ಬೆಂಗಳೂರು: 25ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಭಾರತ (Team India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಟೆಸ್ಟ್ ಸರಣಿಯ (Test Series) ಮೊದಲ ಮ್ಯಾಚ್ನಲ್ಲಿ ಆತಿಥೇಯರು ಭಾರೀ ಮುಖಭಂಗವನ್ನು ಅನುಭವಿಸಿದ್ದು, ಪ್ರವಾಸಿ ಕಿವೀಸ್ ಪಡೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ತವರು ನೆಲದಲ್ಲಿ ಭಾರೀ ಮುಖಭಂಗವನ್ನು ಅನುಭವಿಸಿರುವ ಟೀಮ್ ಇಂಡಿಯಾ (Team India) ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಅವಲೋಕಿಸುತ್ತಿದ್ದು, ಈ ಬಗ್ಗೆ ನಾಯಕ ರೋಹಿತ್ ಶರ್ಮ (Rohit Sharma) ಮಾತನಾಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಈ ಕುರಿತು ಮಾತನಾಡಿದ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮ (Rohit Sharma), ನಾನು ಎರಡನೇ ದಿನ ನಡೆದ ಸುದ್ದಿಗೋಷ್ಠಿಯಲ್ಲಿ (Press Meet) ಈ ಬಗ್ಗೆ ಹೇಳಿದ್ದೇನೆ. ಮೋಡ ಕವಿದ ವಾತಾವರಣ ಹಾಗೂ ಟ್ರಿಕ್ಕಿ ಪಿಚ್ ನಮಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ನಾವು 46 ರನ್ಗಳಿಗೆ ಆಲೌಟ್ ಆಗುತ್ತೇವೆ ಎಂದು ಭಾವಿಸಿರಲಿಲ್ಲ. ಇದರ ಸಂಪೂರ್ಣ ಕ್ರೆಡಿಟ್ ನ್ಯೂಜಿಲೆಂಡ್ಗೆ ಸಲ್ಲುತ್ತದೆ. ಅಂತಿಮವಾಗಿ ನಾವು ಸೋಲನ್ನು ಒಪ್ಪಿಕೊಳ್ಳಬೇಕಿದ್ದು, ಮುಂದಿನದ್ದನ್ನು ಯೋಚನೆ ಮಾಡಬೇಕಿದೆ.
ಇದನ್ನೂ ಓದಿ: ಆತನಿಗಿಂತ ನಮ್ಮ ನಸೀಮ್ ಉತ್ತಮ ಬೌಲರ್; Jasprit Bumrah ಕುರಿತು Pak ಕ್ರಿಕೆಟಿಗನ ಶಾಕಿಂಗ್ ಹೇಳಿಕೆ
ಎರಡನೇ ಇನ್ನಿಂಗ್ಸ್‌ನಲ್ಲಿ ನಾವು ಉತ್ತಮ ಬ್ಯಾಟಿಂಗ್ ಮಾಡಿದ್ದೆವು. ಆದರೆ ಮೊದಲ ಇನಿಂಗ್ಸ್ನಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದು ನಮ್ಮ ಪಾಲಿಗೆ ಮುಳುವಾಯಿತು. ಅಲ್ಲದೆ ನ್ಯೂಜಿಲೆಂಡ್ (NewZealand) ತಂಡವು 350 ರನ್ಗಳಿಂದ ಹೆಚ್ಚಿನ ಮುನ್ನಡೆ ಪಡೆದಿದ್ದರಿಂದ ಪಂದ್ಯದ ಫಲಿತಾಂಶ ಏನಾಗಲಿದೆ ಎಂದು ಸಹ ತಿಳಿದಿತ್ತು. ಆದರೆ ದ್ವಿತೀಯ ಇನಿಂಗ್ಸ್ನಲ್ಲಿ (Second Innings) ನಮ್ಮ ಬ್ಯಾಟರ್ಗಳು ಹೋರಾಟದ ಮನೋಭಾವ ತೋರಿದ್ದು ಉತ್ತಮ ಬೆಳವಣಿಗೆಯಾಗಿದೆ. ಸರ್ಫರಾಜ್ (Sarafaraz Khan) ಹಾಗೂ ರಿಷಭ್ (Rishab Pant) ಬ್ಯಾಟಿಂಗ್ ಮಾಡಿದ ರೀತಿ ನಮಗೆ ಹೊಸ ಭರವಸೆಯನ್ನು ಹುಟ್ಟುಹಾಕಿತ್ತು. ಆದರೆ ಆ ಬಳಿಕ ನಾವು ಮತ್ತೆ ವೈಫಲ್ಯ ಕಂಡೆವು. ಇದರ ಸಂಪೂರ್ಣ ಲಾಭ ಪಡೆದ ನ್ಯೂಜಿಲೆಂಡ್ (NewZealand) ತಂಡವು ಯಶಸ್ಸು ಕಂಡರು.
ಇದೀಗ ಒಂದು ಪಂದ್ಯ ಮಾತ್ರ ಮುಗಿದಿದೆ. ಇನ್ನೂ ಎರಡು ಮ್ಯಾಚ್ಗಳಿವೆ. ಮೊದಲ ಪಂದ್ಯದಲ್ಲಿನ ಸಕಾರಾತ್ಮಕ ಅಂಶಗಳನ್ನು ತೆಗೆದುಕೊಂಡು ನಾವು ಮುಂದುವರೆಯುತ್ತೇವೆ. ಈ ಹಿಂದೆ ಕೂಡ ನಾವು ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದೆವು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಒಂದು ಪಂದ್ಯದಲ್ಲಿ ಸೋತು, ಉಳಿದ ನಾಲ್ಕು ಪಂದ್ಯಗಳನ್ನು ಗೆದ್ದಿದ್ದೇವೆ. ಹಾಗಾಗಿ ಸರಣಿ ಹಿನ್ನಡೆ ಎನ್ನುವುದು ನಮಗೆ ಹೊಸದೇನು ಅಲ್ಲ. ಅಲ್ಲದೆ ಮುಂದಿನ ಎರಡು ಟೆಸ್ಟ್ ಪಂದ್ಯಗಳ ಮೂಲಕ ನಾವು ಕಮ್ಬ್ಯಾಕ್ ಮಾಡುತ್ತೇವೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.