ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುತ್ತಿರುವ ಭಾರತ (India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಟೆಸ್ಟ್ ಸರಣಿಯ (Test Series) ಮೊದಲ ಪಂದ್ಯದಲ್ಲಿ ಆತಿಥೇಯರು ಸೋಲುಂಡಿದ್ದು, ಟೀಮ್ ಇಂಡಿಯಾಗೆ (Team India) ಭಾರೀ ಮುಖಭಂಗವಾಗಿದೆ. ಈ ಮೂಲಕ ನ್ಯೂಜಿಲೆಂಡ್ 1-0 ಮುನ್ನಡೆಯನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮ (Rohit Sharma) ನಿರ್ಧಾರವನ್ನು ತಪ್ಪು ಎಂದು ಸಾಬೀತು ಮಾಡಿದ ಕಿವೀಸ್ (NewZealand) ಬೌಲರ್ಗಳು ಮೊದಲ ಇನ್ನಿಂಗ್ಸ್ನಲ್ಲಿ ಆತೀತೇಯರನ್ನು 46 ರನ್ಗಳಿಗೆ ಕಟ್ಟಿ ಹಾಕಿದರು. ಇದಾದ ಬಳಿಕ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಬೌಲರ್ಗಳು ರಚಿನ್ ರವೀಂದ್ರ (134 ರನ್), ಡೆವೊನ್ ಕಾನ್ವೆ (91 ರನ್) ಉಪಯುಕ್ತ ಆಟದ ಫಲವಾಗಿ 402 ರನ್ ಕಲೆಹಾಕಿ ಆಲೌಟ್ ಆಯಿತು.
ಇದನ್ನೂ ಓದಿ: Bigg Boss ಶುರುವಾದ ಮೂರನೇ ವಾರಕ್ಕೆ Wild Card ಎಂಟ್ರಿ; ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸಿಕ್ತು ವಿಶೇಷ ಅಧಿಕಾರ
356 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡವು (Team India) ನಾಯಕ ರೋಹಿತ್ ಶರ್ಮ (Rohit Sharma) (52 ರನ್, 63 ಎಸೆತ, 8 ಬೌಂಡರಿ, 1 ಸಿಕ್ಸರ್), ವಿರಾಟ್ ಕೊಹ್ಲಿ (Virat Kohli) (70 ರನ್, 102 ಎಸೆತ, 8 ಬೌಂಡರಿ, 1 ಸಿಕ್ಸರ್), ಸರ್ಫರಾಜ್ ಖಾನ್ (Sarfaraz Khan) (150 ರನ್, 195 ಎಸೆತ, 18 ಬೌಂಡರಿ, 3 ಸಿಕ್ಸರ್), ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ (Rishabh Pant) (99 ರನ್, 105 ಎಸತ, 9 ಬೌಂಡರಿ, 5 ಸಿಕ್ಸರ್) ದಿಟ್ಟ ಪ್ರತಿರೋಧದ ಫಲವಾಗಿ 462 ರನ್ಗಳಿಗೆ ಆಲೌಟ್ ಆಯಿತು,
107 ರನ್ಗಳ ಸುಲಭ ಗುರಿಯನ್ನು ಪಡೆದ ಕಿವೀಸ್ ಪಡೆ (NewZealand) ಆರಂಭಿಕ ಆಘಾತದ ಹೊರತಾಗಿಯೂ 2 ವಿಕೆಟ್ ನಷ್ಟಕ್ಕೆ 107 ರನ್ಗಳಿಸಿ ಗೆಲುವಿನ ನಗೆ ಬೀರಿದರು. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (Test Series) 1-0 ಮುನ್ನಡೆಯನ್ನು ಸಾಧಿಸಿದರು. ಈ ಮೂಲಕ ಟೀಮ್ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಕಿವೀಸ್ ಪಡೆ ಬ್ರೇಕ್ ಹಾಕಿದ್ದು, ಟೀಮ್ ಇಂಡಿಯಾಗೆ ಇದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.