ಈಡೇರಿದ ಸಂತಾನ ಭಾಗ್ಯದ ಹರಕೆ…ದೀರ್ಘದಂಡ ನಮಸ್ಕಾರ ಹಾಕುತ್ತಾ ಶ್ರೀಶೈಲಕ್ಕೆ ಹೊರಟ ಕುಟುಂಬ

bagalkote
Published on

ಬಾಗಲಕೋಟೆ: ಸಂತಾನ ಭಾಗ್ಯದ ಹರಕೆ ಈಡೇರಿದ ಪರಿಣಾಮ ಕುಟುಂಬವೊಂದು ದೀರ್ಘದಂಡ ನಮಸ್ಕಾರ ಹಾಕಿಕೊಂಡು ಶ್ರೀಶೈಲಕ್ಕೆ ಹೊರಟಿದೆ. ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಿಂದ ಶ್ರೀಶೈಲವರೆಗೂ ದೀಢ್​​​ ನಮಸ್ಕಾರ ಹಾಕುತ್ತಾ ಹೊರಟಿದ್ದಾರೆ ಆಲಬಾಳ ಕುಟುಂಬದ ದಾನಮ್ಮ ಹಾಗೂ ಸಹೋದರ ಮಹಾಲಿಂಗಯ್ಯ. ಸುಮಾರು 500 ಕಿ.ಮೀ.ಗೂ ಅಧಿಕ ದೀರ್ಘದಂಡ ನಮಸ್ಕಾರ ಹಾಕಲಾಗುತ್ತಿದೆ.

ಮಹಾಲಿಂಗಯ್ಯ ಕುಟುಂಬ ಮಕ್ಕಳಾಗಲಿ ಎಂದು ಹರಕೆ ಹೊತ್ತಿಕೊಂಡಿತ್ತು ಎನ್ನಲಾಗಿದೆ. ಮಕ್ಕಳಿಬ್ಬರೂ ದೀರ್ಘದಂಡ ನಮಸ್ಕಾರ ಹಾಕುತ್ತ ಸಾಗಿದರೆ, ಅವರ ಜೊತೆ ಪಾದಯಾತ್ರೆ ಮೂಲಕ ತಂದೆ ಮಹಾದೇವಯ್ಯ ಹಾಗೂ ತಾಯಿ ಶಾಂತಾ ಸಾಥ್ ನೀಡಿದ್ದಾರೆ. ಅಂದಹಾಗೆ ಮಹಾದೇವಯ್ಯ ಅವರು ಶಾಮಿಯಾನ ಉದ್ಯೋಗ ಮಾಡುತ್ತಿದ್ದಾರೆ.

30 ದಿನಗಳವರೆಗೆ ದೀಢ್​​​ ನಮಸ್ಕಾರ ಹಾಕುತ್ತ ಶಿವರಾತ್ರಿಗೆ ಶ್ರೀಶೈಲ ತಲುಪಲಿದೆ ಕುಟುಂಬ. ಈಗ ಮೂರು ದಿನ ಮುಗಿಸಿದ್ದು, ಇನ್ನೂ 27 ದಿನ ದೀಢ್ ನಮಸ್ಕಾರ ಹಾಕುತ್ತ ಹೋಗಲಿದ್ದಾರೆ ದಾನಮ್ಮ ಮತ್ತು ಮಹಾಲಿಂಗಯ್ಯ.

ಮಹಾದೇವಯ್ಯ ಕಳೆದ 25 ವರ್ಷಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತ ಬಂದಿದ್ದಾರಂತೆ. ಕಾಯಿಲೆಯಿಂದ ಬಳಲುತ್ತಿದ್ದಾಗಲೂ ಮಹಾದೇವಯ್ಯ ಶ್ರೀಶೈಲ ಮಲ್ಲಯ್ಯನಿಗೆ ಹರಕೆ ಹೊತ್ತ ಬಳಿಕ ಗುಣಮುಖ ಆಗಿದ್ದಾಗಿ ನಂಬಿಕೆ. ಪ್ರತಿ ವರ್ಷ ಯುಗಾದಿಗೆ ಜರುಗುವ ಜಾತ್ರೆ ವೇಳೆ ಕುಟುಂಬ ಪಾದಯಾತ್ರೆ ಹೋಗುತ್ತದೆ. ಈಗ ಮಹಾದೇವಯ್ಯ ಅವರ ಪುತ್ರನಿಗೆ ಸಂತಾನ ಆಗಿದ್ದರಿಂದ ಹರಕೆ ತೀರಿಸಲು ತೆರಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net