More

    ಗೆಳತಿಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದ ಯುವಕ; ಯೆಸ್ or ನೋ ಏನಂದ್ಲು ಗೊತ್ತಾ ನಾಟಿ ಪೋರಿ?

    ಬೆಂಗಳೂರು: ವ್ಯಾಲೆಂಟೈನ್ಸ್ ಡೇ ಗುಲಾಬಿ ದಿನದಿಂದ ಪ್ರಾರಂಭವಾಗಿ ಪ್ರೇಮಿಗಳ ದಿನದಂದು ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಜಗತ್ತು ಅಕ್ಷರಶಃ ಪ್ರೇಮ ಲೋಕವಾಗಿ ಮಾರ್ಪಡಾಗಿರುತ್ತದೆ. ಇಲ್ಲಿ ಪ್ರೇಮ ಪಕ್ಷಿಗಳು ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಹಾಗೆಯೇ ಇಲ್ಲೋರ್ವ ಬ್ರಿಟಿಷ್ ವ್ಯಕ್ತಿ ತನ್ನ ಗೆಳತಿಗೆ ಪ್ರಪೋಸ್ ಮಾಡಿದ ರೀತಿಯನ್ನು ತಿಳಿದರೆ ಬಹುಶಃ ನೀವು ಅಂತಹ ವಿಶಿಷ್ಟ ಪ್ರೇಮಿಯನ್ನು ನೋಡಿಲ್ಲ ಎಂದು ಹೇಳುತ್ತೀರಿ.

    ಹೌದು, ಬ್ರಿಟನ್‌ನ ಡರ್ಬಿಶೈರ್‌ನ ಜೋ ಮೂರ್ ವಿಶಿಷ್ಟ ರೀತಿಯಾಗಿ ಪ್ರಪೋಸ್ ಮಾಡಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾನೆ. 33 ವರ್ಷದ ಮೂರ್ ವೃತ್ತಿಯಲ್ಲಿ ಕ್ಷೌರಿಕ. ಅವನು ತನ್ನ ಗೆಳತಿಗಾಗಿ ತೊಡೆಯ ಮೇಲೆ ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವ ಮೂಲಕ “ತನ್ನ ಜೀವನ ಸಂಗಾತಿಯಾಗಿ ಇರಲು ಬಯಸುತ್ತೀಯಾ” ಎಂದು ಪ್ರಪೋಸ್ ಮಾಡಿದ್ದಾನೆ. ಅಷ್ಟೇ ಅಲ್ಲ, ಮೂರ್ ಟ್ಯಾಟೂದಲ್ಲಿ ‘ಯೆಸ್’ ಅಥವಾ ‘ನೋ’ ಎಂಬ ಎರಡು ಆಯ್ಕೆಗಳನ್ನು ಇಟ್ಟುಕೊಂಡಿದ್ದರು.

    ಗೆಳತಿಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದ ಯುವಕ; ಯೆಸ್ or ನೋ ಏನಂದ್ಲು ಗೊತ್ತಾ ನಾಟಿ ಪೋರಿ?

    ಈ ಐಡಿಯಾ ಹೇಗೆ ಬಂತು? 
    ವರದಿಗಳ ಪ್ರಕಾರ, ಮೂರ್ ಮತ್ತು 36 ವರ್ಷದ ಸಾರಾ ಕಳೆದ ಮೂರು ವರ್ಷಗಳಿಂದ ಪರಿಚಿತರು. ಮೂರ್ ತನ್ನ ಗೆಳತಿಯನ್ನು ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡಲು ಬಯಸಿದನು. ಆನ್‌ಲೈನ್ ವಿಡಿಯೋ ಕ್ಲಿಪ್ ನೋಡಿದ ನಂತರ ಟ್ಯಾಟೂ ಮೂಲಕ ಪ್ರಪೋಸ್ ಮಾಡುವ ಆಲೋಚನೆ ನನಗೆ ಬಂದಿತು ಎಂದು ಅವರು ಹೇಳಿದ್ದಾರೆ. ಮೂರ್ 10 ಇಂಚಿನ ಹಚ್ಚೆ ಹಾಕಿಸಿಕೊಂಡಿದ್ದು, ಇದರಲ್ಲಿ ಕಾರ್ಟೂನ್ ಪಾತ್ರಗಳಿವೆ. ಇದರಲ್ಲಿ ಒಬ್ಬ ಹುಡುಗ ತನ್ನ ಮೊಣಕಾಲೂರಿ ತನ್ನ ಹೃದಯವನ್ನು ಹುಡುಗಿಗೆ ನೀಡುತ್ತಾನೆ.

    ಮೂರ್ ತನಗೆ ಈ ರೀತಿ ಪ್ರಪೋಸ್ ಮಾಡುತ್ತೇನೆ ಎಂದು ಸಾರಾಗೆ ತಿಳಿದಿರಲಿಲ್ಲ. ಮೂರ್ ತೊಡೆಯ ಮೇಲಿನ ಹಚ್ಚೆ ನೋಡಿ ಸಾರಾಗೆ ಆಶ್ಚರ್ಯವಾಗಿದೆ. ಯಾರಾದರೂ ಈ ರೀತಿ ಪ್ರಪೋಸ್ ಮಾಡಬಹುದೆಂದು ಯೋಚಿಸುತ್ತಾರಾ ಎಂದು ಸಾರಾಗೆ ಆಶ್ಚರ್ಯವಾಯಿತು ಎಂದು ಮೂರ್ ಹೇಳಿದ್ದಾರೆ. ಮೊದಲಿಗೆ ಸಾರಾ ತಲೆ ಅಲ್ಲಾಡಿಸಿ, ಆ ನಂತರ ಯೆಸ್ ಎಂದು ಅವನನ್ನು ಮದುವೆಯಾಗಲು ಒಪ್ಪಿದಳು ಎಂದು ಹೇಳಿದ್ದಾನೆ ಮೂರ್.

    2018 ರಲ್ಲಿ ಇದೇ ರೀತಿ ಎಂಎಂಎ ಫೈಟರ್ ವಿನ್ಸ್ ಮುರ್ಡೋಕ್ ತನ್ನ ಗೆಳತಿ ಕಿರಾ ಫೈಟ್ನರ್‌ಗೆ ಪ್ರಪೋಸ್ ಮಾಡಿದ್ದರು.

    Propose Day 2024: ಪ್ರಪೋಸ್​ ಮಾಡಬೇಕು ಎಂದುಕೊಂಡಿದ್ದರೆ ಈ 5 ಸಲಹೆಗಳು ನಿಮಗೆ ಉಪಯುಕ್ತವಾಗಬಹುದು ಕಣ್ರೀ..!

    ಅಪಾರ ಸಂಪತ್ತಿದ್ದರೂ ಇವರು ಶ್ರೀಮಂತ ನಟ ಅಲ್ಲ, ಅವರಾರೆಂದು ತಿಳಿದರೆ ಆಶ್ಚರ್ಯಪಡುತ್ತೀರಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts