27 ವರ್ಷದ ನಂತ್ರ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ ಬದಲಾಯಿಸುತ್ತವೆ. ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಾಯಿಸಿದಾಗ ಅದು ರಾಶಿಚಕ್ರದ ಮೇಲೆ ಹಲವು ವಿಧಗಳಲ್ಲಿ ಪರಿಣಾಮವನ್ನು ಬೀರುತ್ತದೆ. ಕೆಲವರಿಗೆ ಒಳ್ಳೆಯದಾದರೆ, ಇನ್ನು ಕೆಲವರಿ ಕೆಡುಕಾಗಬಹುದು.

ಜ್ಯೋತಿಷ್ಯದಲ್ಲಿ ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿಯು ತನ್ನ ತ್ರಿಕೋನ ಚಿಹ್ನೆಯಾದ ಕುಂಭರಾಶಿ ಮೂಲಕ ಸಾಗುತ್ತಿದೆ. ಶನಿಯನ್ನು ಶಕ್ತಿಶಾಲಿ ಗ್ರಹವೆಂದು ಕರೆಯಲಾಗುತ್ತದೆ. ಅಲ್ಲದೆ, ಇದು ಇತರೆ ಎಲ್ಲ ಗ್ರಹಗಳಿಗಿಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಇದು ಎರಡೂವರೆ ವರ್ಷಗಳ ನಂತರ ಒಂದು ರಾಶಿಯನ್ನು ಬದಲಾಯಿಸುತ್ತಾನೆ. 27 ವರ್ಷಗಳ ನಂತರ ಶನಿಯು, ಗುರು ಗ್ರಹದ ನಕ್ಷತ್ರವಾದ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಪ್ರವೇಶಿಸಿ ಸಂಚರಿಸುತ್ತಿದ್ದಾನೆ.

ಅಂದಹಾಗೆ ಶನಿಯು 2024ರ ಡಿಸೆಂಬರ್ 27ರಂದೇ ಪೂರ್ವ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದೆ. 2025ರ ಏಪ್ರಿಲ್ 28 ರವರೆಗೆ ಇದೇ ನಕ್ಷತ್ರದಲ್ಲಿ ಶನಿಯು ಚಲಿಸುತ್ತಾನೆ. ಶನಿಯ ಈ ಅಪರೂಪದ ಪ್ರಯಾಣವು ಇತರ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಅದೃಷ್ಟವನ್ನು ಪಡೆಯಲಿವೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಇದನ್ನೂ ಓದಿ: ನನ್ನ ಮಗನ ಮೇಲೆ ಅವರಿಗೆಲ್ಲ ದ್ವೇಷವಿದೆ: ಶಾಕಿಂಗ್​ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್​ ತಂದೆ! Sanju Samson

ತುಲಾ ರಾಶಿ

ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿಯ ಸಂಚಾರದಿಂದ ಈ ರಾಶಿಯವರಿಗೆ ಅನೇಕ ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ತರುತ್ತದೆ. ಸ್ನೇಹಿತರೊಂದಿಗೆ ಸಾಮರಸ್ಯ ಇರುತ್ತದೆ ಮತ್ತು ಕಾಣೆಯಾದ ಹಣವು ವಾಪಸ್​ ಬರುತ್ತದೆ. ಈ ರಾಶಿಚಕ್ರ ಚಿಹ್ನೆಯಡಿಯಲ್ಲಿ ಜನಿಸಿದ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಾರೆ. ನೀವು ವಿದೇಶದಲ್ಲಿರುವ ಜನರೊಂದಿಗೆ ಸ್ನೇಹ ಬೆಳೆಸುವಿರಿ. ಅಲ್ಲದೆ, ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಧನುಸ್ಸು ರಾಶಿ

ಶನಿಯು ಪೂರ್ವ ಭಾದ್ರಪದ ನಕ್ಷತ್ರದ ಮೂಲಕ ಸಾಗುತ್ತಿದ್ದು, ಇದು ಧನುಸ್ಸು ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ನೀವು ನಗದು ಆದಾಯದಲ್ಲಿ ಹೆಚ್ಚಳವನ್ನು ಪಡೆಯುತ್ತೀರಿ. ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಅರಸಿ ಬರುತ್ತವೆ ಮತ್ತು ಕೆಲಸದಲ್ಲಿ ಬಡ್ತಿ ಸಿಗುತ್ತದೆ. ನಿಮ್ಮ ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ. ಪೂರ್ಣಗೊಳಿಸದ ಕೆಲಸಗಳು ಕೂಡ ಪೂರ್ಣಗೊಳ್ಳುತ್ತವೆ. ನೀವು ಬಹಳ ದಿನಗಳಿಂದ ಯೋಚಿಸುತ್ತಿದ್ದ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತವೆ.

ಕುಂಭ ರಾಶಿ

ಶನಿಯು ಪೂರ್ವ ಭಾದ್ರಪದ ನಕ್ಷತ್ರದ ಮೂಲಕ ಸಾಗುತ್ತಿರುವುದರಿಂದ, ನಿಮಗೆ ಅನೇಕ ವಿಧಗಳಲ್ಲಿ ಅದೃಷ್ಟ ದೊರೆಯುತ್ತದೆ. ವಿವಾಹಿತರ ಜೀವನದಲ್ಲಿ ಹೆಚ್ಚಿನ ಸಂತೋಷ ಮತ್ತು ಪ್ರೀತಿ ಇರುತ್ತದೆ. ಜೀವನದ ಕಷ್ಟಗಳನ್ನು ಬದಲಾಯಿಸಲು ನೀವು ಕೆಲವು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಯಾವುದೇ ಒಪ್ಪಂದಗಳನ್ನು ಮಾಡಿಕೊಂಡಿದ್ದರೆ, ಅವು ಈಡೇರುತ್ತವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.

ಚಾಂಪಿಯನ್ಸ್​ ಟ್ರೋಫಿಗೆ ಜಡೇಜಾ ಆಯ್ಕೆ ವೇಸ್ಟ್​! ಆತನಿದ್ದಿದ್ದರೆ ಚೆನ್ನಾಗಿರ್ತಿತ್ತು ಅಂದ್ರು ಆಕಾಶ್​ ಚೋಪ್ರಾ | Ravindra Jadeja

ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್​ ಹಾಳಾಗಲು ಶುರುವಾಗಿದೆ ಎಂದರ್ಥ! ಕೂಡಲೇ ಎಚ್ಚೆತ್ತುಕೊಳ್ಳಿ | Liver Health

Share This Article

ವಾಟರ್​ ಬಾಟಲ್​ ಖರೀದಿಸುವಾಗ ಈ ವಿಷಯಗಳ ಬಗ್ಗೆ ನೀವು ಗಮನ ಹರಿಸ್ತೀರಾ? ಕ್ಯಾನ್ಸರ್​ ಕೂಡ ಬರಬಹುದು! Water Bottle

Water Bottle : ತೀವ್ರ ಶಾಖಕ್ಕೆ ಒಡ್ಡಿಕೊಳ್ಳುವ ಬಾಟಲಿ ನೀರನ್ನು ಕುಡಿಯುವುದರಿಂದ ಕ್ಯಾನ್ಸರ್ ಸೇರಿದಂತೆ ಮಾರಕ…

ರಾಕ್ಷಸರ ಗುರು ಶುಕ್ರ ಗ್ರಹದ ಸಂಚಾರ: ಈ 3 ರಾಶಿಯವರಿಗೆ ಮುಂದಿನ 90 ದಿನ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಅಲರಾಂ ಇಲ್ಲದೇ ಬೆಳಗ್ಗೆ ಬೇಗ ಏಳುವುದು ಹೇಗೆ? ಇಲ್ಲಿವೆ ನೋಡಿ ಕೆಲವು ಬೆಸ್ಟ್​ ಟಿಪ್ಸ್​! Alarm

Alarm : ಬೆಳಗ್ಗೆ ಬೇಗ ಎಚ್ಚರಗೊಳ್ಳಲು ಬಹುತೇಕ ಮಂದಿ ಇಂದು ಅಲರಾಂ ಆಶ್ರಯಿಸಿದ್ದಾರೆ. ಅಲರಾಂ ಇಲ್ಲದೇ…