ಆಗ್ರಾ: ಇತ್ತೀಚಿನ ದಿನಗಳಲ್ಲಿ ರೀಲ್ಸ್ (Reel) ಸಂಬಂಧಿತ ಅವಘಡಗಳು ಹೆಚ್ಚಾಗುತ್ತಿದ್ದು, ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೀಗ ಉತ್ತರಪ್ರದೇಶದ ಆಗ್ರಾದಲ್ಲಿ ಯುವಕನೋರ್ವ ಸ್ಲೋ ಮೋಷನ್ ರೀಲ್ಸ್ ಮಾಡುವ ವೇಳೆ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯು ಆಗ್ರಾದ ಸರ್ರಾಫಾ ಬಜಾರ್ನಲ್ಲಿ ನಡೆದಿದ್ದು, ಮೃತನನ್ನು ಆಸಿಫ್ (Asif) ಎಂದು ಗುರುತಿಸಲಾಗಿದೆ. ಘಟನೆ ನಡೆದ ವೇಳೆ ಆಸಿಫ್ ಸ್ನೇಹಿತರು ಕೂಡ ಜತೆಯಲ್ಲಿದ್ದರು ಅಂತಿಮವಾಗಿ ಗೆಳೆಯನನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
आगरा – सर्राफा बाजार में हुआ दर्दनाक हादसा
— भारत समाचार | Bharat Samachar (@bstvlive) October 19, 2024
➡रील बनाने के दौरान युवक की गई जान
➡स्लो मोशन में रील बना रहा था युवक
➡जाल हटाने में 3 मंजिल से नीचे गिरा युवक
➡युवक के सिर और गर्दन में आई थी गंभीर चोटें
➡गर्दन कटने के बाद लोग ले गए थे अस्पताल
➡अस्पताल पहुंचते ही डॉ ने युवक को… pic.twitter.com/ppDgtAk8fd
ಇದನ್ನೂ ಓದಿ: ನ್ಯೂಜಿಲೆಂಡ್ ಎದುರು ಐತಿಹಾಸಿಕ ಸೋಲು; Team India ನಾಯಕ Rohit Sharma ಹೇಳಿದ್ದಿಷ್ಟು
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಕಟ್ಟಡವೊಂದರಲ್ಲಿ ಆಸಿಫ್ (Asif) ತನ್ನ ಸ್ನೇಹಿತರೊಂದಿಗೆ ಸ್ಲೋ ಮೋಷನ್ ರೀಲ್ಸ್ (Reel) ಚಿತ್ರೀಕರಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಸೇಫ್ಟಿ ರೇಲಿಂಗ್ (Railing) ತೆರೆದು ನೋಡಲು ಹೋದಾಗ ಆತ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಅಲ್ಲಿದ್ದವನು ಆತನನ್ನು ಹಿಡಿಯಲು ಮುಂದಾದನಾದರೂ ವಿಫಲನಾಗುತ್ತಾನೆ. ಕೂಡಲೇ ಆತನ ರಕ್ಷಣೆಗೆ ಧಾವಿಸಿದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು, ತಲೆ ಮತ್ತು ಕುತ್ತಿಗೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಕುರಿತು ಮಾತನಾಡಿರುವ ಆಗ್ರಾ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer), ಸರ್ರಾಫಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಆಸಿಫ್ ಎಂದು ಗುರುತಿಸಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತನ ಜತೆಯಲ್ಲಿದ್ದ ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಘಟನೆಯ ಕುರಿತಾಗಿ ಮಾಹಿತಿ ನೀಡಿದ್ದಾರೆ.