳೂರಿಂದ ಹೊರಟು ೧೧:೪೦ಕ್ಕೆ ಕಲಬುರಗಿಯಲ್ಲಿ ಇಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನನುಕೂಲಕ್ಕೆ ಸಂಸದ ಡಾ.ಜಾಧವ್ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು.

    ಗುತ್ತೇದಾರ್, ಮಹಾಜನ್ ಫಸ್ಟ್ ಪಾಸ್: ಕಲಬುರಗಿಯಿಂದ ಬೆಂಗಳೂರಿಗೆ ಮೊದಲ ಸಲ ರಾತ್ರಿ ಪ್ರಯಾಣಿಕರ ಮೊದಲ ಬೋರ್ಡಿಂಗ್ ಪಾಸ್ ಅನ್ನು ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಮಾಲೀಕಯ್ಯ ಗುತ್ತೇದಾರ್, ಶಿವಕಾಂತ ಮಹಾಜನ್ ಅವರಿಗೆ ಸಂಸದ ಡಾ.ಉಮೇಶ ಜಾಧವ್ ಹಸ್ತಾಂತರಿಸಿ ಪ್ರಯಾಣಕ್ಕೆ ಚಾಲನೆ ನೀಡಿದರು. ನಂತರ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ತಿನ್ನಿಸಿ ಐತಿಹಾಸಿಕ ದಿನದ ಸಂಭ್ರಮ ಹಂಚಿಕೊAಡರು. ಬೋರ್ಡಿಂಗ್ ಪಾಸ್ ಸ್ವೀಕರಿಸಿದ ಮಾಲೀಕಯ್ಯ ಮಾತನಾಡಿ, ಕೊಟ್ಟ ಮಾತು ಉಳಿಸಿಕೊಂಡ ಸಂಸದ ಎಂಬ ಹೆಗ್ಗಳಿಕೆಗೆ ಜಾಧವ್ ಪಾತ್ರರಾಗಿದ್ದಾರೆ. ಫೆ.೨೨ ಐತಿಹಾಸಿಕ ದಿನವನ್ನಾಗಿಸಿ ತಾಂತ್ರಿಕ ಸಮಸ್ಯೆ ವಿಮಾನದಲ್ಲಿ ಕಂಡರೂ ಸ್ವತಃ ಬೆಂಗಳೂರಿನಲ್ಲಿ ಇದ್ದುಕೊಂಡು ಸಂಚಾರ ಸುಗಮವಾಗುವಂತೆ ಮಾಡಿz್ದÁರೆ. ಕಲ್ಯಾಣ ಕರ್ನಾಟಕದ ಜನತೆ ಈ ಸೌಲಭ್ಯ ಬಳಸಿ ಬೆಂಗಳೂರಿನಲ್ಲಿ ಹಗಲು ವೇಳೆ ಕೆಲಸ ಮುಗಿಸಿ ರಾತ್ರಿ ಗ್ರಾಮಾಂತರ ಪ್ರದೇಶಕ್ಕೆ ತಲುಪಬಹುದಾಗಿದೆ ಎಂದರು.

    ಭರ್ತಿಯಾದ ವಿಮಾನ: ಕಲಬುರಗಿಯಿಂದ ಬೆಂಗಳೂರಿಗೆ ಶುರುವಾದ ೭೦ ಆಸನದ ಅಲಯನ್ಸ್ ಏರ್ ವಿಮಾನದಲ್ಲಿ ೬೮ ಪ್ರಯಾಣಿಕರು ಮುಂಗಡ ಟಿಕೆಟ್ ಕಾದಿರಿಸಿದ್ದರು. ವಿಮಾನ ವಿಳಂಬವಾಗಿದ್ದರಿಂದ ೧೧ ಟಿಕೆಟ್ ಕೊನೇ ಕ್ಷಣದಲ್ಲಿ ರದ್ದಾಗಿದ್ದರಿಂದ ೫೭ ಜನ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಬೆಂಗಳೂರಿನಿAದ ಕಲಬುರಗಿಗೆ ಬಂದಿಳಿದಿ ಸಂಸದ ಜಾಧವ್ ಜತೆ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್​, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಅಮರೇಶ್ವರಿ ಚಿಂಚನಸೂರ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಉದ್ಯಮಿ ಸಂಜೀವ್ ಗುಪ್ತಾ ಇತರರಿದ್ದರು. ತಾಂತ್ರಿಕ ಅಡ್ಡಿ ಕಂಡರೂ ಸಂಚಾರ ಯಶಸ್ವಿಗೆ ಶ್ರಮಿಸಿದ ಕಲಬುರಗಿ ನಿಲ್ದಾಣದ ನಿರ್ದೇಶಕ ಮಹೇಶ ಚಿಲ್ಕಾ ಸೇರಿ ಸಿಬ್ಬಂದಿಗೆ ಸಂಸದ ಜಾಧವ್ ಅಭಿನಂದನೆ ಸಲ್ಲಿಸಿದರು. ಮೊದಲ ವಿಮಾನದಲ್ಲಿ ಮಾಲೀಕಯ್ಯ ಗುತ್ತೇದಾರ್, ಶಿವಕಾಂತ್ ಮಹಾಜನ್, ಸುರ್ಜಿತ್ ಪವಾರ್ ಇತರರು ಬೆಂಗಳೂರಿಗೆ ಪ್ರಯಾಣಿಸಿದರು.

    ಮೊದಲ ವಿಮಾನಕ್ಕೆ ನೀರಿನೋಕುಳಿ: ಕಲಬುರಗಿ ನಿಲ್ದಾಣದಲ್ಲಿ ರಾತ್ರಿ ಝಗಮಗಿಸುವ ಬೆಳಕಿನ ನಡುವೆ ಮುಖ್ಯ ಕ್ಯಾಪ್ಟನ್ ಮರ್ವಿನ್ ವಿಲ್ಲಾಲಾಬೋಸ್ ಹಾಗೂ ಎರಡನೇ ಪೈಲಟ್ ಅಕ್ಷಯ್ ಭೂಪ್ತಾನಿ ವಿಮಾನವನ್ನು ಭೂಸ್ಪರ್ಶ ಮಾಡುತ್ತಲೇ ಎರಡು ಕಡೆಗಳಿಂದ ನೀರಿನ ಓಕುಳಿಯೊಂದಿಗೆ ಸಡಗರದ ಸ್ವಾಗತ ಕೋರಲಾಯಿತು. ನಿಲ್ದಾಣವನ್ನು ಬಣ್ಣ ಬಣ್ಣದ ಬಲೂನ್‌ಗಳಿಂದ ಸಿಂಗರಿಸಲಾಗಿತ್ತು.

    ಕಲಬುರಗಿ ವಿಭಾಗೀಯ ಕೇಂದ್ರದಲ್ಲಿ ರಾತ್ರಿ ವೇಳೆ ವಿಮಾನ ಯಶಸ್ವಿಯಾಗಿ ಇಳಿದು ಸೇವೆ ಪ್ರಾರಂಭಿಸಿರುವುದು ಸಂತಸ ತಂದಿದೆ. ಮೊದಲ ವಿಮಾನದಲ್ಲಿ ಬೆಂಗಳೂರಿನಿAದ ೪೬ ಪ್ರಯಾಣಿಕರ ಜತೆ ಆಗಮಿಸುವ ಹಾಗೂ ಕಲಬುರಗಿಯಿಂದ ೫೭ ಜನರನ್ನು ಬೆಂಗಳೂರಿಗೆ ಬೀಳ್ಕೊಡುವ ಸಂದರ್ಭದಲ್ಲಿ ಸಂಭ್ರಮ ಮನೆ ಮಾಡಿತ್ತು.
    | ಡಾ.ಉಮೇಶ ಜಾಧವ್ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts