ಕುವೈತ್​ನಿಂದ ಭಾರತಕ್ಕೆ ಬಂದು ಹೋದ ಬೆನ್ನಲ್ಲೇ ಟ್ರಕ್​ ಚಾಲಕನಿಗೆ ಒಲಿಯಿತು 10 ಕೋಟಿ ಬಂಪರ್ ಬಹುಮಾನ! Truck Driver

Truck Driver

Truck Driver : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥಾ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಪಂಜಾಬ್​ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

55 ವರ್ಷದ ಹರ್ಪಿಂದರ್​ ಸಿಂಗ್​ ಎಂಬುವರು 10 ಕೋಟಿ ರೂಪಾಯಿ ಲಾಟರಿ ಬಹುಮಾನವನ್ನು ಗೆದ್ದಿದ್ದಾರೆ. ಕುವೈತ್‌ನಲ್ಲಿ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿರುವ ಹರ್ಪಿಂದರ್ ಸಿಂಗ್‌ಗೆ ಅದೃಷ್ಟ ದೇವತೆ ಒಲಿದಿದ್ದಾಳೆ. ಹರ್ಪಿಂದರ್ ಸಿಂಗ್ ಅವರು ಪಂಜಾಬ್‌ನ ಬರ್ವಾ ಮೂಲದವರು. ಸದ್ಯ ಕುವೈತ್​ನಲ್ಲಿ ನೆಲೆಸಿದ್ದಾರೆ. ಪಂಜಾಬ್ ಸರ್ಕಾರದ ಲೋಹ್ರಿ ಮಕರ ಸಂಕ್ರಾಂತಿ ಬಂಪರ್ ಲಾಟರಿಯ ಡ್ರಾದಲ್ಲಿ ಅದೃಷ್ಟಶಾಲಿಯಾಗಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೂ ಮುನ್ನ ಹರ್ಪಿಂದರ್ ಸಿಂಗ್ ಊರಿಗೆ ಬಂದಿದ್ದರು. ಈ ವೇಳೆ ನೂರ್ಪುರ್ ಬಂಡಿಯಲ್ಲಿರುವ ಲಾಟರಿ ಅಂಗಡಿಯಿಂದ 500 ರೂ.ಗೆ ಲಾಟರಿ ಟಿಕೆಟ್ ಖರೀದಿಸಿದ್ದರು. ಅದೇ ಲಾಟರಿಯಿಂದ ಅವರ ಅದೃಷ್ಟವೇ ಬದಲಾಗಿದೆ. ಹರ್ಪಿಂದರ್ ಸಿಂಗ್ ಅವರು ತಮ್ಮ ಮಗ ದವೀಂದರ್ ಸಿಂಗ್ ಜೊತೆ ಲಾಟರಿ ಟಿಕೆಟ್ ಖರೀದಿಸಿದ ಅಂಗಡಿಗೆ ಹೋಗಿ ತಂದೆ ಮತ್ತು ಮಗ ಪರಸ್ಪರ ಸಿಹಿತಿಂಡಿಗಳನ್ನು ಹಂಚಿಕೊಳ್ಳುತ್ತಿರುವ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: 148 ವರ್ಷದ ಟೆಸ್ಟ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬ್ಯಾಟಿಂಗ್​ನಲ್ಲಿ ವಿಶ್ವದಾಖಲೆ ಬರೆದ ಬೌಲರ್​ಗಳು! Test Cricket

ಲಾಟರಿ ಬಹುಮಾನದ ಬಗ್ಗೆ ಹರ್ಪಿಂದರ್​ ಸಿಂಗ್​ ಮಾತನಾಡಿದ್ದು, ನಾನು ಕುವೈತ್‌ನಿಂದ ಮನೆಗೆ ಬಂದಾಗಲೆಲ್ಲ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದೆ. ಈಗ ಖರೀದಿಸಿದ ಟಿಕೆಟ್‌ಗೆ ಬಹುಮಾನ ಗೆಲ್ಲುತ್ತೇನೆಂದು ನಾನು ಭಾವಿಸಿರಲಿಲ್ಲ. ನನ್ನ ಮಗನಿಗೆ 2023ರಲ್ಲಿ ಅಪಘಾತವಾಯಿತು. ಅವನಿಗೆ ಇನ್ನೂ ನಡೆಯಲು ಕಷ್ಟವಾಗುತ್ತಿದೆ. ಕುಟುಂಬದಲ್ಲಿ ಹಣಕಾಸಿನ ಬಾಧ್ಯತೆಗಳಿವೆ. ಹೀಗಾಗಿ ಬಹುಮಾನ ಹಣದ ಒಂದು ಭಾಗವನ್ನು ಸಮಸ್ಯೆಗಳನ್ನು ಸರಿಪಡಿಸಲು ಬಳಸಲಾಗುತ್ತದೆ. ಇನ್ನು ಸ್ವಲ್ಪ ಹಣವನ್ನು ವ್ಯವಹಾರದಲ್ಲಿ ಹೂಡಿಕೆ ಮಾಡುತ್ತೇವೆ. ಇದರ ಜೊತೆಗೆ ಕೆಲವು ದತ್ತಿ ಕೆಲಸಗಳನ್ನು ಮಾಡುತ್ತೇವೆ. ಲಾಟರಿ ಗೆದ್ದ ಮಾಹಿತಿ ತಿಳಿದ ನಂತರ ಕುಟುಂಬವು ತುಂಬಾ ಸಂತೋಷವಾಗಿದೆ ಎಂದು ಹರ್ಪಿಂದರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

27 ವರ್ಷದ ನಂತ್ರ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

ನನ್ನ ಮಗನ ಮೇಲೆ ಅವರಿಗೆಲ್ಲ ದ್ವೇಷವಿದೆ: ಶಾಕಿಂಗ್​ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್​ ತಂದೆ! Sanju Samson

Share This Article

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…