Propose Day 2024: ಪ್ರಪೋಸ್​ ಮಾಡಬೇಕು ಎಂದುಕೊಂಡಿದ್ದರೆ ಈ 5 ಸಲಹೆಗಳು ನಿಮಗೆ ಉಪಯುಕ್ತವಾಗಬಹುದು ಕಣ್ರೀ..!

love
Published on

ಬೆಂಗಳೂರು: ರೋಸ್ ಡೇಯೊಂದಿಗೆ ವ್ಯಾಲೆಂಟೈನ್ಸ್ ಡೇ ಪ್ರಾರಂಭವಾಯಿತು. ವ್ಯಾಲೆಂಟೈನ್ಸ್ ಡೇಯನ್ನು ಫೆಬ್ರವರಿ 7 ರಿಂದ 14 ರವರೆಗೆ ಅನೇಕ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಇಡೀ ವಾರ ಜೋಡಿಗಳಿಗೆ ತುಂಬಾ ವಿಶೇಷವಾಗಿದೆ. ಪ್ರೇಮಿಗಳಿಗೆ ಇದು ವಿಶೇಷವಾದ ತಿಂಗಳು ಹೌದು. ಈ ತಿಂಗಳಲ್ಲಿ ಪ್ರತಿಯೊಬ್ಬರೂ ತಮ್ಮ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಲು ಬಯಸುತ್ತಾರೆ.

ಅಂದಹಾಗೆ ಇಂದು ಪ್ರಪೋಸ್ ಡೇ ಆಚರಿಸಲಾಗುತ್ತಿದೆ. ಆದರೆ ಬಹುತೇಕ ಪ್ರೇಮಿಗಳು ಫೆ.14ರಂದು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಒಂದು ವೇಳೆ ನೀವು ಯಾರಿಗಾದರೂ ತಮ್ಮ ಪ್ರೀತಿ ವ್ಯಕ್ತಪಡಿಸಲು ಬಯಸುತ್ತಿದ್ದರೆ ಯಾವ ರೀತಿ ಪ್ರಪೋಸ್ ಮಾಡಬಹುದು ಎಂಬುದನ್ನು ಇಲ್ಲಿ ಕೊಡಲಾಗಿದೆ ನೋಡಿ.

ಹೂವುಗಳೊಂದಿಗೆ 
ಪ್ರೇಮ ನಿವೇದನೆಗೆ ಉತ್ತಮ ಮಾರ್ಗವೆಂದರೆ ಹೂವುಗಳೊಂದಿಗೆ ಪ್ರಪೋಸ್ ಮಾಡುವುದು. ಇದರಲ್ಲಿಯೂ ನೀವು ವಿವಿಧ ಬಣ್ಣಗಳ ಹೂವುಗಳನ್ನು ನೀಡುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಹೂವುಗಳಲ್ಲಿ, ಗುಲಾಬಿ ಹೊರತುಪಡಿಸಿ ವಿಶೇಷವಾಗಿ ಡೈಸಿ, ಟುಲಿಪ್, ಲಿಲ್ಲಿ ಇತ್ಯಾದಿಗಳನ್ನು ಸಾಮಾನ್ಯವಾಗಿ ಇಷ್ಟಪಡುತ್ತಾರೆ.

ವಿಶೇಷ ಸ್ಥಳ 
ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು, ನಿಮ್ಮ ಸ್ನೇಹಿತೆ ಅಥವಾ ಸ್ನೇಹಿತನನ್ನು ಹಿಂದೆಂದೂ ನೋಡಿರದ ಸ್ಥಳಕ್ಕೆ ಕರೆದೊಯ್ಯಿರಿ. ಆ ವಾತಾವರಣ ಅವರಿಗೆ ತುಂಬಾ ಇಷ್ಟಪಡುತ್ತದೆ. ಅಷ್ಟೇ ಅಲ್ಲ, ನೀವು ಯಾರಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇಷ್ಟಪಡುತ್ತೀರೋ ಅವರು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಜತೆಗೆ ನಿಮಗೆ ಯೆಸ್ ಹೇಳುತ್ತಾರೆ. ಇದು ನಿಮ್ಮ ಜೀವನದಲ್ಲಿ ಸುಂದರವಾದ ನೆನಪಾಗಿ ಉಳಿಯುತ್ತದೆ.

ಅವರಿಗಿಷ್ಟವಾದ ತಿನಿಸು 
ರೊಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸಲು ನಿಮ್ಮ ಸ್ನೇಹಿತ/ಸ್ನೇಹಿತೆಯನ್ನು ಊಟಕ್ಕೆ ಕರೆದುಕೊಂಡು ಹೋಗಿ. ಇಲ್ಲಿ ಉತ್ತಮ ಸಮಯವನ್ನು ಕಳೆಯಲು ಸಹಾಯ ಮಾಡುತ್ತದೆ. ವಿಶೇಷವಾಗಿ ಅವರ ನೆಚ್ಚಿನ ಸ್ಥಳಕ್ಕೆ ಕರೆದುಕೊಂಡು ಹೋಗಿ. ಇಲ್ಲವಾದಲ್ಲಿ ಅವರಿಗಿಷ್ಟವಾದ ಅಡುಗೆಯನ್ನು ನೀವೇ ನಿಮ್ಮ ಕೈಯಾರೆ ಬಿಡಿಸಿ.

ನೆಚ್ಚಿನ ಉಡುಗೊರೆ 
ಯಾರನ್ನಾದರೂ ಪ್ರಪೋಸ್ ಮಾಡಬೇಕೆಂದುಕೊಂಡಿದ್ದರೆ ಉಡುಗೊರೆಗಳನ್ನು ನೀಡುವುದು ಉತ್ತಮ. ಬೇಕಾದರೆ ನೀವೇ ಉಡುಗೊರೆಯನ್ನು ತಯಾರಿಸಿ ಕೊಡುವುದು ಇನ್ನು ಚೆನ್ನಾಗಿರುತ್ತದೆ.

ಬರೆಯುವ ಮೂಲಕ 
ನಿಜ ಹೇಳಬೇಕೆಂದರೆ ಪ್ರಪೋಸ್ ಮಾಡುವುದಕ್ಕೆ ಭಯಪಡುವ ಅನೇಕ ಜನರಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಬರೆಯುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಇದರೊಂದಿಗೆ, ನಿಮ್ಮ ಸ್ನೇಹಿತ/ಸ್ನೇಹಿತೆಗೆ ಗುಲಾಬಿ ಹೂವುಗಳನ್ನು, ಸುಂದರವಾದ ಉಡುಗೊರೆಗಳನ್ನು ನೀಡುವ ಮೂಲಕ ಪ್ರಪೋಸ್ ಮಾಡಬಹುದು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net